ಭೋಪಾಲ್:ಅಧಿಕಾರಿಗಳ ಅಚಾತುರ್ಯದಿಂದ ವ್ಯಕ್ತಿಯೋರ್ವ ತನ್ನ ಒಂದು ವರ್ಷದ ಮುಗುವನ್ನು ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹ್ಹಾಣ್ ಅವರಿದ್ದ ವೇದಿಕೆ ಮೇಲೆ ಎಸೆದು ಅಸಹಾಯಕತೆ ಹೊರಹಾಕಿರುವ ಘಟನೆ ನಡೆದಿದೆ.
ಮಧ್ಯಪ್ರದೇಶದ ಸಾಗರ್​ ಜಿಲ್ಲೆಯಲ್ಲಿ ಘಟನೆ ನಡೆದಿದ್ದು ತನ್ನ ಮಗುವಿನ ಚಿಕಿತ್ಸೆಗೆ ಹಣವನ್ನು ಭರಿಸಲಾಗದೇ ಈ ರೀತಿ ಮಾಡಿದ್ಧಾಗಿ ವ್ಯಕ್ತಿ ಒಪ್ಪಿಕೊಂಡಿದ್ಧಾನೆ.
ವೃತ್ತಿಯಲ್ಲಿ ಕೂಲಿ ಕೆಲಸಗಾರರಾಗಿರುವ ಮುಖೇಶ್​ ಪಟೇಲ್​ ಹಾಗೂ ಆತನ ಪತ್ನಿ ನೇಹಾ ಪುತ್ರ ನರೇಶ್​ನೊಂದಿಗೆ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಭಅಗವಹಿಸುವ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.
ತಮ್ಮ ಮಗುವಿನ ಜೀವ ಉಳಿಸುವ ಸಲುವಾಗಿ ಈ ರೀತಿ ಮಾಡಬೇಕಾಯಿತು. ವೇದಿಕೆ ಮೇಲೆ ಎಸೆದ ನನ್ನ ಮಗುವಿನ ಹೃದಯದಲ್ಲಿ ಒಂದು ಚಿಕ್ಕ ರಂದ್ರವಿದೆ ಅದರ ಚಿಕಿತ್ಸೆಗೆ ದುಡ್ಡು ಭರಿಸಲು ಆಗದೇ ಮುಖ್ಯಮಂತ್ರಿಗಳ ಗಮನ ಸೆಳೆಯಲು ಈ ರೀತಿ ಮಾಡಿದ್ದಾಗಿ ಹೇಳಿದ್ದಾನೆ.
ಇದನ್ನೂ ಓದಿ:VIDEO| ನೋಡ ನೋಡುತ್ತಿದ್ದಂತೆ ಇಬ್ಬರನ್ನು ನುಂಗಿದ ನೀರಾನೆ!
ಮಗು ವೇದಿಕೆ ಮೇಲೆ ಬಿದ್ದು ಅಳುತ್ತಿರುವುದನ್ನು ಗಮನಿಸಿದ ಚೌಹಾಣ್​ ಒಂದು ಕ್ಷಣ ದಿಗ್ಭ್ರಮೆಗೊಂಡರು ಮತ್ತು ಪೋಷಕರನ್ನು ತಮ್ಮ ಬಳಿ ಕರೆಸಿಕೊಂಡು ಮಾಹಿತಿ ಪಡೆದರು.
ಕುಟುಂಬಸ್ಥರಿಂದ ಮಾಹಿತಿ ಪಡೆದ ಸಿಎಂ ಈ ರೀತಿ ಮಾಡದಂತೆ ಬುದ್ದಿವಾದ ಹೇಳಿ ಮಗುವಿನ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಆಶ್ವಾಸನೆ ನೀಡಿದ್ಧಾರೆ. ವಿವರವನ್ನು ತಮ್ಮ ಕಚೇರಿ ಸಿಬ್ಬಂದಿಗೆ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ಧಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
