ಇಸ್ಲಮಾಬಾದ್​:ಹುಲಿ ಉಗುರು ಪೆಂಡೆಂಡ್​ ಧರಿಸದ ಆರೋಪ ಮೇಲೆ ಬಿಗ್​ಬಾಸ್​ ಸೀಸನ್​ 10ರ ಸ್ಪರ್ಧಿ ವರ್ತೂರು ಸಂತೋಷ್​ ಅವರನ್ನು ಬಿಗ್​ಬಾಸ್​ ಮನೆಯಿಂದಲೇ ಬಂಧನ ಮಾಡಿದ ಬಳಿಕ ಹುಲಿಯ ಬಗ್ಗೆ ಕರ್ನಾಟಕ ಸೇರಿ ಇಡೀ ದೇಶದಲ್ಲಿ ಬಹಳ ಚರ್ಚೆಯಾಗುತ್ತಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಪ್ರಕಾರ ಪ್ರಾಣಿಗಳಿಗೆ ಸಂಬಂಧಿಸಿದ ಯಾವುದೇ ವಸ್ತುಗಳನ್ನು ಇಟ್ಟುಕೊಳ್ಳುವುದು ಅಪರಾಧ. ಹೀಗಾಗಿಯೇ ಹುಲಿ ಉಗುರು ಧರಿಸಿದ ಸೆಲೆಬ್ರಿಟಿ ಮನೆಗಳನ್ನು ಅರಣ್ಯಾಧಿಕಾರಿಗಳು ಜಾಲಾಡಿದ್ದಾರೆ. ಇದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್​ ಆಗಿದ್ದು, ಹಲವರ ಹುಬ್ಬೇರಿಸಿದ್ದಾರೆ.
ಹುಲಿ ಉಗುರು ಧರಿಸಿದ್ದಕ್ಕೆ ಬಂಧನ ಮಾಡಿರುವುದು ಎಲ್ಲರಿಗೂ ತಿಳಿದೇ ಇದೆ. ಹೀಗಿರುವಾಗ ಇಲ್ಲೊಬ್ಬ ಅಸಾಮಿ ಹುಲಿಯನ್ನು ನಾಯಿಯಂತೆ ವಾಕಿಂಗ್​ ಕರೆದುಕೊಂಡು ಹೋಗಿದ್ದಾನೆ. ಅದು ಕೂಡ ವಾಹನ ನಿಬಿಡ ರಸ್ತೆಯಲ್ಲಿ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ವಿಡಿಯೋದಲ್ಲಿ ಏನಿದೆ?ಜನನಿಬಿಡ ರಸ್ತೆಯಲ್ಲಿ ಯುವಕನೊಬ್ಬ ಹುಲಿಯನ್ನು ವಾಕಿಂಗ್‌ಗೆ ಕರೆದೊಯ್ದಿದ್ದಾನೆ. ಮೇಲಾಗಿ ವಾಹನಗಳು ಧಾವಿಸಿ ಬರುವ ಜನನಿಬಿಡ ರಸ್ತೆ ಇದಾಗಿದೆ. ಹುಲಿಯ ಕೊರಳಿಗೆ ಬೆಲ್ಟ್ ಕಟ್ಟಿ ಅದಕ್ಕೊಂದು ಹಗ್ಗ ಕಟ್ಟಿ ಹುಲಿಯೊಂದಿಗೆ ಯುವಕ ವಾಕಿಂಗ್​ ಮಾಡಿದ್ದಾನೆ. ರಸ್ತೆಯಲ್ಲಿಯೂ ತನ್ನ ಸಹಜ ಗುಣ ಪ್ರದರ್ಶಿಸಿರುವ ಹುಲಿ ರಸ್ತೆಯಲ್ಲಿ ಹೋಗುತ್ತಿದ್ದ ವಾಹನಗಳ ಮೇಲೆ ಹಾರಲು ಪ್ರಯತ್ನಿಸಿತು. ಆದರೆ, ಯುವಕ ಹಗ್ಗವನ್ನು ಬಿಗಿಯಾಗಿ ಹಿಡಿದ್ದರಿಂದ ಅದು ಸಾಧ್ಯವಾಗಲಿಲ್ಲ.
ವಿಡಿಯೋ ಎಲ್ಲಿಯದ್ದು?ವೈರಲ್​ ಆಗಿರುವ ವಿಡಿಯೋ ಪಾಕಿಸ್ತಾನದ್ದು ಎಂದು ಹೇಳಲಾಗಿದೆ. ಟಿಪ್​ಟಾಪ್​ ಹೆಸರಿನ ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಪೋಸ್ಟ್​ ಆಗಿದೆ. ಇದುವರೆಗೂ 1 ಲಕ್ಷಕ್ಕೂ ಅಧಿಕ ಮಂದಿ ವಿಡಿಯೋ ವೀಕ್ಷಣೆ ಮಾಡಿದ್ದು, ಸಾವಿರಾರು ಮಂದಿ ಲೈಕ್ಸ್​ ಮಾಡಿದ್ದಾರೆ.

A post shared by Tip Top Yatra (@tiptopyatra)

ಹುಲಿ ಉಗುರು ಪ್ರಕರಣದಲ್ಲಿ ವರ್ತೂರು ಸಂತೋಷ್​ ಅವರಿಗೆ ಷರತ್ತುಬದ್ಧ ಜಾಮೀನು ಲಭಿಸಿದ್ದು, ಸಂತೋಷ್​ ಮತ್ತೆ ಬಿಗ್​ಬಾಸ್​ ಮನೆ ಸೇರಲಿದ್ದಾರೆ. ಇದರ ನಡುವೆ ನಟ ದರ್ಶನ್​, ನಿಖಿಲ್​ ಕುಮಾರಸ್ವಾಮಿ, ಜಗ್ಗೇಶ್​ ಮತ್ತು ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್ ಅವರ ಮನೆಗಳ ಮೇಲೆ ಅರಣ್ಯಾಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಕೆಲವರ ಮನೆಗಳಲ್ಲಿ ಹುಲಿ ಉಗುರು ಸಹ ಪತ್ತೆಯಾಗಿದೆ. ಆದರೆ, ಅವು ನಕಲಿ ಎಂದು ಹೇಳಿದ್ದು, ಪರೀಕ್ಷೆಯ ಬಳಿಕ ನಕಲಿಯೋ? ಅಸಲಿಯೋ? ಎಂಬುದು ಗೊತ್ತಾಗಿದೆ.(ಏಜೆನ್ಸೀಸ್​)
ಕನ್ನಡದಲ್ಲಿ ಬೆರೆತಿರುವ ಶಕ್ತಿ ಅಪ್ಪು

ಸರ್ಕಾರಿ ನೌಕರಿಯಲ್ಲಿ ಮಹಿಳೆಯರಿಗೆ 33% ಮೀಸಲಾತಿ; ಮಿಜೋರಾಂ ಬಿಜೆಪಿ ಪ್ರಣಾಳಿಕೆ ಪ್ರಕಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 19 =
Remember me
