ಥಾಣೆ:ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ತನ್ನ ಹೆಂಡತಿ ಮತ್ತು ಮಗುವಿಗಾಗಿ ಸೀಟು ಕೇಳಿದ್ದಕ್ಕೇ ಸಹ ಪ್ರಯಾಣಿಕರಿಂದ ವ್ಯಕ್ತಿಯೊಬ್ಬ ಹೊಡೆತ ತಿಂದಿರುವ ಘಟನೆ ಥಾಣೆ ಜಿಲ್ಲೆಯ ಕಲ್ಯಾಣ್​ ನಗರದಲ್ಲಿ ನಡೆದಿದೆ.
26 ವರ್ಷದ ಸಾಗರ್​ ಮಾರ್ಕಂಡ್​ ಹೆಸರಿನ ವ್ಯಕ್ತಿ ತನ್ನ ಹೆಂಡತಿ ಜ್ಯೋತಿ ಮತ್ತು ತನ್ನ ಎರಡು ವರ್ಷದ ಮಗುವಿನೊಂದಿಗೆ ಸಂಬಂಧಿಗಳ ಮನೆಯ ಕಾರ್ಯಕ್ರಮವೊಂದಕ್ಕೆ ಭೇಟಿ ನೀಡಲು ರೈಲು ಹತ್ತಿದ್ದ. ಮುಂಬೈನಿಂದ ಬೀದರ್​ ತೆರಳುವ ಮುಂಬೈ-ಬೀದರ್​ ಎಕ್ಸ್​ಪ್ರೆಸ್​​ ರೈಲಿನ ಜನರಲ್​ ಬೋಗಿ ಹತ್ತಿದ ಆತ ಅಲ್ಲಿ ಕುಳಿತಿದ್ದ ಮಹಿಳೆಯೊಬ್ಬರಲ್ಲಿ ತನ್ನ ಹೆಂಡತಿಗೆ ಸೀಟನ್ನು ಕೊಡುವಂತೆ ಕೇಳಿದ್ದಾನೆ. ಇದರಿಂದ ಸಿಟ್ಟಿಗೆದ್ದ ಮಹಿಳೆ ಆತನನ್ನು ಬೈಯಲಾರಂಭಿಸಿದ್ದಾಳೆ. ಮಾತಿಗೆ ಮಾತು ಬೆಳೆದು ಅಲ್ಲಿದ್ದ ಜನರೆಲ್ಲ ಸೇರಿಕೊಂಡು ಸಾಗರ್​ಗೆ ಹೊಡೆಯಲಾರಂಭಿಸಿದ್ದಾರೆ. ತನ್ನ ಗಂಡನಿಗೆ ಹೊಡೆಯಬೇಡಿ ಎಂದು ಜ್ಯೋತಿ ಕೇಳಿಕೊಳ್ಳುತ್ತಿದ್ದರೂ ಸುಮ್ಮನಾಗದ ಜನರು ಒಂದು ಗಂಟೆಯ ಕಾಲ ಆತನಿಗೆ ಹೊಡೆದಿದ್ದಾರೆ.
ಈ ಕುರಿತಾಗಿ ಮಾತನಾಡಿರುವ ರೈಲ್ವೆ ನಿಲ್ದಾಣದ ಪೊಲೀಸ್​ ವರಿಷ್ಠಾಧಿಕಾರಿ ದೀಪಕ್​ ಸಾತೋರ್​, “ರೈಲಿನ ಜನರಲ್​ ಬೋಗಿಯಲ್ಲಿ ಯಾವುದೇ ಸೀಟು ಖಾಲಿ ಇಲ್ಲದ ಕಾರಣ ಸಾಗರ್​ ಮಗುವನ್ನು ಎತ್ತಿಕೊಂಡಿರುವ ತನ್ನ ಹೆಂಡತಿಗಾಗಿ ಮಹಿಳೆಯಲ್ಲಿ ಸೀಟು ಕೇಳಿದ್ದಾನೆ. ಆದರೆ ಆಕೆ ಅದಕ್ಕೆ ಒಪ್ಪದೆ ಆತನನ್ನು ಬೈದು, ಹೊಡೆದಿದ್ದಾಳೆ. ಆರು ಜನ ಮಹಿಳೆಯರು ಸೇರಿದಂತೆ ಒಟ್ಟು 12 ಜನರು ಸಾಗರ್​ಗೆ ಹೊಡೆದಿದ್ದಾರೆ.” ಎಂದು ತಿಳಿಸಿದ್ದಾರೆ.
ಸದ್ಯ ಆರೋಪಿಗಳನ್ನು ಗುರುತಿಸಿ ವಶಕ್ಕೆ ತೆಗೆದುಕೊಳ್ಳಲಾಗಿದ್ದು, ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
