ವಾರಣಾಸಿ:ಸೋದರ ಅಳಿಯನೊಬ್ಬ ತನ್ನ ಮಾವನಿಗೇ ಗುಂಡಿಟ್ಟು ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಘಟನೆ ನಡೆದು ಐದೇ ದಿನದಲ್ಲಿ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ.
ಇದನ್ನೂ ಓದಿ:‘ಮೆಟ್ರೋ, ಬಸ್ಸಿನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ, ಫ್ರೀ ನೀರು, ಕರೆಂಟ್…​’ ಬಿಜೆಪಿಯ ಭರವಸೆ
ನವೆಂಬರ್​ 21ರಂದು ಚೊಟ್ಟಾಲಾಲ್ಪುರ ಹೆಸರಿನ ಊರಿನಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಲಾಗಿತ್ತು. ಕೊಲೆಯಾದಾಗಿನಿಂದ ಆತನ ಸೋದರ ಅಳಿಯ ಫರೀದ್​ ಖಾನ್​ ಕಾಣೆಯಾಗಿದ್ದ. ವಾರಣಾಸಿಯಿಂದ ಹೊರಟಿದ್ದ ಆತ ನೇಪಾಳಕ್ಕೆ ಹೋಗಿ ನೆಲೆಸಿದ್ದ ಎನ್ನಲಾಗಿದೆ. ಮೂರ್ನಾಲ್ಕು ದಿನ ಕಳೆದ ನಂತರ ತನ್ನ ಬಳಿ ಇದ್ದ ಹಣವೆಲ್ಲ ಖಾಲಿಯಾದ ಹಿನ್ನೆಲೆಯಲ್ಲಿ ಆತ ವಾರಣಾಸಿಗೆ ವಾಪಾಸಾಗಿದ್ದಾನೆ. ಆ ಸಮಯದಲ್ಲಿ ಆತನನ್ನು ಬಂಧಿಸಿದ ಪೊಲೀಸರು ಕೊಲೆಯ ಬಗ್ಗೆ ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ:ನಮ್ಮಪ್ಪಂದು ಅಲ್ಲ, ನಿಮ್ಮಪ್ಪಂದು ಅಲ್ಲ! ಜಟಾಪಟಿಗೆ ಸಾಕ್ಷಿಯಾದ ಹಾಸನ ಜಿಪಂ ಸಭಾಂಗಣ
ಫರೀದ್​ ಖಾನ್​ನ ತಂದೆಯನ್ನು ಆತನ ಸೋದರ ಮಾವ 26 ವರ್ಷಗಳ ಹಿಂದೆ ಕೊಲೆ ಮಾಡಿದ್ದನಂತೆ. ಆ ಸೇಡು ಆತನಿಗೆ 26 ವರ್ಷಗಳಿಂದಲೂ ಕಾಡುತ್ತಿತ್ತಂತೆ. ಅದೇ ಹಿನ್ನೆಲೆಯಲ್ಲಿ ಮಾವನ ಕೊಲೆಯನ್ನು ಮಾಡಿದೆ ಎಂದು ಫರೀದ್​ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. (ಏಜೆನ್ಸೀಸ್​)
ಹೆಂಡತಿ ಪ್ರೀತಿಯಿಂದ ಮಾಡಿಕೊಟ್ಟ ಟೀ ಕುಡಿದ ಪತಿ ಸಾವು, ಸ್ವಲ್ಪ ಹೊತ್ತಲ್ಲೇ ಆಸ್ಪತ್ರೆ ಸೇರಿದ ಪತ್ನಿ

VIDEO| ನಾನು ಸಾಯುವ ಸಾಧ್ಯತೆಯಿದೆ ಎಂದು ಭಾವುಕರಾದ ರಾಣಾ: ಕಣ್ಣೀರಿಟ್ಟ ಸಮಂತಾ, ವೀಕ್ಷಕರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 10 =
Remember me
