ನೊಯ್ಡಾ:ಲಾಕ್​ಡೌನ್​ ಅವಧಿ ಕೆಲ ಬಡ ಕುಟುಂಬಗಳ ಪಾಲಿಗೆ ನಿಜಕ್ಕೂ ವರದಾನವೆನಿಸಿದೆ ಎಂದರೆ ತಪ್ಪೇನಿಲ್ಲ. ಜೀವನವಿಡೀ ಗಳಿಸಿದ್ದನ್ನ ಮಕ್ಕಳ ಮದುವೆಗಾಗಿ ಖರ್ಚು ಮಾಡಬೇಕಾಗುತ್ತೆ. ಆದರೆ, ಲಾಕ್​ಡೌನ್​ನಲ್ಲಿ 50ಕ್ಕಿಂತ ಹೆಚ್ಚು ಜನರನ್ನು ಕರೆಯುವಂತಿಲ್ಲ. ಹೀಗಾಗಿ ಹೆಚ್ಚಿನ ಖರ್ಚಿಲ್ಲದೇ ಮದುವೆ ಮುಗಿಸಿ ಬಿಡಬಹುದು.
ಇಂಥದ್ದೇ ಯೋಚನೆ ಬಂದಿದ್ದು, ಉತ್ತರಪ್ರದೇಶದ ಗ್ರೇಟರ್​ ನೋಯ್ಡಾದ 42 ವರ್ಷದ ವ್ಯಕ್ತಿಗೆ. ಲಾಕ್​ಡೌನ್​ ಕಾರಣದಿಂದಾಗಿ ಉದ್ಯೋಗವನ್ನು ಕಳೆದುಕೊಂಡಿದ್ದ. ಸಾಲ ಬೇರೆ ಹೆಚ್ಚಾಗಿತ್ತು. ಕುಡಿತದ ಕಾರಣ ಅನಾರೋಗ್ಯ ಕಾಡುತ್ತಿತ್ತು. ಈ ಎಲ್ಲ ಕಾರಣದಿಂದಾಗಿ ತನ್ನಿಬ್ಬರು ಹೆಣ್ಣುಮಕ್ಕಳ ಮದುವೆಯನ್ನು ಮಾಡಲು ಮುಂದಾಗಿದ್ದಾನೆ. ಇಷ್ಟಾದರೆ ನನ್ನ ಜವಾಬ್ದಾರಿ ಮುಗಿಯುತ್ತೆ ಎನ್ನುವುದು ಅವನ ಯೋಚನೆಯಾಗಿತ್ತು.
ಇದಕ್ಕಾಗಿ ಇಬ್ಬರು ಯುವಕರನ್ನು ಗುರುತಿಸಿದ್ದ. ಅವರ ಕುಟುಂಬದವರೊಡನೆ ಮಾತುಕತೆ ಮುಗಿಸಿದ್ದ. ವರದಕ್ಷಿಣೆ ಏನೂ ಬೇಡ ಸರಳವಾಗಿ ಮದುವೆ ಮಾಡಿ ಕೊಡಿ ಎಂದೇ ಆ ಕುಟುಂಬದವರು ಹೇಳಿದ್ದರು.
ಇದನ್ನೂ ಓದಿ:ಮನಸ್ಸು ಕಲ್ಲಾಗಿಸಿಕೊಂಡು ಮೃತ ಶಿಶುವನ್ನು ನಾಲೆಗೆಸೆದ ತಂದೆ; ಕಾರಣ ಅಮಾನವೀಯ ಗ್ರಾಮಸ್ಥರು…!
ಮದುವೆ ದಿನ ಸ್ಥಳಕ್ಕೆ ಮಕ್ಕಳ ಸಹಾಯವಾಣಿ ಅಧಿಕಾರಿಗಳು ಬಂದಾಗಲೇ ವಿಷಯ ಗೊತ್ತಾಗಿದ್ದು, ಇಬ್ಬರು ಹೆಣ್ಣುಮಕ್ಕಳು ಅಪ್ರಾಪ್ತರು ಎಂಬುದು. ಒಬ್ಬಾಕೆ ಆರನೇ ತರಗತಿಯಲ್ಲಿ ಓದುತ್ತಿದ್ದರೆ, ಮತ್ತೊಬ್ಬಾಕೆ 9ನೇ ತರಗತಿ ವಿದ್ಯಾರ್ಥಿನಿ.
ನನ್ನ ಮಕ್ಕಳಿಗೆ ಇನ್ನೂ ಓದಬೇಕೆಂಬ ಆಸೆಯಿದೆ. ಆದರೆ, ಆರ್ಥಿಕ ಸಂಕಷ್ಟದ ಕಾರಣ ಅವರ ಮದುವೆ ಮಾಡಿಕೊಡಲು ನಿರ್ಧರಿಸಿದ್ದೆವು ಎಂದು ತಾಯಿ ಅಸಹಾಯಕತೆ ವ್ಯಕ್ತಪಡಿಸಿದ್ದಾಳೆ.
ಇದನ್ನೂ ಓದಿ;ಮತ್ತೆ ಶುರುವಾಗುತ್ತಾ ಟಿಕ್​ಟಾಕ್​? ಅದಕ್ಕೆ ಕಾರಣಗಳು ಇಲ್ಲದಿಲ್ಲ..!
ಪಾಲಕರಿಗೆ ಎಚ್ಚರಿಕೆ ನೀಡಿ ಮಕ್ಕಳಿಗೆ 18 ವರ್ಷ ತುಂಬುವವರೆಗೂ ಮದುವೆ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆಯಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದೇಶೀಯ ಕರೊನಾ ಲಸಿಕೆ ಪ್ರಯೋಗಕ್ಕೆ ಸಿದ್ಧರಿದ್ದೀರಾ? ಈ ಸಂಖ್ಯೆಗೆ ಕರೆ ಮಾಡಿ ನೋಂದಾಯಿಸಿಕೊಳ್ಳಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − seven =
Remember me
