ಹರಿಯಾಣ:ಕೆಲವರು ಮದುವೆಯಾದ ನಂತರವೂ ವಿವಾಹೇತರ ಸಂಬಂಧವನ್ನೂ ಹೊಂದುವ ಮೂಲಕ ತಮ್ಮ ಸುಂದರವಾದ ಸಂಸಾರವನ್ನು ಹಾಳು ಮಾಡಿಕೊಳ್ಳುತ್ತಾರೆ. ಅನೈತಿಕ ಸಂಬಂಧವೂ ಅನೇಕರ ಜೀವನ ಕೆಡೆಸಿದ್ದು, ಕೆಲವೊಮ್ಮೆ ಈ ವಿಚಾರಗಳಿಗೆ ಕೊಲೆಗಳು ಸಹ ನಡೆದಿವೆ. ಇದೀಗ ಇದಕ್ಕೆ ಪೂರಕವೆಂಬಂತೆ ತನ್ನ ಪತ್ನಿ ಬೇರೊಬ್ಬನ ಜೊತೆ ತಿರುಗಾಡುತ್ತಿರುವುದನ್ನು ನೋಡಿದ ಪತಿ ಆಕೆಯ ಮೇಲೆ ನಡುರಸ್ತೆಯಲ್ಲೇ ಅಮಾನುಷವಾಗಿ ಹಲ್ಲೆ ಮಾಡಿರುವ ಘಟನೆ ಹರಿಯಾಣದ ಪಂಚ್​ಕುಲಾದಲ್ಲಿ ನಡೆದಿದೆ.
ಪತಿ ಬೇಸ್​ಬಾಲ್​ ಬ್ಯಾಟ್​ನಿಂದ ಪತ್ನಿಯ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಪರ-ವಿರೋಧದ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
पंचकूला में एक पति द्वारा पत्नी से मारपीट करने का मामला आया सामने।पति द्वारा पत्नी को शक के आधार पर बेसबॉल से पीटने का वीडियो आया सामने।पीड़ित महिला की शिकायत कर सेक्टर 25 चोंकि पुलिस ने मामला दर्ज कर आरोपी को पति को किया गिरफ्तार।pic.twitter.com/sHncFca5Zp
ಇದನ್ನೂ ಓದಿ:ಐಫೋನ್​ ಕೊಡಿಸಲಿಲ್ಲವೆಂದು ಮನೆ ಬಿಟ್ಟ ಬಾಲಕ; ಮುಗಿಲು ಮುಟ್ಟಿದ ಆಕ್ರಂದನ
ವೈರಲ್​ ಆಗಿರುವ ವಿಡಿಯೋದಲ್ಲಿ ತನ್ನ ಪತ್ನಿ ಬೇರೊಬ್ಬನ ಜೊತೆ ಕಾರಿನಲ್ಲಿ ತಿರುಗಾಡುತ್ತಿರುವುದನ್ನು ನೋಡಿದ್ದಾನೆ. ಬಳಿಕ ಫಾಲೋ ಮಾಡಿ ಪಾರ್ಕ್​ ಒಂದರಲ್ಲಿ ಇಬ್ಬರು ಕುಳಿತಿರುವಾಗ ಏಕಾಏಕಿ ಕಾರಿನ ಗಾಜನ್ನು ಹೊಡೆದು ಪತ್ನಿಯ ಮೇಲೆ ಬೇಸ್​ಬಾಲ್​ ಬ್ಯಾಟಿನಿಂದ ಹಲ್ಲೆ ಮಾಡುತ್ತಾನೆ. ಈ ವೇಳೆ ಮಹಿಳೆ ಜೊತೆಯಲ್ಲಿದ್ದ ವ್ಯಕ್ತಿ ಆತನನ್ನು ತಡೆಯಲು ಮುಂದಾಗದೆ ಸುಮ್ಮನೆ ನಿಂತಿರುವುದನ್ನು ನೋಡಬಹುದಾಗಿದೆ. ಇದನ್ನು ನೋಡಿದ ಪಾರ್ಕ್​ನಲ್ಲಿದ್ದ ಜನ ಮಧ್ಯಪ್ರವೇಶಿಸಿ ಗಲಾಟೆಯನ್ನು ಬಿಡಿಸಿ ಬುದ್ಧಿವಾದ ಹೇಳುವುದನ್ನು ವೈರಲ್​ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.
ಇತ್ತ ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಪೊಲೀಸರು ಹಲ್ಲೆಗೊಳಗಾದ ಮಹಿಳೆಯ ಪತಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಇತ್ತ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಹಲವರು ಮಹಿಳೆ ಮೇಲೆ ಹಲ್ಲೆ ಮಾಡಿರುವುದನ್ನು ಖಂಡಿಸಿದ್ದಾರೆ. ಕೆಲವರು ಮಹಿಳೆಯ ಪತಿ ನಡೆದುಕೊಂಡ ರೀತಿಯನ್ನು ಬೆಂಬಲಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
