ತಿರುವನಂತಪುರಂ:ಪ್ರೀತಿಯಿಂದ ಸಾಕಿದ ನಾಯಿಯನ್ನು ಹೇಗೆ ನೋಡಿಕೊಳ್ಳಬೇಕು? ತಮ್ಮ ಮಕ್ಕಳಿಗಿಂತ ಹೆಚ್ಚು ಪ್ರೀತಿಯಿಂದ ನಾಯಿಯನ್ನು ಸಾಕುವವರೂ ಇದ್ದಾರೆ. ಆದರೆ ಇಲ್ಲೊಬ್ಬ ದುಷ್ಟ ತಾನು ಪ್ರೀತಿಯಿಂದ ಸಾಕಿದ್ದ ನಾಯಿಯನ್ನ ತನ್ನ ಕಾರಿನ ಹಿಂದೆ ಕಟ್ಟಿ ರಸ್ತೆಯಲ್ಲಿ ಎಳೆದುಕೊಂಡು ಹೋಗಿದ್ದಾನೆ. ಅದಕ್ಕೊಂದು ಕಾರಣವನ್ನೂ ಆತ ಕೊಟ್ಟಿದ್ದಾನೆ.
ಇದನ್ನೂ ಓದಿ:ಎರಡು ತಿಂಗಳ ಹಿಂದೆ ಮೂರು ಮಕ್ಕಳ ಜತೆ ಕಾಣೆಯಾಗಿದ್ದ ತಾಯಿ ಕಾಡಿನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆ!
ಕೇರಳದ ಎರ್ನಾಕುಲಂ ಜಿಲ್ಲೆಯ ಅತ್ತಾಣಿ ಬಳಿ ವಾಸವಿರುವ ಯೂಸುಫ್​ ಇಂತಹ ದುಷ್ಕೃತ್ಯ ಎಸಗಿರುವ ಮನುಷ್ಯ. ಈತ ಕಾರಿನ ಚಾಲಕನಾಗಿ ಕೆಲಸ ಮಾಡುತ್ತಾನೆ. ಇತ್ತೀಚೆಗೆ ತಾನು ಸಾಕಿದ್ದ ನಾಯಿಯ ಕುತ್ತಿಗೆಗೆ ಹಗ್ಗ ಕಟ್ಟಿದ ಯೂಸುಫ್​ ಅದನ್ನು ತನ್ನ ಕಾರಿನ ಹಿಂದೆ ಕಟ್ಟಿದ್ದಾನೆ. ನಂತರ ಗಾಡಿ ಸ್ಟಾರ್ಟ್ ಮಾಡಿ ಓಡಿಸಿಕೊಂಡು ಹೋಗಿದ್ದಾನೆ. ಗಾಡಿಯ ಹಿಂದಿದ್ದ ನಾಯಿ ನರಳುತ್ತ ಗಾಡಿ ಹಿಂದೆ ಕಾಲೆಳೆದುಕೊಂಡು ಹೋಗಿದೆ.
ಯೂಸುಫ್​ ಈ ರೀತಿ ಮಾಡುತ್ತಿದ್ದನ್ನು ಆತನ ಹಿಂದೆ ಬೈಕ್​ನಲ್ಲಿ ಬರುತ್ತಿದ್ದ ಅನಿಲ್​ ಗುರುತಿಸಿದ್ದಾನೆ. ಈ ದುಷ್ಕೃತ್ಯವನ್ನು ಆತ ವಿಡಿಯೋ ಮಾಡಿಕೊಂಡಿದ್ದಾನೆ. ನಂತರ ಯೂಸುಫ್​ನನ್ನು ತಡೆದು ನಾಯಿಯನ್ನು ರಕ್ಷಿಸಿದ್ದಾರೆ. ಇದೀಗ ಯೂಸುಫ್​ ವಿರುದ್ಧ ಪೊಲೀಸ್​ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇದನ್ನೂ ಓದಿ:ಕಾಂಗ್ರೆಸ್​ ಬಿಜೆಪಿ ಒಟ್ಟಾಗಿದಾವೆ! ನಾವು ಮೈತ್ರಿ ಮುರೀತೀವೆ ಎಂದ ಮೈತ್ರಿ ಪಕ್ಷ
ನನಗೆ ನಾಯಿ ಎಂದರೆ ಇಷ್ಟ. ಅದಕ್ಕೆಂದೇ ಈ ನಾಯಿಯನ್ನು ತಂದು ಸಾಕಿದ್ದೆ. ಆದರೆ ನಮ್ಮ ಮನೆಯವರಿಗೆ ನಾಯಿಯನ್ನು ಕಂಡರೆ ಆಗುತ್ತಿರಲಿಲ್ಲ. ಈ ನಾಯಿಯನ್ನು ಎಲ್ಲಾದರೂ ಬಿಟ್ಟು ಬರುವಂತೆ ಹೇಳಿದರು. ಕಾರಿನ ಒಳಗೆ ನಾಯಿಯನ್ನು ಸೇರಿಸಬೇಡ ಎಂದೂ ಹೇಳಿದರು. ಅದಕ್ಕೆಂದು ನಾನು ನಾಯಿಯನ್ನು ಕಾರಿನ ಹಿಂದೆ ಕಟ್ಟಿ ಎಳೆದೊಯ್ದೆ ಎಂದು ಯೂಸುಫ್​ ತಪ್ಪೊಪ್ಪಿಕೊಂಡಿದ್ದಾನೆ. (ಏಜೆನ್ಸೀಸ್​)
ಮಾನಸಿಕ ಅಸ್ವಸ್ಥ ಗಂಡನೆದುರೇ ನಡೆಯುತ್ತಿತ್ತು ಅತ್ತಿಗೆಯ ಅಫೇರ್​! ವಿಷಯ ಗೊತ್ತಿದ್ದ ಮೈದುನನಿಗೆ ಅತ್ತಿಗೆ ಮಾಡಿದ್ದೇನು?

8 ವರ್ಷ ಪ್ರೀತಿಸಿ ಮದುವೆಯಾದ ತಂಗಿ; ಮನೆಗೆ ಕರೆಸಿದ ಅಣ್ಣ ಎಂತಹ ಗಿಫ್ಟ್​ ಕೊಟ್ಟ ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − one =
Remember me
