ಲಖನೌ:ಅಕ್ರಮ ಸಂಬಂಧ ಹೊಂದಿ ತಪ್ಪು ಮಾಡುತ್ತಿದ್ದ ಮಗಳನ್ನು ವಿರೋಧಿಸಿದ್ದಕ್ಕೆ ಮಕ್ಕಳು ಮತ್ತು ಅಮ್ಮ ಸೇರಿಕೊಂಡು ತಂದೆಯನ್ನೇ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬದೌನ್​ ಜಿಲ್ಲೆಯಲ್ಲಿ ನಡೆದಿದೆ. ದೇಹದ ಶೇ. 30 ಭಾಗ ಸುಟ್ಟಿರುವ ವ್ಯಕ್ತಿ ಇದೀಗ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.
ಇದನ್ನೂ ಓದಿ:‘ಹೋರಾಟನಿರತ ರೈತರನ್ನು ಬೆದರಿಸಲು ಪಂಜಾಬ್​ ಸಿಎಂ ರಾಜ್ಯದ ಪೊಲೀಸರನ್ನು ದೆಹಲಿಗೆ ಕಳಿಸಿದ್ದಾರೆ!’
ಮೊಹಮ್ಮದ್​ ಅಮೀರ್​ ಹೆಸರಿನ ವ್ಯಕ್ತಿಗೆ 21 ವರ್ಷ ಮತ್ತು 26 ವರ್ಷದ ಇಬ್ಬರು ಹೆಣ್ಣು ಮಕ್ಕಳು ಹಾಗೂ 24 ವರ್ಷದ ಮಗನೊಬ್ಬನಿದ್ದಾನೆ. ಒಬ್ಬ ಮಗಳು ಅಕ್ರಮ ಸಂಬಂಧವನ್ನು ಹೊಂದಿರುವ ವಿಚಾರ ಮೊಹಮ್ಮದ್​ಗೆ ತಿಳಿದುಬಂದಿದೆ. ಈ ವಿಚಾರವಾಗಿ ಮನೆಯಲ್ಲಿ ಕೂಗಾಡಿದ್ದಾನೆ. ಸಂಬಂಧವನ್ನು ಮುರಿದುಕೊಳ್ಳುವಂತೆ ಎಚ್ಚರಿಸಿದ್ದಾನೆ. ಆದರೆ ಸಿಟ್ಟಿಗೆದ್ದ ಮನೆಯವರು, ಮೊಹಮ್ಮದ್​ನ್ನು ಕೊಲ್ಲುವ ನಿರ್ಧಾರ ಮಾಡಿದ್ದಾರೆ.
ಇದನ್ನೂ ಓದಿ:ಮಗಳನ್ನು ಕೊಂದು ಹೊಲದಲ್ಲಿ ಎಸೆದ ಅಪ್ಪ ಅಮ್ಮ! ಇಷ್ಟಕ್ಕೆಲ್ಲ ಕಾರಣ ಆ ಯುವಕ
ಜನವರಿ 5ರಂದು ಮೊಹಮ್ಮದ್​ ದೇಹದ ಮೇಲೆ ಪೆಟ್ರೋಲ್​ ಸುರಿದು ಸುಡಲಾಗಿದೆ. ಹೆಂಡತಿ, ಮಗಳು ಮತ್ತು ಮಗ ಸೇರಿಕೊಂಡು ಈ ಕೃತ್ಯ ಮಾಡಿರುವುದಾಗಿ ಆತ ಹೇಳಿಕೊಂಡಿದ್ದಾನೆ. ಅಪ್ಪನಿಗೆ ಬೆಂಕಿ ಹಚ್ಚಿ ಮನೆಯವರೆಲ್ಲರೂ ಅಲ್ಲಿಂದ ಪರಾರಿಯಾಗಿದ್ದಾರೆ. ಸ್ಥಳೀಯರ ಮಾಹಿತಿಯ ಮೇರೆಗೆ ಮನೆಗೆ ಬಂದ ಪೊಲೀಸರಿಗೆ ಅರೆಬೆಂದ ಮೊಹಮ್ಮದ್​ನ ದೇಹ ಸಿಕ್ಕಿದೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೇಳಿಕೆ ಪಡೆಯಲಾಗಿದೆ. ಇದೀಗ ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. (ಏಜೆನ್ಸೀಸ್​)
ಖುರ್ಚಿಯಲ್ಲಿ ಪ್ರಿಯತಮನನ್ನು ಕಟ್ಟಿ ಸೆಕ್ಸ್​ ಮಾಡಲು ಹೋದ ಮಹಿಳೆ; ಕಾಮದಾಸೆಯಲ್ಲೇ ಯಮಲೋಕ ಸೇರಿದ ಯುವಕ

ಪಾರ್ಟಿಗೆ ಮಗಳನ್ನು ಕರೆದು ಹತ್ಯೆ ಮಾಡಿ, ಪ್ರಿಯಕರನನ್ನು ರೇಪ್​ ಮಾಡಿ ಕೊಂದ ಕುಟುಂಬ: ಬೆಚ್ಚಿಬೀಳಿಸುವ ಪ್ರಕರಣವಿದು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 10 =
Remember me
