ಮುಂಬೈ:ರೈಲ್ವೇ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಮಾಡಿದ ವರ್ಕೌಟ್​ ವಿಡಿಯೋ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್​ ಆಗಿದೆ.
ಇದನ್ನೂ ಓದಿ:ಐಐಟಿ ಕಾನ್ಪುರ ವಿದ್ಯಾರ್ಥಿಗಳ ನಡುವೆ ಮಾರಾಮಾರಿ; ಚೇರಿನಲ್ಲಿ ಹೊಡೆದಾಟ!
ಸಾಮಾನ್ಯವಾಗಿ ಅನೇಕರು ಹೆಚ್ಚಾಗಿ ಕಡಿಮೆ ಜನಸಂದಣಿ ಇರುವ ವಾತಾವರಣದಲ್ಲಿ ವ್ಯಾಯಾಮ ಮಾಡಲು ಬಯಸುತ್ತಾರೆ. ಬೆಳಗಿನ ಸಮಯದಲ್ಲಿ ಜಿಮ್​ ವರ್ಕೌಟ್​ ಮಾಡುವುದರಿಂದ ಮನಸ್ಸಿಗೆ ಉಲ್ಲಾಸ ಮತ್ತು ದೇಹಕ್ಕೂ ಲಾಭಕಾರಿ ಎಂಬ ಯೋಚನೆ ಇಂದಿಗೂ ಹಲವರಲ್ಲಿದೆ.
WATCH: Man Exercises At Railway Platform; Video Goes Viral#Mumbai#MumbaiLocal#Exercise#Health#Fitness#Viral
Video: comicalchingu/ Instapic.twitter.com/eqtd7ZxGDH
— Free Press Journal (@fpjindia)October 7, 2023

ವ್ಯಕ್ತಿಯೊಬ್ಬರು ಬೆಳಗ್ಗೆ 6 ಗಂಟೆಗೆ ರೈಲ್ವೆ ನಿಲ್ದಾಣದ ಕೊನೆಯಲ್ಲಿ ಶಾಂತವಾಗಿ ವ್ಯಾಯಾಮ ಮಾಡುತ್ತಿದ್ದ ವ್ಯಕ್ತಿಯನ್ನು ರೈಲಿನೊಳಗಿದ್ದ ಪ್ರಯಾಣಿಕರೊಬ್ಬರು ದೂರದಿಂದಲೇ ಗಮನಿಸಿದ್ದು, ವರ್ಕೌಟ್​ ದೃಶ್ಯವನ್ನು ತಮ್ಮ ಮೊಬೈಲ್​ನಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರು ಹೆಚ್ಚಿನ ಸಂಖ್ಯೆಯಲ್ಲಿ ಲೈಕ್​ ಮಾಡಿ, ವಿಡಿಯೋ ವೀಕ್ಷಿಸಿದ್ದಾರೆ.
ಇದನ್ನೂ ಓದಿ:ಇಸ್ರೇಲ್-ಹಮಾಸ್ ಸಂಘರ್ಷ: ಉಗ್ರರೊಂದಿಗೆ ಮುಂದುವರೆದ ಗುಂಡಿನ ಕಾಳಗ, 1000 ಕ್ಕೂ ಹೆಚ್ಚು ಬಲಿ
‘thecomicalchingu.’ ಎಂಬ ಹೆಸರಿನ ಪ್ರಯಾಣಿಕ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಿಕೊಂಡಿದ್ದಾರೆ. ತಮ್ಮ ದಿನನಿತ್ಯದ ಕೆಲಸಗಳನ್ನು ಮುಗಿಸಿಕೊಳ್ಳುವಷ್ಟರಲ್ಲಿ ದಿನವೇ ಅಂತ್ಯವಾಯಿತು ಎನ್ನುವ ಈ ಕಾಲದಲ್ಲಿ ಬೆಳಂಬೆಳಗ್ಗೆ ವ್ಯಕ್ತಿಯೊಬ್ಬರು ಶಿಸ್ತಿನಿಂದ ವ್ಯಾಯಾಮ ಮಾಡುತ್ತಿರುವ ದೃಶ್ಯ ಇದೀಗ ನೆಟ್ಟಿಗರ ಗಮನವನ್ನು ಸೆಳೆದಿದೆ,(ಏಜೆನ್ಸೀಸ್).

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
