ಮಹಾರಾಷ್ಟ್ರ:ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನಾಯಕಿ ಪಂಕಜಾ ಮುಂಡೆ ಸೋತರೆ, ನಾನು ಸಾವಿಗೆ ಶರಣಾಗುವೆ ಎಂದಿದ್ದ ವ್ಯಕ್ತಿಯೊಬ್ಬ ಇಂದು ಬಸ್​ ಅಪಘಾತದಲ್ಲಿ ಮೃತಪಟ್ಟಿದ್ದು, ಸಾರ್ವಜನಿಕರಲ್ಲಿ ಭಾರೀ ಆಶ್ಚರ್ಯ ಉಂಟುಮಾಡಿದೆ. ಹುಚ್ಚುತನದಲ್ಲಿ ನೀಡಿದ್ದ ಹೇಳಿಕೆ ಇಂದು ನಿಜವೇ ಆಗಿ ಹೋಯಿತೇ ಎಂದು ಅನೇಕರು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯಿಸಿದ್ದಾರೆ.
ಇದನ್ನೂ ಓದಿ:ಇದು JDS ಗೆಲುವಲ್ಲ; ಇದು ನನ್ನ ಮೇಲಿನ ಆಕ್ರೋಶದ ಗೆಲುವು ವೇದಿಕೆ ಮೇಲೆ ಎಂದು ಕಣ್ಣೀರಿಟ್ಟ ಡಿ ಕೆ ಸುರೇಶ್​
ಮಹಾರಾಷ್ಟ್ರದ ಬೀಡ್ ಜಿಲ್ಲೆಯಿಂದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನಾಯಕಿ ಪಂಕಜಾ ಮುಂಡೆ ಅವರು ಸೋತರೆ, ನಾನು ಜೀವಂತವಾಗಿ ಉಳಿಯುವುದಿಲ್ಲ ಎಂದು ವಿಡಿಯೋ ಮಾಡಿದ್ದ 38 ವರ್ಷದ ವ್ಯಕ್ತಿಯೊಬ್ಬರು ಬಸ್‌ನಡಿ ಸಿಲುಕಿ ಸಾವನ್ನಪ್ಪಿರುವ ಘಟನೆ ಅಹ್ಮದ್‌ಪುರ-ಅಂಧೋರಿ ರಸ್ತೆಯಲ್ಲಿ ಬೋರ್ಗಾಂವ್ ಪಾಟಿ ಬಳಿ ರಾತ್ರಿ 9 ಗಂಟೆ ಸುಮಾರಿಗೆ ಸಂಭವಿಸಿದೆ ಎಂದು ವರದಿಯಾಗಿದೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಪಂಕಜಾ ಮುಂಡೆ, ಬೀಡ್ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ಬಜರಂಗ್ ಸೋನಾವಾನೆ ವಿರುದ್ಧ 6,553 ಮತಗಳಿಂದ ಸೋತರು. ಪಂಕಜಾ ಅವರ ಸೋಲಿನಿಂದ ಕಂಗೆಟ್ಟಿದ್ದ ವ್ಯಕ್ತಿ, ಕೆಲವು ದಿನಗಳಿಂದ ಖಿನ್ನತೆಗೆ ಒಳಗಾಗಿದ್ದರು ಮತ್ತು ಮೌನಕ್ಕೆ ಶರಣಾಗಿದ್ದರು ಎಂದು ಆತನ ಕುಟುಂಬದವರು ತಿಳಿಸಿದ್ದಾರೆ.
ಇದನ್ನೂ ಓದಿ:ನಿಮ್ಮ ತಾಳಕ್ಕೆ ನಾವು ಕುಣಿಯಲು ಸಾಧ್ಯವಿಲ್ಲ; ನೆಟ್ಟಿಗರ ಒತ್ತಡಕ್ಕೆ ನಿರ್ಮಾಪಕರು ಗರಂ! ಅಸಲಿಗೆ ನಡೆದಿದ್ದೇನು?
ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿಯನ್ನು ಸಚಿನ್ ಕೊಂಡಿಬಾ ಮುಂಡೆ ಎಂದು ಗುರುತಿಸಲಾಗಿದ್ದು, ಲಾತೂರ್‌ನ ಅಹ್ಮದ್‌ಪುರದ ಯೆಸ್ಟರ್‌ನಲ್ಲಿ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಲೋಕಸಭಾ ಚುನಾವಣೆ ಫಲಿತಾಂಶಕ್ಕೂ ಮುನ್ನವೇ ಬೆದರಿಕೆ ವಿಡಿಯೋವನ್ನು ಬಿಡುಗಡೆ ಮಾಡಿದ್ದ ಸಚಿನ್​, ಇದೀಗ ಬಸ್​ ಚಕ್ರಕ್ಕೆ ಸಿಲುಕಿ ಮೃತಪಟ್ಟಿರುವುದು ಭಾರೀ ಅನುಮಾನಕ್ಕೆ ಕಾರಣವಾಗಿದೆ. ಇದು ನಿಜಕ್ಕೂ ಆತ್ಮಹತ್ಯೆಯೇ? ಅಥವಾ ಅಪಘಾತದಿಂದ ಸಾವನ್ನಪ್ಪಿರುವುದೇ ಎಂಬುದು ಪೊಲೀಸರ ತನಿಖೆಯಿಂದ ಸ್ಪಷ್ಟವಾಗಬೇಕಿದೆ,(ಏಜೆನ್ಸೀಸ್).
ನಿಮ್ಮ ತಾಳಕ್ಕೆ ಕುಣಿಯಲು ಸಾಧ್ಯವಿಲ್ಲ; ನೆಟ್ಟಿಗರ ಒತ್ತಡಕ್ಕೆ ನಿರ್ಮಾಪಕರು ಗರಂ! ಅಸಲಿಗೆ ನಡೆದಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 8 =
Remember me
