ನವದೆಹಲಿ:ವನ್ಯ ಜೀವಿ ಸಾಹಸಿ ನಿರ್ದೇಶಕ ಬೇರ್​ ಗ್ರೀಲ್ಸ್​ನ “ಮ್ಯಾನ್​ ವರ್ಸಸ್​ ವೈಲ್ಡ್​” ಕಾರ್ಯಕ್ರಮದ ಪ್ರೋಮೋ ಬಿಡುಗಡೆಯಾಗಿದ್ದು ಎಲ್ಲರ ಗಮನ ಸೆಳೆಯುತ್ತಿದೆ.
ಪ್ರೋಮೋವನ್ನು ಇಂದು ಬೆಳಗ್ಗೆ ಡಿಸ್ಕವರಿ ಚಾನಲ್​ ಟ್ವೀಟ್​ ಮಾಡಿದ್ದು, ಇಲ್ಲಿಯವರೆಗೆ 6.1 ಸಾವಿರ ಮಂದಿ ವೀಕ್ಷಿಸಿದ್ದು 3 ಸಾವಿರಕ್ಕೂ ಹೆಚ್ಚ ಜನ ಇದನ್ನು ರೀಟ್ವೀಟ್​ ಮಾಡಿದ್ದಾರೆ. ಕಾಯಕ್ರಮ ಮಾರ್ಚ್​ 23 ರಂದು ರಾತ್ರಿ 8ಗಂಟೆಗೆ ಡಿಸ್ಕವರಿ ಚಾನಲ್​ನಲ್ಲಿ ಪ್ರಸಾರವಾಗಲಿದೆ.
ಇನ್ ಟು ದಿ ವೈಲ್ಡ್ ವಿದ್ ಬೇರ್ ಗ್ರಿಲ್ಸ್ ಸರಣಿಯ ಮೊದಲ ಕಾರ್ಯಕ್ರಮ ಇದಾಗಿದ್ದು, 40 ಸೆಕೆಂಡ್​ಗಳ ಪ್ರೋಮೋ ಒಂದನ್ನು ಬಿಡುಗಡೆ ಮಾಡಿದೆ. “ನೀವು ತಯಾರಾಗಿ, ಇದು ನಿಮ್ಮ ಮನಸ್ಸನ್ನು ಉಲ್ಲಾಸಿತಗೊಳಿಸಲಿದೆ” ಎಂದು ಬೇರ್​ ಗ್ರೀಲ್ಸ್ ಪ್ರೋಮೊವಿನಲ್ಲಿ ಹೇಳಿದ್ದಾರೆ.
ಅಲ್ಲದೆ ಸೂಪರ್​ಸ್ಟಾರ್​ ರಜನೀಕಾಂತ್​ ಇದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳುವ ಪ್ರೋಮೋದಲ್ಲಿ ರಜನಿಕಾಂತ್​ ಅವರು ಬೈಕ್​ ಮೇಲೆ ತಮ್ಮದೇ ಸ್ಟೈಲ್​ನಲ್ಲಿ ಆಗಮಿಸುತ್ತಾರೆ.
ಬಂಡೀಪುರ ಹಾಗೂ ಸುತ್ತಮುತ್ತಲ ಅರಣ್ಯದಲ್ಲಿ ಚಿತ್ರೀಕರಣಗೊಂಡ “ಮ್ಯಾನ್​ ವರ್ಸಸ್​ ವೈಲ್ಡ್​” ಕಾರ್ಯಕ್ರಮದಲ್ಲಿ ತಲೈವಾ ರಜನಿಕಾಂತ್​ ಅಲ್ಲದೆ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಕೂಡ ನಟಿಸಿದ್ದರು.(ಏಜೆನ್ಸೀಸ್​)
Gear up to venture into the wilderness of India with survival expert@BearGryllsand the ultimate superstar@Rajinikanthin an action packed adventure. Premieres 23 March at 8 PM, only on Discovery#ThalaivaOnDiscoverypic.twitter.com/zSS4GsSCL4
— Discovery Channel India (@DiscoveryIN)February 27, 2020

Thank you very much dear@BearGryllsfor an unforgettable experience … love you.@DiscoveryINthank you 🙏🏻#IntoTheWildWithBearGrylls
— Rajinikanth (@rajinikanth)January 29, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 9 =
Remember me
