ಭೂಪಾಲ್​:ಇಲ್ಲೊಬ್ಬ ಭೂಪ ಮಾಸ್ಕ್​ ಧರಿಸದೆ ಬೈಕ್​ ಓಡಿಸುತ್ತಿದ್ದ. ಆದರೆ ರಸ್ತೆ ಮಧ್ಯೆ ಪೊಲೀಸರನ್ನು ಕಂಡಿದ್ದೇ ಕಂಡಿದ್ದು ಪತ್ನಿಯ ಪೆಟಿಕೋಟ್​(ಸೀರೆಯ ಒಳಗೆ ಧರಿಸುವ ಲಂಗ)ನ್ನೇ ತೆಗೆದು ಮೂಗಿ, ಬಾಯಿಗೆ ಮುಚ್ಚಿಕೊಂಡು ಸುದ್ದಿಯಾಗಿದ್ದಾನೆ.
ಮಧ್ಯಪ್ರದೇಶದ ದಾಮಹ್​​ನಲ್ಲಿ ಘಟನೆ ನಡೆದಿದೆ. ದಂಡದಿಂದ ತಪ್ಪಿಸಿಕೊಳ್ಳಲು ಈ ವ್ಯಕ್ತಿ ಮಾಡಿದ ಉಪಾಯ ನೋಡಿ ಪೊಲೀಸರೇ ಬೆರಗಾಗಿದ್ದಾರೆ. ಮಧ್ಯಪ್ರದೇಶದಲ್ಲಿ ಕರೊನಾ ವೈರಸ್​ ಹೆಚ್ಚಾಗಿರುವ ಕಾರಣ ಅಲ್ಲಿ ಮಾಸ್ಕ್​ ಕಡ್ಡಾಯ ಮಾಡಲಾಗಿದೆ. ಹಾಗೇ ಮಾಸ್ಕ್​ ಧರಿಸದೆ ಹೊರಗೆ ಓಡಾಡುವವರನ್ನು ಪೊಲೀಸರು ಹಿಡಿದು, ದಂಡ ವಿಧಿಸುತ್ತಿದ್ದಾರೆ.
ಹಾಗೇ, ದಾಮೋಹ್​​ನ ಬಂಡಕ್​ಪುರದಲ್ಲಿ ಕೂಡ ಪೊಲೀಸರು ರಸ್ತೆಯಲ್ಲಿ ತಪಾಸಣೆ ನಡೆಸುತ್ತಿದ್ದರು. ಲಾಕ್​ಡೌನ್​ ಮಧ್ಯೆ ರಸ್ತೆಯಲ್ಲಿ ಓಡಾಡುವವರನ್ನು ಹಿಡಿದು ಪ್ರಶ್ನೆ ಮಾಡುತ್ತಿದ್ದರು. ಮಾಸ್ಕ್​ ಧರಿಸದೆ ಬಂದವರಿಗೆ ಪ್ರಶ್ನೆಯನ್ನೂ ಮಾಡುತ್ತಿದ್ದರು.
ಅದೇ ಮಾರ್ಗದಲ್ಲಿ ಬೈಕ್​ನಲ್ಲಿ ಬರುತ್ತಿದ್ದ ವ್ಯಕ್ತಿಯೋರ್ವ ಇದನ್ನು ದೂರದಿಂದಲೇ ಗಮನಿಸಿದ. ದಂಡದಿಂದ ತಪ್ಪಿಸಿಕೊಳ್ಳಲು, ತನ್ನ ಬ್ಯಾಗ್​​ನಲ್ಲಿದ್ದ ಪತ್ನಿಯ ಒಳಲಂಗವನ್ನೇ ತೆಗೆದು ಮಾಸ್ಕ್​ನಂತೆ ಕಟ್ಟಿಕೊಂಡಿದ್ದಾನೆ. ಹಾಗೇ ಪೊಲೀಸರು ವಿಧಿಸುವ ದಂಡದಿಂದ ಪಾರಾಗಿದ್ದಾನೆ. ಆದರೆ ಅವನ ಫೋಟೋ, ವಿಡಿಯೋಗಳು ಸಿಕ್ಕಾಪಟೆ ವೈರಲ್​ ಆಗಿ, ನಗು ಮೂಡಿಸಿದೆ. (ಏಜೆನ್ಸೀಸ್​)
ಇಂದು ಸೋನಿಯಾ ಗಾಂಧಿ ನಡೆಸಿದ ಸಭೆಯಲ್ಲೂ ಮತ್ತದೇ ‘ರಾಗಾ’: ರಾಹುಲ್​ ಗಾಂಧಿ ನಿರ್ಧಾರವೊಂದೇ ಬಾಕಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 1 =
Remember me
