ಬೆಂಗಳೂರು:ಐದು ವರ್ಷಗಳ ಹಿಂದೆ ಕಳ್ಳತನ ಮಾಡಿ ಸಿಕ್ಕಿಹಾಕಿಕೊಂಡಿದ್ದ ಕೆಲಸಗಾರ ಮತ್ತೆ ಕಳವು ಮಾಡಿ ಮಾಲೀಕನ ವಿರುದ್ಧ ಸೇಡು ತೀರಿಸಿಕೊಂಡಿದ್ದಾನೆ. ವಿಶೇಷವೆಂದರೆ, ಈ ಕಳವಿಗಾಗಿ ಆತ ವಿಮಾನದಲ್ಲಿ ಬಂದು ವಿಮಾನದಲ್ಲೇ ವಾಪಸ್ ಹೋಗಿದ್ದಾನೆ.
ಬೆಂಗಳೂರಿನ ಬಸವನಗುಡಿ ಠಾಣಾ ವ್ಯಾಪ್ತಿಯ ರಾಮ್​ದೇವ್​ ಬಟ್ಟೆ ಅಂಗಡಿಯಲ್ಲಿ ಇಂಥದ್ದೊಂದು ಕಳ್ಳತನ ನಡೆದಿದೆ. ಕಳವು ಮಾಡಿದ್ದ ಈ ವ್ಯಕ್ತಿ ರಾಜಸ್ಥಾನ ಮೂಲದವನಾಗಿದ್ದು, ಈ ಕಳವಿಗಾಗಿ ಆತ ವಿಮಾನದಲ್ಲಿ ಬೆಂಗಳೂರಿಗೆ ಬಂದು ವಿಮಾನದಲ್ಲಿ ಮರಳಿದ್ದಾನೆ.
ಇದನ್ನೂ ಓದಿ:ಲೋಕಾಯುಕ್ತ ಕಚೇರಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ ದೂರುದಾರ!; ಸೈಟ್​ ಕಬಳಿಕೆ ಬಗ್ಗೆ ದೂರು ಕೊಡಲು ಬಂದಿದ್ದ ಯುವಕ..
ಐದು ವರ್ಷಗಳ ಹಿಂದೆ ಈತ ಇದೇ ರಾಮ್​ದೇವ್​ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕಿದ್ದ. ಆ ಸಮಯದಲ್ಲಿ ಕಳ್ಳತನ ಮಾಡಿ ಸಿಕ್ಕಿಹಾಕಿಕೊಂಡಿದ್ದ. ನಂತರ ಈತ ಕೆಲಸ ಬಿಟ್ಟು ಹೋಗಿದ್ದ. ಆದರೆ ಕದ್ದು ಸಿಕ್ಕಿಬಿದ್ದಿದ್ದ ಈತ ಅಂಗಡಿ ಮಾಲೀಕನ ವಿರುದ್ಧ ದ್ವೇಷ ಬೆಳೆಸಿಕೊಂಡಿದ್ದ. ಕೆಲಸ ಬಿಟ್ಟ ಮೇಲೂ ಆಗಾಗ ಅಂಗಡಿ ಬಳಿಗೆ ಬಂದು ಗಮನಿಸಿ ಹೋಗಿದ್ದ ಎನ್ನಲಾಗಿದೆ.
ಇದನ್ನೂ ಓದಿ:ಸೊಸೆ ಜೊತೆ ಬೈಕ್​ನಲ್ಲಿ ತೆರಳುತ್ತಿದ್ದ ಮಾವ ಸಾವು; ಸಾವಿಗೆ ಕಾರಣನಾದವ ಪರಾರಿ..
ಕಳೆದ ವಾರ ಅಂಗಡಿಯಲ್ಲಿ ಯಾರೂ ಇಲ್ಲದ್ದನ್ನು ನೋಡಿ ಈತ ಈ ಕೃತ್ಯ ಎಸಗಿದ್ದಾನೆ. ಅಂಗಡಿಗೆ ನುಗ್ಗಿ ಡ್ರಾಯರ್​ನಲ್ಲಿದ್ದ 2 ಲಕ್ಷ ರೂಪಾಯಿ ಕದ್ದುಕೊಂಡು ಹೋಗಿದ್ದಾನೆ. ಇದಕ್ಕಾಗಿ ಈತ ರಾಜಸ್ಥಾನದಿಂದ ವಿಮಾನದಲ್ಲಿ ಬಂದಿದ್ದ ಎನ್ನಲಾಗಿದೆ. ಈ ಬಗ್ಗೆ ಅಂಗಡಿ ಮಾಲೀಕ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ವಿಶ್ವ ಹಿಂದು ಪರಿಷತ್ ಮುಖಂಡರ ಮೇಲೆ ಬಿಜೆಪಿ ನಾಯಕರಿಂದಲೇ ಹಲ್ಲೆಯತ್ನ; ಮೆರವಣಿಗೆ ವಿಚಾರ ಬಿಗಡಾಯಿಸಿ ಉಂಟಾಯ್ತು ಘರ್ಷಣೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 12 =
Remember me
