ವಾಷಿಂಗ್ಟನ್:ಕರೊನಾವೈರಸ್ ಪ್ರಕರಣಗಳು ದಿನೆ ದಿನೆ ಹೆಚ್ಚುತ್ತಿದ್ದು, ಈ ವಿಷಮ ಸ್ಥಿತಿಯಲ್ಲಿ ಹ್ಯಾಂಡ್ ಸ್ಯಾನಿಟೈಸರ್​​ಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ನಕಲಿ ಉತ್ಪನ್ನಗಳೂ ಎಗ್ಗಿಲ್ಲದೆ ಮಾರುಕಟ್ಟೆಗೆ ನುಗ್ಗುತ್ತಿವೆ.ವಿಲಕ್ಷಣ ಘಟನೆಯೊಂದರಲ್ಲಿ, ಅಮೆರಿಕದ ವ್ಯಕ್ತಿಯೊಬ್ಬ ಬ್ಯಾಂಕ್​​​ವೊಂದಕ್ಕೆ ನುಗ್ಗಿ ಹ್ಯಾಂಡ್ ಸ್ಯಾನಿಟೈಸರ್ ಕದ್ದಿದ್ದಾನೆ. ಒಂದೇ ರಾತ್ರಿ ಆತ ಮೂರು ಕಟ್ಟಡಗಳಿಗೆ ನುಗ್ಗಿದ್ದು, ಸರಣಿಗಳ್ಳತನದ ಆರೋಪದ ಮೇಲೆ ಆತನನ್ನು ಪೊಲೀಸರು ಸ್ಥಳೀಯ ಜೈಲಿಗಟ್ಟಿದ್ದಾರೆ.ಆತನ ಹೆಸರು ಮಾರ್ಕ್ ಗ್ರೇ. ವಯಸ್ಸು39 ವರ್ಷ.
ಇದನ್ನೂ ಓದಿ:ಸಂಸತ್ ಕ್ಯಾಂಟೀನ್​​ಗಳಲ್ಲಿ ಇನ್ಮುಂದೆ ಕಷಾಯ ಪೂರೈಕೆ
ಗ್ರೇ ಮಂಗಳವಾರ ಮಧ್ಯರಾತ್ರಿ ಪಿಯರ್ಸ್ ಸ್ಟ್ರೀಟ್‌ನ ಸೆಕ್ಯುರಿಟಿ ನ್ಯಾಷನಲ್ ಬ್ಯಾಂಕ್​​ಗೆ ನುಗ್ಗಿ ಗಾಜಿನ ಬಾಗಿಲನ್ನು ಒಡೆದು, ಹ್ಯಾಂಡ್ ಸ್ಯಾನಿಟೈಸರ್ ಕದ್ದು ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.ಬೆಳಗ್ಗೆ 1: 45 ಕ್ಕೆ ಆತ ನೆಬ್ರಸ್ಕಾ ಸ್ಟ್ರೀಟ್‌ನಲ್ಲಿರುವ ಕೌನ್ಸೆಲಿಂಗ್ ಕೇಂದ್ರದ ಗಾಜಿನ ಬಾಗಿಲನ್ನು ಒಡೆದು ಹಣ ಹುಡುಕಿದ್ದಾನೆ. ಆದರೆ ಅಲ್ಲಿ ಕಳ್ಳತನವಾದ ಬಗ್ಗೆ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.ಬೆಳಿಗ್ಗೆ 5: 45 ಕ್ಕೆ ಗ್ರೇ ಇಟಾಲಿಯನ್ ರೆಸ್ಟೋರೆಂಟ್‌ಗೆ ನುಗ್ಗಿದ್ದ. ನಗರ ಪೊಲೀಸರು ಅವನನ್ನು ಉಪಾಹಾರ ಗೃಹದಲ್ಲಿ ಕಂಡು ಬಂಧಿಸಿದ್ದಾರೆ.
ಐಎಎಫ್​ನಲ್ಲಿ ಅಪಘಾತವಾಗಿ ಸೀಳು ಬಿಟ್ಟಿತ್ತು ತಲೆಬುರುಡೆ; ಆದರೂ ಕಾಕ್​ಪಿಟ್​ಗೆ ಮರಳಿದ್ದರು ಕ್ಯಾಪ್ಟನ್​ ದೀಪಕ್​ ಸಾಠೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + eight =
Remember me
