ಲಖನೌ:ಇಬ್ಬರು ಗಂಭೀರ ಜಗಳವಾಡುತ್ತಿದ್ದಾಗ ತಡೆಯಲು ಮುಂದಾದ ಮೂರನೇ ವ್ಯಕ್ತಿಗೆ ಭೀಕರ ಅನುಭವವಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ವೈರಲ್ ಆಗಿದೆ .
ಇದನ್ನೂ ಓದಿ:ಸಿಎಂ ಯೋಗಿ ಕ್ರಮ..ಭೂಕಬಳಿಕೆ ಪ್ರಕರಣದಲ್ಲಿ ಐವರು ಅಧಿಕಾರಿಗಳ ಅಮಾನತು
ದೆಹಲಿ ಮೆಟ್ರೋ ನಿಲ್ದಾಣದಲ್ಲಿ ಘಟನೆ ನಡೆದಿರುವ ಈ ಘಟನೆ ನೆಟ್ಟಿಗರನ್ನು ಮೂಕವಿಸ್ಮಿತರನ್ನಾಗಿಸುತ್ತಿದೆ. ಒಳ್ಳೆಯದಕ್ಕೆ ಹೋದರೆ ಕೆಟ್ಟದ್ದನ್ನು ಎದುರಿಸುವುದು ಎಂದರೆ ಇದೇನಾ ಎಂದು ಕಾಮೆಂಟ್​ ಮಾಡುತ್ತಿದ್ದಾರೆ.
ವೀಡಿಯೋದಲ್ಲಿ ಕಂಡುಬರುವಂತೆ, ಇಬ್ಬರು ವ್ಯಕ್ತಿಗಳು ಮೆಟ್ರೋ ನಿಲ್ದಾಣದಲ್ಲಿ ಯಾವುದೋ ವಿಷಯಕ್ಕೆ ಜಗಳವಾಡಲು ಪ್ರಾರಂಭಿಸಿದರು. ಟಿಕೆಟ್ ಕೌಂಟರ್‌ನಲ್ಲಿ ಆರಂಭವಾದ ಅವರ ಜಗಳ ಇದ್ದಕ್ಕಿದ್ದಂತೆ ಗಂಭೀರ ಸ್ವರೂಪ ಪಡೆಯಿತು. ಇಬ್ಬರೂ ಒಬ್ಬರ ಕೆನ್ನೆಗೆ ಒಬ್ಬರು ಬಾರಿಸಿಕೊಂಡರು. ಇದನ್ನೆಲ್ಲ ನೋಡಿದ ಮತ್ತೊಬ್ಬ ವ್ಯಕ್ತಿ ಇಬ್ಬರನ್ನೂ ಸಮಾಧಾನಪಡಿಸಿ ಜಗಳ ಬಿಡಿಸಲು ಯತ್ನಿಸಿದ್ದಾರೆ.
ಆದರೆ ಜಗಳವಾಡುತ್ತಿದ್ದ ವ್ಯಕ್ತಿಗಳಲ್ಲಿ ಒಬ್ಬ ಮತ್ತೊಬ್ಬನನ್ನು ಹೊಡೆಯುವ ಭರದಲ್ಲಿ ಜಗಳ ತಡೆಯಲು ಯತ್ನಿಸಿದ ವ್ಯಕ್ತಿ ತಲೆಗೆ ಹೊಡೆದಿದ್ದಾನೆ. ಈ ಬೆಳವಣಿಗೆಯಿಂದ ಆತ ಸ್ವಲ್ಪ ಹೊತ್ತು ಆಘಾತಕ್ಕೊಳಗಾಗಿರುವುದು ವೀಡಿಯೊದಲ್ಲಿ ಸ್ಪಷ್ಟವಾಗಿ ನೋಡಬಹುದಾಗಿದೆ.
@gharkekaleshpic.twitter.com/i0B7LfXYNf
— Arhant Shelby (@Arhantt_pvt)July 10, 2024

ವೀಡಿಯೋ ನೋಡಿದ ಅನೇಕರು ಜಗಳ ತಡೆಯಲು ಯತ್ನಿಸಿದ ಮೂರನೇ ವ್ಯಕ್ತಿಯ ಬಗ್ಗೆ ಅನುಕಂಪ ವ್ಯಕ್ತಪಡಿಸಿದ್ದಾರೆ. ಒಳ್ಳೆಯದನ್ನು ಮಾಡುವುದರಿಂದ ಕೆಟ್ಟದ್ದನ್ನು ಎದುರಿಸಬೇಕಾಗುತ್ತದೆ. ಇದು ನಿಜವಾಗಿಯೂ ಅನ್ಯಾಯ. ಇಂತಹ ಬೆಳವಣಿಗೆಗಳಿಂದ ಜಗಳ ಬಿಡಿಸಲು ಯಾರೂ ಮುಂದಾಗುವುದಿಲ್ಲ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
ದೆಹಲಿ ಮೆಟ್ರೋದಲ್ಲಿ ಯಾವಾಗಲೂ ಗದ್ದಲ, ಗಲಾಟೆ ನಡೆಯುತ್ತಲೇ ಇರುತ್ತದೆ. ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಆಗ್ರಹಿಸುತ್ತಿದ್ದಾರೆ. ಈ ವೀಡಿಯೊ ಪ್ರಸ್ತುತ 10 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳೊಂದಿಗೆ ಟ್ರೆಂಡ್​ ಸೃಷ್ಟಿಸಿದೆ.
ಭಗವದ್ಗೀತೆ ಮೇಲೆ ಪ್ರಮಾಣವಚನ ಸ್ವೀಕರಿಸಿದ ಬ್ರಿಟನ್​ ಸಂಸದೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − eight =
Remember me
