ನವದೆಹಲಿ:ವೇಗದಲ್ಲಿ ಚಲಿಸುತ್ತಿದ್ದ ರೇಂಜ್​ ರೋವರ್​ ಕಾರಿನಿಂದ ರಸ್ತೆಯುದ್ದಕ್ಕೂ ವ್ಯಕ್ತಿಯೊಬ್ಬ ಹಣದ ಮಳೆ ಸುರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ಬೇರೊಂದು ಕಾರಿನಲ್ಲಿ ಬರುತ್ತಿದ್ದವರು ವಿಡಿಯೋ ರೆಕಾರ್ಡ್​ ಮಾಡಿದ್ದಾರೆ. ನೋಯ್ಡಾದ ಸೆಕ್ಟರ್​ 20ರಲ್ಲಿ ರಾತ್ರಿ ವೇಳೆ ಕಾರು ಸಂಚರಿಸುತ್ತಿದ್ದ ಸಮಯದಲ್ಲಿ ಹಣದ ಮಳೆಯನ್ನು ಸುರಿಸಲಾಗಿದೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ನೋಯ್ಡಾ ಟ್ರಾಫಿಕ್ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಕ್ರಮ ತೆಗೆದುಕೊಂಡಿದ್ದಾರೆ.
ವರದಿಯೊಂದರ ಪ್ರಕಾರ ವಿವಿಧ ನಿಯಮಗಳ ಉಲ್ಲಂಘನೆ ಉಲ್ಲೇಖಿಸಿ ಟ್ರಾಫಿಕ್ ಪೊಲೀಸರು ಕಾರಿನ ಮಾಲೀಕರಿಗೆ 21 ಸಾವಿರ ರೂ. ದಂಡ ವಿಧಿಸಿದ್ದಾರೆ. ಆದರೆ, ರಸ್ತೆ ಮೇಲೆ ಹಣ ಸುರಿದಿರುವ ವ್ಯಕ್ತಿಯ ಬಗ್ಗೆ ಪೊಲೀಸರು ಯಾವುದೇ ಮಾಹಿತಿ ನೀಡಿಲ್ಲ. ವಿಡಿಯೋದಲ್ಲೂ ವ್ಯಕ್ತಿಯ ಮುಖವು ಸ್ಪಷ್ಟವಾಗಿಲ್ಲವಾದರೂ, ಅವರು ಕೋಟ್ ಧರಿಸಿರುವುದನ್ನು ಕಾಣಬಹುದು.
नोएडा की सड़क पर दिखा रहीसी का परचम लग्जरी गाड़ी में सवार नोटो को उड़ाता दिखा शक्स दूसरे कार से बनाई जा रही रील विडियो वीडियो सोशल मीडिया पर जमकर हो रहा है वायरल सेक्टर 20 क्षेत्र का बताया जा है वायरल@Uppolice@CP_Noida@dgpup@noidatrafficpic.twitter.com/ffwAGzszOM
— Raajesh Khatri (@KhatriRajeesh)February 22, 2024

ರೇಂಜ್ ರೋವರ್‌ಗೆ ಸಮಾನಾಗಿ ಚಲಿಸುತ್ತಿದ್ದ ಮತ್ತೊಂದು ವಾಹನದಿಂದ ಯಾರೋ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಹಣ ಚೆಲ್ಲಿದ ಅಪಾಯಕಾರಿ ನಡವಳಿಕೆಯನ್ನು ಹಲವಾರು ಜನರು ಖಂಡಿಸಿದ್ದಾರೆ. ಈ ಕ್ರಮವು ರಸ್ತೆಯಲ್ಲಿರುವ ಇತರ ನಾಗರಿಕರ ಸುರಕ್ಷತೆಗೆ ಅಪಾಯವಾಗಿದೆ ಎಂದು ನೆಟ್ಟಿಗರು ಟೀಕಿಸಿದ್ದಾರೆ.(ಏಜೆನ್ಸೀಸ್​)
ಅನಂತ್ ಅಂಬಾನಿ-ರಾಧಿಕಾ ಮದುವೆ ಪೂರ್ವ ಕಾರ್ಯಕ್ರಮಕ್ಕೆ ಜಾಮ್​ನಗರದಲ್ಲಿ ಸಿದ್ಧವಾಗಿದೆ ಭೂಲೋಕದ ಸ್ವರ್ಗ!

ಬಾಗಲಕೋಟೆಯ ಜಾನಪದ ಗಾಯಕನಿಗೆ ಪ್ರಧಾನಿ ಮೋದಿ ಬಹುಪರಾಕ್​! ಇಲ್ಲಿದೆ ವೆಂಕಪ್ಪ ಸುಗತೇಕರ್ ಪರಿಚಯ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eight − 2 =
Remember me
