ನವದೆಹಲಿ:ವ್ಯಾಪಾರ ಜಗತ್ತಿನಲ್ಲಿ ಪ್ರತಿಯೊಬ್ಬರೂ ಜನರು ಸಮಯಕ್ಕೆ ಬರಬೇಕೆಂದು ನಿರೀಕ್ಷಿಸುತ್ತಾರೆ. ಆದಾಗ್ಯೂ, ಅಧಿಕಾರ ಸ್ಥಾನದಲ್ಲಿರುವ ಕೆಲವರು ನಿಯಮಗಳಿಂದ ವಿನಾಯಿತಿ ಪಡೆದಿದ್ದಾರೆ ಎಂದು ನಂಬಿರುತ್ತಾರೆ.
ಇದನ್ನೂ ಓದಿ:ಉದ್ಯೋಗ ಮೇಳದಲ್ಲಿ 22 ಮಂದಿಗೆ ಕೆಲಸ
ಉದ್ಯೋಗಕ್ಕಾಗಿ ಸಂದರ್ಶನಕ್ಕೆಂದು ಹೋದ ವ್ಯಕ್ತಿಯೊಬ್ಬ, ಇದೇ ರೀತಿ ಉದ್ಯೋಗದಾತರಿಂದ ಆಲಸ್ಯದ ವರ್ತನೆಯನ್ನು ಕಂಡು ಎದ್ದು ಹೋಗಿದ್ದಾರೆ. ಅಷ್ಟೇ ಮಾಡದೇ, ನಂತರ ಅವರು ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ರೆಡ್ಡಿಟ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲಿ ಜನರು ಇವರ ಚಿಂತನೆಯನ್ನು ಮೆಚ್ಚಿಕೊಂಡಿದ್ದು, ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
“ನಾನು ಇಂದು 2:30 ಕ್ಕೆ ಸಂಭಾವ್ಯ ಕಚೇರಿಗೆ ಬಂದಿದ್ದೆ. ನಾನು ಮುಂಭಾಗದ ಲಾಬಿಯಲ್ಲಿ ನಿರ್ದೇಶಕರನ್ನು ಭೇಟಿಯಾಗಬೇಕಿತ್ತು. ಆದರೆ ಅಲ್ಲಿದ್ದ ಉದ್ಯೋಗಿ “ಕೇಲವೇ ನಿಮಿಷಗಳಲ್ಲಿ” ಬರುತ್ತಾರೆ ಎಂದು ನನಗೆ ತಿಳಿಸಿದರು.
I walked out of my interview todaybyu/Mauve_Unicorninantiwork

ಇದನ್ನೂ ಓದಿ:ಕಂಪನಿ ಎಂಡಿ, ಸಿಇಒ ಇಬ್ಬರನ್ನೂ ಹಾಡಹಗಲೇ ಬರ್ಬರವಾಗಿ ಕೊಂದ ಮಾಜಿ ಉದ್ಯೋಗಿ!
ಆದರೆ, 2:45ಕ್ಕೂ ಸಂದರ್ಶಕ ಬರದೇ ಇದ್ದ ಕಾರಣ , ನಾನು ಹೊರನಡೆದು ಹೊರಟೆ. 15 ನಿಮಿಷಗಳು. ನಮ್ಮ ಉದ್ಯಮ ಹೇಗಿದೆ ಎನ್ನುವುದು ನನಗೆ ತಿಳಿದಿದೆ. ಕೆಲವು ನಿಮಿಷಗಳಿಗಿಂತ ಹೆಚ್ಚು ಹೊತ್ತು ಕಾಯಲು ನನಗೆ ಯಾವುದೇ ಕಾರಣಗಳಿಲ್ಲ. ಹೀಗೆ ಮಾಡುವ ಮೂಲಕ ಈ ಕಂಪನಿಯು ನಿಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತಿದೆ. ಹೇಗೆಂದರೆ, ಹೆಚ್ಚು ಹೊತ್ತು ಕಾಯುವ ಅಭ್ಯರ್ಥಿಯು ಉದ್ಯೋಗಕ್ಕಾಗಿ ಹತಾಶನಾಗಿದ್ದಾನೆ ಎಂದರ್ಥ. ಇದು ಅವರಿಗೆ ಖಚಿತವಾದ ಮೇಲೆ ಉದ್ಯೋಗಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ” ಎಂದು ಬರೆದಿದ್ದಾರೆ.
ಈ ವಿಚಾರವನ್ನು ಒಪ್ಪುವ ಕಾಮೆಂಟ್​ಗಳೇ ಹೆಚ್ಚು ಬಂದಿದ್ದು, ಕೆಲವರು ಮಾತ್ರ ಈ ನಡೆಯನ್ನು ವಿರೋಧಿಸಿದ್ದಾರೆ. ಅದರೊಂದಿಗೆ ಅನೇಕರು ತಮ್ಮ ತಮ್ಮ ಕೆಟ್ಟ ಅನುಭವಗಳನ್ನು ಈ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 7 =
Remember me
