ಗುವಾಹಟಿ:ಕಿಬ್ಬೊಟ್ಟೆಯ ನೋವಿನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ತಾನು ಆಕಸ್ಮಿಕವಾಗಿ ಇಯರ್​ಫೋನ್​ ಕೇಬಲ್​ ನುಂಗಿರುವುದಾಗಿ ವೈದ್ಯರ ಬಳಿ ಬಂದಿದ್ದ. ಆದರೆ, ವಾಸ್ತವದಲ್ಲಿ ಆತ ಮಾಡಿದ್ದೇ ಬೇರೆ. ಹಸ್ತಮೈಥುನದ ಸುಖಕ್ಕಾಗಿ ತನ್ನ ಗುಪ್ತಾಂಗದೊಳಗೆ ಮೊಬೈಲ್​ ಚಾರ್ಜರ್​ ಕೇಬಲ್​ ಅನ್ನು ತೂರಿಸಿಕೊಂಡಿದ್ದ!
ಆ ಕೇಬಲ್​ ಆತನ ಮೂತ್ರಕೋಶದೊಳಗೆ ಸೇರಿಕೊಂಡಿತ್ತು. ಇದರಿಂದಾಗಿ ಆತನಿಗೆ ಕಿಬ್ಬೊಟ್ಟೆ ನೋವು ಶುರುವಾಗಿತ್ತು. ಅತ್ಯಂತ ಸಂಕೀರ್ಣವಾದ ಶಸ್ತ್ರಚಿಕಿತ್ಸೆ ಮೂಲಕ ಆ ಕೇಬಲ್​ ಅನ್ನು ವೈದ್ಯರು ಹೊರತೆಗೆದ ಬಳಿಕ ಆತ ಈಗ ಚೇತರಿಸಿಕೊಳ್ಳುತ್ತಿದ್ದಾನೆ.
ಈ ಬಗ್ಗೆ ಮಾಹಿತಿ ನೀಡಿರುವ ಅಸ್ಸಾಂನ ಆಸ್ಪತ್ರೆಯೊಂದರ ವೈದ್ಯ ಡಾ. ವಲ್ಲೀಲ್​ವುಲ್​ ಇಸ್ಲಾಂ, ಆರಂಭದಲ್ಲಿ ಆ ವ್ಯಕ್ತಿ ಎರಡು ಅಡಿ ಉದ್ದದ ಇಯರ್​ ಫೋನ್​ ಕೇಬಲ್​ ನುಂಗಿರುವುದಾಗಿ ಹೇಳಿದ್ದ. ಆತನ ತ್ಯಾಜ್ಯವನ್ನು ಪರೀಕ್ಷಿಸಿದ್ದಲ್ಲದೆ, ಎಂಡೋಸ್ಕೋಪಿ ಮಾಡಿದ ಬಳಿಕವೂ ಯಾವುದೇ ವಸ್ತು ಪತ್ತೆಯಾಗಿರಲಿಲ್ಲ. ಇದರಿಂದ ಅನುಮಾನಗೊಂಡು ನಾವು 30 ವರ್ಷದ ಆತನನ್ನು ಪದೇಪದೆ ಪ್ರಶ್ನಿಸಿದ್ದರು. ಪ್ರತಿ ಬಾರಿಯೂ ಆತ ಕೇಬಲ್​ ನುಂಗಿರುವ ಕಥೆಯನ್ನೇ ಪುನರಾವರ್ತಿಸುತ್ತಿದ್ದ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ:VIDEO: ನಿಮ್ಮಂಥ ಚೆಲುವೆ ಮಾರ್ಕೆಟ್​ಗೆ ಬರಬಾರದು ಎಂದ ಸರ್ಕಾರಿ ಅಧಿಕಾರಿಗೆ ಬಿತ್ತು ಚಪ್ಪಲಿ ಏಟು!
ಇದರಿಂದ ಮತ್ತಷ್ಟು ಅನುಮಾನಗೊಂಡ ನಾವು ಆತನ ಕಿಬ್ಬೊಟ್ಟೆಯ ಭಾಗದ ಎಕ್ಸ್​ರೇ ತೆಗೆಯಲು ನಿರ್ಧರಿಸಿದೆವು. ಆಗ, ಆತನ ಮೂತ್ರಕೋಶದಲ್ಲಿ ಮೊಬೈಲ್​ ಚಾಜರ್​ ಕೇಬಲ್​ ಇರುವುದು ಪತ್ತೆಯಾಯಿತು. ಮತ್ತಷ್ಟು ತೀವ್ರ ವಿಚಾರಣೆ ನಡೆಸಿದಾಗ ಆತ ಸತ್ಯವನ್ನು ಒಪ್ಪಿಕೊಂಡ ಎಂದು ಹೇಳಿದ್ದಾರೆ.
ಏನದು ಸತ್ಯ?:ಹಸ್ತಮೈಥುನದ ಸುಖ ಹೆಚ್ಚಿಸಿಕೊಳ್ಳಲು ಆತ ಮೊಬೈಲ್​ ಚಾರ್ಜರ್​ ಕೇಬಲ್​ ಅನ್ನು ಗುಪ್ತಾಂಗದೊಳಗೆ ತೂರಿಸಿಕೊಳ್ಳುತ್ತಿದ್ದ. ಹೀಗೆ ಒಮ್ಮೆ ತೂರಿಸಿಕೊಂಡ ಕೇಬಲ್​ ಆತನ ಗುಪ್ತಾಂಗದಿಂದ ಮೂತ್ರಕೋಶಕ್ಕೆ ಹೊಕ್ಕು ಅಲ್ಲಿಯೇ ಉಳಿದುಕೊಂಡಿತ್ತು ಎಂದು ತಿಳಿಸಿದ್ದಾರೆ.
ಈ ಬಗ್ಗೆ ಹೆಚ್ಚಿನ ವಿವರಣೆ ನೀಡಿರುವ ಅವರು, ಈ ರೀತಿಯ ಹಸ್ತಮೈಥನವನ್ನು ಯುರೇರ್ಥಲ್​ ಸೌಂಡಿಂಗ್​ (Urethral Sounding) ಎಂದು ಕರೆಯಲಾಗುತ್ತದೆ. ಮೈಥುನದ ಸುಖವನ್ನು ಹೆಚ್ಚಿಸಿಕೊಳ್ಳಲು ಪುರುಷರು ತಮ್ಮ ಶಿಶ್ನದ ಮೂಲಕ ಕೇಬಲ್​ ಹಾಗೂ ದ್ರವರೂಪದ ವಸ್ತುಗಳು ಸೇರಿ ವಿವಿಧ ವಸ್ತುವನ್ನು ತೂರಿಸಿಕೊಳ್ಳುವುದನ್ನು ರೂಢಿಸಿಕೊಂಡಿರುತ್ತಾರೆ. ಇದು ಅಪಾಯಕಾರಿ ಎಂದು ಗೊತ್ತಿದ್ದರೂ, ಮೈಥುನದ ಸುಖ ಹೆಚ್ಚಾಗುತ್ತದೆ ಎಂದು ಹೀಗೆ ಮಾಡುತ್ತಾರೆ. ನನ್ನ 25 ವರ್ಷಗಳ ಅನುಭವದಲ್ಲಿ ಇದು ವಿರಳಾತಿವಿರಳ ಘಟನೆ ಎಂದು ಹೇಳಿದ್ದಾರೆ.
ವಿಹಾರಕ್ಕೆಂದು ಕುಟುಂಬವನ್ನು ಕರೆದೊಯ್ದ, ಆಮೇಲೆ ನಡೆದದ್ದು ಘನಘೋರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − twelve =
Remember me
