ಮುಲುಗು (ತೆಲಂಗಾಣ):ಮಕ್ಕಳ ಉದ್ಯಾನದಲ್ಲಿ ಕೆಲವೊಂದು ಅಭಿವೃದ್ಧಿ ಕಾರ್ಯಗಳನ್ನು ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ ವ್ಯಕ್ತಿಯನ್ನು ಜೆಸಿಬಿ ಚಾಲಕ ವಾಹನದ ಲೋಡರ್ ಬಳಸಿ ಕೆಳಕ್ಕೆ ಉರುಳಿಸುವ ಪ್ರಯತ್ನ ಮಾಡಿರುವ ಭಯಾನಕ ಘಟನೆ ಇಲ್ಲಿ ನಡೆದಿದೆ.
ಮಂಗಪೇಟೆ ಮಂಡಲದ ಕಮಲಾಪುರ ಗ್ರಾಮದಲ್ಲಿ ಮಕ್ಕಳ ಉದ್ಯಾನವನದ ಅಭಿವೃದ್ಧಿ ಕಾರ್ಯ ನಡೆದಿತ್ತು. ಇದನ್ನು ವಿರೋಧಿಸಿ ಎಸ್ ಮೋಹನ್ ಎನ್ನುವವರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ವಿಡಿಯೋ ಮಾಡುತ್ತಿದ್ದ ಸ್ಥಳೀಯರು ಈ ದೃಶ್ಯವನ್ನು ಕೂಡ ಚಿತ್ರೀಕರಿಸಿದ್ದಾರೆ.
ಮೋಹನ್ ಅವರು ವಾಹನದ ಮುಂದೆ ಬಂದು ಕೆಲಸಗಳಿಗೆ ಅಡ್ಡಿಯುಂಟುಮಾಡಲು ಪ್ರಯತ್ನಿಸಿದಾಗ, ಜೆಸಿಬಿಯ ಚಾಲಕ ಅವರನ್ನು ವಾಹನದ ಮೂಲಕವೇ ಕೆಳಕ್ಕೆ ಉರುಳಿಸಿದರು. ಇದರ ಪರಿಣಾಮವಾಗಿ ಮೋಹನ್ ಕೆಳಗೆ ಬಿದ್ದಿದ್ದಾರೆ. ಅವರ ತಲೆಗೆ ಬಲವಾದ ಏಟು ಬಿದ್ದಿದೆ.
ಘಟನೆ ನಡೆಯುತ್ತಿದ್ದಂತೆಯೇ ಜಮಾಯಿಸಿದ ಜನರು ಜೆಸಿಬಿ ಚಾಲಕ ಹಿಮಾಚಲನನ್ನು ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಈ ಹಿನ್ನೆಲೆಯಲ್ಲಿ ಉದ್ವಿಗ್ನತೆ ಉಂಟಾಯಿತು.ಮೂಲಗಳ ಪ್ರಕಾರ, ಚಾಲಕ ಸೈಟ್ ಬಳಿ ಇರುವ ಮರದ ಸುತ್ತಲಿನ ವೇದಿಕೆಯನ್ನು ಧ್ವಂಸಗೊಳಿಸಲು ಪ್ರಯತ್ನಿಸಿದ್ದ. ಮೋಹನ್‌ ಅದನ್ನು ತಡೆದಿದ್ದರು. ಮರ ಮತ್ತು ಅದರ ಸುತ್ತಮುತ್ತಲಿನ ವೇದಿಕೆ ಸ್ಥಳೀಯರು ಕುಳಿತುಕೊಳ್ಳಲು ಪ್ರಶಸ್ತಿವಾಗಿದೆ. ಆದ್ದರಿಂದ ಅದನ್ನು ನೆಲಸಮ ಮಾಡಬೇಡಿ ಎಂದು ಹೇಳಿದರು ಹಾಗೂ ಅದನ್ನು ತಡೆಯಲು ಪ್ರಯತ್ನಿಸಿದರು.
ಈ ಸಮಯದಲ್ಲಿ ಇಬ್ಬರ ನಡುವೆ ತೀವ್ರವಾದ ವಾದ-ಪ್ರತಿವಾದವಾಗಿದೆ. ಮಾತಿಗೆ ಮಾತು ಬೆಳೆದಾಗ ಕೋಪಗೊಂಡ ಚಾಲಕ ಲೋಡರ್ ಬಳಸಿ ಮೋಹನ್‌ ಅವರನ್ನು ಕೆಡವಿದ್ದಾನೆ. ಪ್ರತಿಭಟನೆ ಜೋರಾಗುತ್ತಿದ್ದಂತೆಯೇ ಪೊಲೀಸರು ಚಾಲಕನನ್ನು ಬಂಧಿಸಿದ್ದಾರೆ. ಮೋಹರ್‌ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.(ಏಜೆನ್ಸೀಸ್‌)
ಆಂಬ್ಯುಲೆನ್ಸ್‌ನಲ್ಲಿ ಶಾಸಕಿಯ ಚೆಲ್ಲಾಟ- ರೋಗಿಗಳಿಗೆ ಪ್ರಾಣ ಸಂಕಟ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × three =
Remember me
