ಲಖನೌ:ಎರಡು ವರ್ಷಗಳ ಹಿಂದೆ ದಾಂಪತ್ಯ ಜೀವನವನ್ನು ಆರಂಭಿಸಿದ್ದ ಮಹಿಳೆಯೊಬ್ಬಳು ಇದೀಗ ಬೆಟ್ವಾ ನದಿಯಲ್ಲಿ ಶವವಾಗಿ ತೇಲಿರುವ ಘಟನೆ ನಡೆದಿದೆ. ಪ್ರಕರಣ ದಾಖಲಾಗಿ ಮೂರೇ ದಿನಗಳಲ್ಲಿ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಹಮೀರ್​ಪುರದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಕಂಚನ್​ (21) ಎರಡು ವರ್ಷಗಳ ಹಿಂದೆ ಅಮಿತ್​ ಹೆಸರಿನ ವ್ಯಕ್ತಿಯನ್ನು ಮದುವೆಯಾಗಿದ್ದಳು. ಈ ದಂಪತಿಗೆ ಒಂದು ಗಂಡು ಮಗುವೂ ಇದೆ. ಇತ್ತೀಚೆಗೆ ದಾಂಪತ್ಯದಲ್ಲಿ ಕಲಹ ಮೂಡಿದ್ದು, ಕಂಚನ್​ ತನ್ನ ತವರು ಮನೆಗೆ ತೆರಳಿದ್ದಾಳೆ.
ಹೆಂಡತಿಯ ಮನವೊಲಿಸಲು ನಿರ್ಧರಿಸಿದ ಅಮಿತ್​, ಇತ್ತೀಚೆಗೆ ಆಕೆಯ ತವರು ಮನೆಯ ಬಳಿ ಹೋಗಿದ್ದು, ಬೆಟ್ವಾ ನದಿ ದಂಡೆ ಹತ್ತಿರ ಬಾ ಎಂದು ಕರೆದಿದ್ದಾನೆ. ಪ್ರೀತಿಯಿಂದ ಮಾತನಾಡಿದ ಗಂಡನ ಕರೆಗೆ ಓಗೊಟ್ಟು ಕಂಚನ್​ ಅಲ್ಲಿಗೆ ತೆರಳಿದ್ದಾಳೆ. ನಂತರ ಅವರಿಬ್ಬರು ಅಲ್ಲಿಯೇ ದೈಹಿಕ ಸಂಪರ್ಕವನ್ನೂ ಹೊಂದಿದ್ದಾನೆ. ಅದಾದ ನಂತರ ಕಂಚನ್​ ಕಾಣೆಯಾಗಿದ್ದಾಳೆ. ಈ ವಿಚಾರವಾಗಿ ಸ್ವತಃ ಆಕೆಯ ಗಂಡನೇ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾನೆ.
ಕಂಚನ್​ ಹುಡುಕಾಟ ಆರಂಭಿಸಿದ ಪೊಲೀಸರಿಗೆ ಆಕೆಯ ಮೃತದೇಹ ನದಿ ದಂಡೆಯಲ್ಲಿ ಸಿಕ್ಕಿದೆ. ಅದಾದ ನಂತರ ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರಿಗೆ ಅಮಿತ್​ ಮೇಲೆ ಅನುಮಾನಗಳು ಶುರುವಾಗಿದೆ. ಸರಿಯಾದ ರೀತಿಯಲ್ಲಿ ಬಾಯಿ ಬಿಡಿಸಿದಾಗ ಆತ ನಿಜ ಘಟನೆಯನ್ನು ವಿವರಿಸಿದ್ದಾನೆ. ಆಕೆ ಮೇಲೆ ಕೋಪವಿದ್ದಿದ್ದಕ್ಕೇ ನದಿ ದಂಡೆಗೆ ಕರೆಸಿಕೊಂಡು, ಕಾಮದ ಆಸೆ ತೀರಿಸಿಕೊಂಡು ನಂತರ ಕೊಲೆ ಮಾಡಿ ನದಿಗೆ ಎಸೆದೆ ಎಂದು ಹೇಳಿದ್ದಾನೆ. ಬಾಳಿ ಬದುಕಬೇಕಿದ್ದ ಕಂಚನ್​ನನ್ನು ಕೊಂದ ಅಮಿತ್​ ಇದೀಗ ಜೈಲು ಸೇರಿದ್ದಾನೆ. (ಏಜೆನ್ಸೀಸ್​)
ಹಿಮ ಯಮನಿಗೆ ಎಂಟು ಬಲಿ! 160ಕ್ಕೂ ಹೆಚ್ಚು ಮಂದಿ ಜಲಸಮಾಧಿಯಾಗಿರುವ ಶಂಕೆ

ಉತ್ತರಾಖಂಡದಲ್ಲಿ ಹಿಮಸ್ಫೋಟ- ಅಪಾಯದಂಚಿನಲ್ಲಿ ಶ್ರೀನಗರ, ಹರಿದ್ವಾರ, ರಿಷಿಕೇಶ ಪ್ರವಾಸಿತಾಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
