ಮುಂಬೈ:ಸಾಮಾಜಿಕ ಜಾಲತಾಣಗಳಲ್ಲಿ ಸ್ನೇಹಿತರನ್ನು ಮಾಡಿಕೊಳ್ಳುವ ವೇಳೆ ಅತಿ ಹೆಚ್ಚು ಎಚ್ಚರಿಕೆಯಿಂದಿರಬೇಕು ಎಂದು ಹೇಳಲಾಗುತ್ತದೆ. ಆದರೆ ಅದನ್ನು ಲೆಕ್ಕಕ್ಕೆ ಪರಿಗಣಿಸದ ಅನೇಕರು ಎಲ್ಲರನ್ನು ನಂಬಿ ಪೇಚಿಗೆ ಸಿಲುಕುವ ಘಟನೆ ಆಗಾಗ ನಡೆಯುತ್ತಿರುತ್ತದೆ. ಆನ್​ಲೈನ್​ ಮೂಲಕ ಫ್ರೆಂಡ್​ ಆಗಿದ್ದವನನ್ನು ನಂಬಿದ್ದಕ್ಕೆ ಯುವತಿಯೊಬ್ಬಳು ಮೂರು ವರ್ಷಗಳ ಕಾಲ ನರಕಯಾತನೆ ಅನುಭವಿಸಿದ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.
ಆ ಯುವತಿಗೆ ಮೂರು ವರ್ಷಗಳ ಹಿಂದೆ ಅಂದರೆ 2018ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮದುವೆಯಾಗಿದ್ದ ವ್ಯಕ್ತಿಯೊಬ್ಬನ ಪರಿಚಯ ಬೆಳೆದಿದೆ. ಅದಾದ ನಂತರ ಪರಿಚಯ ಸ್ನೇಹವಾಗಿದೆ. ಅದೇ ಸ್ನೇಹದ ಆಧಾರದ ಮೇಲೆ ಆತ ಯುವತಿಯನ್ನು ತನ್ನ ಮನೆಗೆ ಬರಲು ಕರೆದಿದ್ದ. ಮನೆಯಲ್ಲಿ ಸ್ವಲ್ಪ ಸಮಸ್ಯೆಯಾಗಿದೆ, ನೀನು ಬಂದು ಹೋಗು ಎಂದಿದ್ದ. ಆತನನ್ನು ನಂಬಿ ಮನೆಗೆ ಹೋದ ಯುವತಿಯ ಬಳಿ, ನನ್ನ ಹೆಂಡತಿ ನನ್ನೊಂದಿಗೆ ಜಗಳ ಆಡಿಕೊಂಡು ಮನೆಯಿಂದ ಹೊರಟು ಹೋಗಿದ್ದಾಳೆ ಎಂದು ದುಃಖ ತೋಡಿಕೊಂಡಿದ್ದ. ಯುವತಿ ಆತನಿಗೆ ಸಮಾಧಾನ ಮಾಡಿದ್ದಳು. ಅದಾದ ನಂತರ ಟೀ ಮಾಡಿಕೊಳ್ಳುತ್ತೇನೆಂದು ಹೇಳಿ, ಟೀನಲ್ಲಿ ಮತ್ತು ತರಿಸುವ ಮಾತ್ರೆ ಹಾಕಿ ಆಕೆಯನ್ನು ರೇಪ್​ ಮಾಡಿದ್ದ.
ರೇಪ್​ ಮಾಡಿದ ವಿಡಿಯೋವನ್ನೂ ಚಿತ್ರೀಕರಿಸಿಕೊಂಡಿದ್ದ. ಯುವತಿ ಎಚ್ಚರವಾದ ನಂತರ ಆಕೆಗೆ ವಿಡಿಯೋ ತೋರಿಸಿ ಬೆದರಿಸಿಟ್ಟುಕೊಂಡಿದ್ದ. ಮೂರು ವರ್ಷಗಳ ಕಾಲ ಆಗಾಗ ಯುವತಿಯನ್ನು ಕರೆಸಿಕೊಂಡು ತನ್ನ ಕಾಮದಾಸೆ ತೀರಿಸಿಕೊಂಡಿದ್ದ.ಮೂರು ವರ್ಷಗಳ ಕಾಲ ಸಂಕಷ್ಟವನ್ನು ಸಹಿಸಿಕೊಂಡು ಯುವತಿ ಮೇ 15ರಂದು ಕಠಿಣ ನಿರ್ಧಾರ ಮಾಡಿದ್ದಾಳೆ. ಧೈರ್ಯವಾಗಿ ಪೊಲೀಸ್​ ಠಾಣೆಗೆ ಬಂದು ಆರೋಪಿಯ ವಿರುದ್ಧ ದೂರು ನೀಡಿದ್ದಾಳೆ. ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)
ನಿಂತಿದ್ದ ಆ್ಯಂಬುಲೆನ್ಸ್​ ಅಲ್ಲಾಡುತ್ತಿತ್ತು; ಹತ್ತಿರ ಹೋಗಿ ನೋಡಿದ ಪೊಲೀಸರಿಗೆ ಕಂಡಿದ್ದು ಬೇರೆಯದ್ದೇ ದೃಶ್ಯ!

ಸಾಯುತ್ತಿದ್ದ ಅಮ್ಮನಿಗಾಗಿ ವಿಡಿಯೋ ಕಾಲ್​ನಲ್ಲೇ ಹಾಡು ಹೇಳಿದ ಮಗ! ಕಣ್ಣೀರು ತರಿಸುವ ಕಥೆ ಹಂಚಿಕೊಂಡ ಡಾಕ್ಟರ್

ಮಂಗಣ್ಣನ ಕರಾಮತ್ತು ಹೇಗಿದೆ ನೋಡಿ.. ಇಂತದ್ದೊಂದು ಮಂಗ ಇದ್ದರೆ ಕೆಲಸ ಸಲೀಸು…

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:one × four =
Remember me
