ನವದೆಹಲಿ:ಪರಪುರುಷನೊಂದಿಗೆ ಪತ್ನಿಯನ್ನು ಕಂಡ ಪತಿ ಇಬ್ಬರನ್ನೂ ಕಂಬಕ್ಕೆ ಕಟ್ಟಿ ಮನಸೋ ಇಚ್ಛೆ ಥಳಿಸಿದ್ದಾನೆ. ಹೆಂಡತಿ ಸವಾಲೆಸೆದ ಹಾಗೆ ರೆಡ್​ ಹ್ಯಾಂಡೆಡ್​ ಆಗಿಯೇ ಇಬ್ಬರನ್ನೂ ಪತ್ತೆ ಹಚ್ಚಿದ ಗಂಡ, ಬಹಿರಂಗವಾಗಿ ತನ್ನ ಆಕ್ರೋಶವನ್ನು ಅವರಿಬ್ಬರ ಮೇಲೆ ತೀರಿಸಿಕೊಂಡಿದ್ದಾನೆ.
ಗುಜರಾತ್​ನ ಸೂರತ್​ನ ವಲ್ಸಡ್​ ಎಂಬ ಜಿಲ್ಲೆಯ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ. ಪತಿಗೆ ಪತ್ನಿಯ ಮೇಲೆ ಅನುಮಾನವಿದ್ದು, ಅದನ್ನು ವ್ಯಕ್ತಪಡಿಸಿದ್ದಕ್ಕೆ ಆಕೆ ಆತನನ್ನು ಬಿಟ್ಟು ತವರು ಮನೆಯಲ್ಲಿ ವಾಸಿಸಲು ಆರಂಭಿಸಿದ್ದಳು. ಕಜ್ಲಿ ಗ್ರಾಮದಲ್ಲಿರುವ ತಾಯಿಯ ಮನೆಗೆ ಹೋಗುವಾಗ ಪತ್ನಿ ಸವಾಲೆಸೆದು ಬೇರೆ ಹೋಗಿದ್ದಳು. ನನಗೆ ಅನೈತಿಕ ಸಂಬಂಧ ಇರುವುದೇ ಹೌದಾದರೆ ರೆಡ್​ ಹ್ಯಾಂಡೆಡ್​ ಆಗಿ ಪತ್ತೆ ಹಚ್ಚುವಂತೆ ಆಕೆ ಸವಾಲೆಸೆದಿದ್ದಳು.
ಇದನ್ನೂ ಓದಿ:ಹೆಂಡತಿಗೆ ಕಿರುಕುಳ ಕೊಟ್ಟು ಸಾವು ತಂದುಕೊಂಡ ಗಂಡ; ಆಕೆ ಹೊಡೆಯಿರಿ ಎಂದಳು, ಅವರಿಬ್ಬರು ಕೊಂದೇ ಬಿಟ್ಟರು…
ಹೀಗಾಗಿ ಪತಿ ದೂರವಿದ್ದರೂ ಆಕೆಯ ಚಲನವಲನಗಳ ಮೇಲೆ ಒಂದು ನಿಗಾ ಇರಿಸಿದ್ದ. ಭಾನುವಾರ ಆಕೆ ತನ್ನ ಪ್ರೇಮಿಯನ್ನು ಮನೆಯೊಂದಕ್ಕೆ ಕರೆಸಿಕೊಂಡಿದ್ದಳು. ಇದರ ಸುಳಿವು ಸಿಕ್ಕು ಅಲ್ಲಿಗೆ ಹೋದ ಪತಿ, ಇರಬಾರದ ಸ್ಥಿತಿಯಲ್ಲಿ ಇದ್ದ ಇಬ್ಬರನ್ನೂ ಕೋಣೆಯಿಂದ ಹೊರಕ್ಕೆ ಎಳೆದು ಕಂಬಕ್ಕೆ ಕಟ್ಟಿ ಥಳಿಸಿದ್ದಾನೆ. ನಂತರ ಸ್ಥಳೀಯರು ಬಂದು ತಪ್ಪಿಸಲು ಯತ್ನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಬಂದು ಪರಿಸ್ಥಿತಿ ತಿಳಿಗೊಳಿಸಿದಾಗ ಆಕೆ ಹಾಗೂ ಪ್ರೇಮಿ ದೂರು ನೀಡಲು ನಿರಾಕರಿಸಿದ್ದರು. ಪತಿಯನ್ನು ಮುಂಜಾಗರೂಕತೆ ಕ್ರಮವಾಗಿ ವಶಕ್ಕೆ ಪಡೆದಿದ್ದ ಪೊಲೀಸರು ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ವಾಟ್ಸ್​ಆ್ಯಪ್​, ಫೇಸ್​ಬುಕ್​, ಟ್ವಿಟರ್​ ನಾಳೆಯಿಂದ ಭಾರತದಲ್ಲಿ ನಿಷೇಧ?; ಸೋಷಿಯಲ್ ಮೀಡಿಯಾದಲ್ಲಿ ಗರಿಗೆದರಿದ ಕುತೂಹಲ!

ಟ್ವಿಟರ್​ನಲ್ಲಿ ಉಪೇಂದ್ರಗೆ 1 ಮಿಲಿಯನ್ ಫಾಲೋವರ್ಸ್; ಸ್ಯಾಂಡಲ್​ವುಡ್​​ನಲ್ಲಿ ಗರಿಷ್ಠ ಫಾಲೋವರ್ಸ್​ ಹೊಂದಿರುವ 2ನೇ ನಟ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × one =
Remember me
