ನವದೆಹಲಿ:ಇಪ್ಪತ್ತೆರಡು ವರ್ಷದ ಯುವಕನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅದರಲ್ಲೂ ಆತ ನೇಣಿಗೆ ಕೊರಳೊಡ್ಡುವ ಮುನ್ನ ಫೇಸ್​ಬುಕ್​ಗೆ ವಿಡಿಯೋ ಅಪ್​ಲೋಡ್​ ಮಾಡಿದ್ದಾನೆ.
ನವದೆಹಲಿಯ ರೋಹಿಣಿ ಸೆಕ್ಟರ್​ 11ರಲ್ಲಿ ಈ ಆತ್ಮಹತ್ಯೆ ನಡೆದಿದೆ. ತಕ್ಷಣ ಆತನನ್ನು ಕರೆದೊಯ್ಯಲಾಯಿತಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಮೃತನ ತಂದೆ ತಮ್ಮ ಪುತ್ರನ ಗೆಳತಿ ಹಾಗೂ ಸ್ನೇಹಿತರಾದ ಸುಮಿತ್ ಗೋಸ್ವಾಮಿ ಹಾಗೂ ವಿಪಿನ್ ಖತ್ರಿ ಅವರೇ ಈ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ.
ಆರೋಪಕ್ಕೆ ಒಳಗಾಗಿರುವ ಯುವತಿ ಮತ್ತು ಮೃತ ಯುವಕ ಇಬ್ಬರೂ ಸ್ನೇಹಿತರಾಗಿದ್ದು, 2018ರಲ್ಲಿ ಆಕೆಯ ತಂದೆ ಈತನ ಬಿಜಿನೆಸ್​ಗೆ 5 ಲಕ್ಷ ರೂ. ಹೂಡಿಕೆ ಮಾಡಿದ್ದರು. ಕಾರಣಾಂತರದಿಂದ 2019ರಲ್ಲಿ ಪಾಲುದಾರಿಕೆಯಿಂದ ಹೊರಬಂದ ಯುವತಿ, ಸುಮಿತ್ ಹಾಗೂ ವಿಪಿನ್ ಜತೆ ಕೆಲಸ ಮಾಡಲಾರಂಭಿಸಿದ್ದಳು. ಇದರಿಂದ ನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದ್ದು, ತನಿಖೆ ನಡೆಯುತ್ತಿದೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
