ಹೈದರಾಬಾದ್​:ಕರೊನಾ ವೈರಸ್​ ವಿದೇಶಗಳಿಂದ ಭಾರತಕ್ಕೆ ಬಂದಿರುವ ಹಿನ್ನೆಲೆ ಜನರು ಬೇರೆ ದೇಶಗಳಿಂದ ಬಂದಿರುವವರನ್ನು ವೈರಿಗಳಂತೆ ನೋಡಲಾರಂಭಿಸಿದ್ದಾರೆ. ತಮ್ಮ ಅಪಾರ್ಟ್ಮೆಂಟ್​ನಲ್ಲಿರುವ ವ್ಯಕ್ತಿಯೊಬ್ಬ ವಿದೇಶದಿಂದ ಬಂದಿದ್ದಾನೆಂಬ ಕಾರಣಕ್ಕೆ ಆತನನ್ನು ಮನೆಯಲ್ಲೇ ಕೂಡಿ ಹಾಕಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.
ಹೈದರಾಬಾದ್​ನ ಅಪಾರ್ಟ್ಮೆಂಟ್​ ಒಂದರ ನಿವಾಸಿಯಾಗಿರುವ ವ್ಯಕ್ತಿ ಇತ್ತೀಚೆಗೆ ದಕ್ಷಿಣ ಆಫ್ರಿಕಾದ ಪ್ರವಾಸ ಮುಗಿಸಿ ಬಂದಿದ್ದ. ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಸಲಹೆಯಂತೆ ಆತ 14 ದಿನಗಳ ಕಾಲ ಮನೆಯಲ್ಲಿಯೇ ಇರುವ ನಿರ್ಧಾರ ಮಾಡಿದ್ದು ಅಪಾರ್ಟ್ಮೆಂಟ್​ನಲ್ಲೇ ತಂಗಿದ್ದ. ಈ ಮಧ್ಯೆ ನೆರೆ ಮನೆಯವನೊಂದಿಗೆ ಆತನಿಗೆ ಜಗಳವಾಗಿದೆ. ಈ ವ್ಯಕ್ತಿ ಪ್ರತ್ಯೇಕವಾಗಿರಬೇಕಾದ ಸಮಯದಲ್ಲಿ ಹೊರಗೆ ಹೋಗುವ ಯೋಚನೆ ನಡೆಸುತ್ತಿದ್ದಾನೆ ಎಂದು ಊಹಿಸಿದ ನೆರೆ ಮನೆಯಾತ ಈತನೊಂದಿಗೆ ಜಗಳ ಆಡಿದ್ದಾನೆ. ಅದೇ ಕಾರಣದಿಂದಾಗಿ ಆತ ಅಪಾರ್ಟ್ಮೆಂಟ್​ನೊಳಗೆ ಇದ್ದಾಗಲೇ ಹೊರಗಿನಿಂದ ಚಿಲಕ ಹಾಕಿದ್ದಾನೆ.
ಹೊರಗಿನಿಂದ ಚಿಲಕ ಹಾಕಲಾಗಿದೆ ಎಂದು ತಿಳಿದ ತಕ್ಷಣ ಪ್ರತ್ಯೇಕ ವಾಸದಲ್ಲಿರುವ ವ್ಯಕ್ತಿ ಪೊಲೀಸರಿಗೆ ಕರೆ ಮಾಡಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು ಈ ರೀತಿಯಲ್ಲಿ ನಡೆದುಕೊಳ್ಳಬೇಡಿ ಎಂದು ನೆರೆಹೊರೆಯವರಿಗೆ ಎಚ್ಚರಿಸಿ ಹೋಗಿದ್ದಾರೆ.
ರಾಜ್ಯದಲ್ಲಿ ವಿದೇಶದಿಂದ ಬಂದವರಿಗೆ 14 ದಿನಗಳ ಕಾಲ ಪ್ರತ್ಯೇಕವಾಗಿರಬೇಕು ಎಂದು ಸೂಚಿಸಲಾಗಿದ್ದರೂ ಅನೇಕರು ಆ ನಿಯಮವನ್ನು ಪಾಲಿಸುತ್ತಿಲ್ಲ. ಹಾಗಾಗಿ ತೆಲಂಗಾಣ ಪೊಲೀಸರು, ವೈದ್ಯರು ಮತ್ತು ಗ್ರಾಮ ಪಂಚಾಯಿತಿ ಮತ್ತು ವಾರ್ಡ್​ನ ಸದಸ್ಯರನ್ನೊಳಗೊಂಡ ತಂಡವು ವಿದೇಶದಿಂದ ಬಂದಿರುವವರ ಮನೆಗಳಿಗೆ ತೆರಳಿ ಅವರು ನಿಯಮವನ್ನು ಪಾಲನೆ ಮಾಡುತ್ತಿದ್ದಾರಾ ಎನ್ನುವುದರ ಪರಿಶೀಲನೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​)
ಒಂದೇ ದಿನದಲ್ಲಿ ರಾಜ್ಯದ ನಾಲ್ವರಲ್ಲಿ ಸೋಂಕು ಪತ್ತೆ; 19ಕ್ಕೆ ಏರಿದ ಕರೊನಾ ಸೋಂಕಿತರ ಸಂಖ್ಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + sixteen =
Remember me
