ಹರಿಯಾಣ:ಕೋವಿಡ್​ನಿಂದ ಸತ್ತವರ ಶವಗಳು ಮನೆಯವರಿಗೆ ಸಿಗುವುದೇ ಅಪರೂಪ. ಅದರಲ್ಲೂ ಹಾಗೆ ಸತ್ತವರ ಅಂತ್ಯಸಂಸ್ಕಾರ ಮನೆಯವರಿಂದ ನಡೆಯುವುದು ಕೂಡ ಅತಿವಿರಳ. ಅದೆಷ್ಟೋ ಕೋವಿಡ್​ ಶವಗಳ ಅಂತ್ಯಸಂಸ್ಕಾರವನ್ನು ಎಲ್ಲೋ ಇನ್ಯಾರೋ ಮಾಡಿಬಿಟ್ಟಿರುತ್ತಾರೆ. ಹೀಗೆ 300ಕ್ಕೂ ಅಧಿಕ ಕೋವಿಡ್​ ಶವಗಳ ಅಂತಿಮಸಂಸ್ಕಾರ ಮಾಡಿದ್ದವ ಕೊನೆಗೆ ಕರೊನಾ ಸೋಂಕಿಗೇ ಬಲಿಯಾಗಿದ್ದಾನೆ.
ಹರಿಯಾಣದ 43 ವರ್ಷ ವಯಸ್ಸಿನ ಪ್ರವೀಣ್​ ಕುಮಾರ್​ಗೆ ಮೊನ್ನೆಮೊನ್ನೆಯಷ್ಟೇ ಕೋವಿಡ್​ ಸೋಂಕು ತಗುಲಿದ್ದು ದೃಢಪಟ್ಟಿತ್ತು. ಆಮ್ಲಜನಕ ಮಟ್ಟ ಕುಸಿದಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಎರಡು ದಿನಗಳಲ್ಲಿ ದೇಹದಲ್ಲಿನ ಆಮ್ಲಜನಕ ಪ್ರಮಾಣ ಕ್ಷೀಣಿಸುತ್ತಲೇ ಇದ್ದಿದ್ದರಿಂದ ಅವರು ನಿನ್ನೆ ರಾತ್ರಿ ನಿಧನರಾದರು.
ಇದನ್ನೂ ಓದಿ:ಮಗ ಮಾಡಿದ ಆ ಒಂದು ಕೆಲಸ ಅಮ್ಮನನ್ನೂ ಬಲಿ ಪಡೆಯಿತಾ?; ಪತಿ ಸತ್ತ ಕೆಲವೇ ಕ್ಷಣಗಳಲ್ಲಿ ಪತ್ನಿಗೂ ಸಾವು!
ಹರಿಯಾಣದ ಹಿಸರ್ ಮುನಿಸಿಪಲ್ ಕಾರ್ಪೋರೇಷನ್​ನ ಕೋವಿಡ್​ ಶವಗಳ ಅಂತ್ಯಸಂಸ್ಕಾರ ಕುರಿತ ಟೀಮ್​ ನೇತೃತ್ವ ವಹಿಸಿದ್ದ ಪ್ರವೀಣ್, ಕಳೆದ ಒಂದು ವರ್ಷದಿಂದ ಕೋವಿಡ್​ನಿಂದ ಮೃತರಾದ 300ಕ್ಕೂ ಹೆಚ್ಚು ಮಂದಿಯ ಶವಗಳಿಗೆ ಗೌರವಯುತ ಅಂತ್ಯಸಂಸ್ಕಾರ ನಡೆಸಿದ್ದರು. ಹಿಸರ್ ಮುನಿಸಿಪಲ್ ಕಾರ್ಪೋರೇಷನ್​ನ ಸಫಾಯಿ ಕರ್ಮಾಚಾರಿ ಸಂಘದ ಅಧ್ಯಕ್ಷರಾಗಿದ್ದ ಪ್ರವೀಣ್ ಪಾರ್ಥಿವ ಶರೀರವನ್ನು ಹಿಸರ್​ನ ರಿಷಿನಗರ್ ಸ್ಮಶಾನದಲ್ಲಿ ಇಂದು ಕೋವಿಡ್ ಮಾರ್ಗಸೂಚಿಗಳಿಗೆ ಅನುಸಾರವಾಗಿ ಅಂತ್ಯಸಂಸ್ಕಾರ ನಡೆಸಲಾಗಿದೆ.
ಅವಳಿಗೆ ಗೊತ್ತೇ ಆಗದಂತೆ ಮಗಳು ಹುಟ್ಟಿದ್ಲಂತೆ!; ನಿದ್ರೆಯಲ್ಲಿದ್ದಾಗ ಆಯಿತು ಹೆರಿಗೆ!

ಹೆಂಡತಿಗೆ ಕಿರುಕುಳ ಕೊಟ್ಟು ಸಾವು ತಂದುಕೊಂಡ ಗಂಡ; ಆಕೆ ಹೊಡೆಯಿರಿ ಎಂದಳು, ಅವರಿಬ್ಬರು ಕೊಂದೇ ಬಿಟ್ಟರು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 9 =
Remember me
