ಕೋಲ್ಕತ:ಆತನ ಕುತ್ತಿಗೆಗೆ ತ್ರಿಶೂಲ ಚುಚ್ಚಲಾಗಿತ್ತು, ಹಾಗೆ ಚುಚ್ಚಿದ್ದ ತ್ರಿಶೂಲಸಹಿತ ಆತ ಚಿಕಿತ್ಸೆಗಾಗಿ 65 ಕಿಲೋಮೀಟರ್ ಪ್ರಯಾಣಿಸಿದ್ದಾನೆ. ಇಂಥದ್ದೊಂದು ವಿಚಿತ್ರ ಪ್ರಕರಣ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಕೋಲ್ಕತದ ಕಲ್ಯಾಣಿ ನಿವಾಸಿ ಭಾಸ್ಕರ್ ರಾಮ್​ ಗಾಯಗೊಂಡ ವ್ಯಕ್ತಿ. ಭಾನುವಾರ ರಾತ್ರಿ ಈ ಪ್ರಕರಣ ನಡೆದಿದೆ. ಕ್ಷುಲ್ಲಕ ವಿಷಯಕ್ಕೆ ಮನೆಯಲ್ಲಿ ಸೋದರಿ ಜತೆ ನಡೆದ ಜಗಳದಲ್ಲಿ ಈತ 150 ಹಳೆಯ ತ್ರಿಶೂಲವನ್ನು ತನ್ನ ಕುತ್ತಿಗೆಗೆ ಚುಚ್ಚಿಕೊಂಡಿದ್ದಾನೆ. ಅದು ಕುತ್ತಿಗೆಯಲ್ಲೇ ಸಿಕ್ಕಿಕೊಂಡಿತ್ತು.
ಬಳಿಕ ಆತ ಚಿಕಿತ್ಸೆಗಾಗಿ ಹಾಗೆ ಚುಚ್ಚಿಕೊಂಡಿದ್ದ ತ್ರಿಶೂಲಸಹಿತ 65 ಕಿಲೋಮೀಟರ್ ಕ್ರಮಿಸಿ, ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾನೆ. ಆತ ಆಸ್ಪತ್ರೆಗೆ ತೆರಳಿದ ಬಳಿಕ ಯಾವುದೇ ನೋವು ಇಲ್ಲ ಎಂದು ಕೂಡ ಹೇಳಿ ಅಚ್ಚರಿ ಮೂಡಿಸಿದ್ದಾನೆ. ಅದಾಗ್ಯೂ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಚುಚ್ಚಿಕೊಂಡಿದ್ದ ತ್ರಿಶೂಲವನ್ನು ತೆಗೆದಿದ್ದಾರೆ. ಸುಮಾರು 150 ವರ್ಷಗಳ ಇತಿಹಾಸ ಇರುವ ತ್ರಿಶೂಲವನ್ನು ಆತ ಮನೆಯಲ್ಲಿ ಇರಿಸಿಕೊಂಡು ಪೂಜಿಸುತ್ತಿದ್ದ ಎಂದು ಸಂಬಂಧಿಕರು ತಿಳಿಸಿದ್ದಾರೆ.

ಸಂಭ್ರಮದ ಸಾವು: ಮದುವೆ ಸಮಾರಂಭದಲ್ಲಿ ಕುಣಿಯುತ್ತ ಕುಣಿಯುತ್ತ ಕುಸಿದು ಬಿದ್ದು ಪ್ರಾಣ ಕಳ್ಕೊಂಡ!

ನೀರಿಗೆ ಬಿತ್ತು ಪ್ರಪೋಸ್ ಮಾಡಲೆಂದು ತಂದ ಉಂಗುರ; ಸಮುದ್ರಕ್ಕೇ ಧುಮುಕಿದ ಪ್ರಿಯಕರ: ಆಮೇಲೇನಾಯ್ತು!

ರಾಜ್ಯದಲ್ಲಿ ಒಂದೇ ದಿನ 108 ಇನ್​ಸ್ಪೆಕ್ಟರ್​ಗಳ ವರ್ಗಾವಣೆ; ನಿಮ್ಮೂರಿಗೆ ಯಾರು ಇನ್​ಸ್ಪೆಕ್ಟರ್? ಇಲ್ಲಿದೆ ಪೂರ್ತಿ ಪಟ್ಟಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 − two =
Remember me
