ನವದೆಹಲಿ:ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಆಪ್ತ ಸಹಾಯಕ ಎಂದು ಹೇಳಿಕೊಂಡು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರ ಆಪ್ತ ಸಹಾಯಕರಿಗೆ ಕರೆ ಮಾಡಿ ತನ್ನ ಕೆಲಸ ಮಾಡಿಸಿಕೊಳ್ಳಲು ಹೋದ ವ್ಯಕ್ತಿಯೊಬ್ಬ ಇದೀಗ ಸಿಕ್ಕಿಬಿದ್ದಿದ್ದಾನೆ.
ಇದೇ 3ರಂದು ಅಭಿಷೇಕ್ ದ್ವಿವೇದಿ ಅಕಾ ಶಿಬು ಎಂಬಾತ ಸಚಿವ ನಿತಿನ್ ಗಡ್ಕರಿಯವರ ಕಚೇರಿಗೆ ಕರೆ ಮಾಡಿದ್ದಾನೆ. ನಾನು ಅಮಿತ್‌ ಷಾ ಅವರ ಆಪ್ತ. ಗ್ವಾಲಿಯರ್‌ಗೆ ವರ್ಗಾವಣೆಯಾಗಿರುವ ನನ್ನ ಸ್ನೇಹಿತನ ವರ್ಗಾವಣೆ ರದ್ದುಪಡಿಸಲು ಕೋರಿ ಈ ಕಾಲ್‌ ಮಾಡಿರುವುದಾಗಿ ಅಭಿಷೇಕ್‌ ಹೇಳಿದ್ದಾರೆ.
ಈ ಮಾತನ್ನು ಕೇಳುತ್ತಿದ್ದಂತೆಯೇ ಗಡ್ಕರಿ ಅವರ ಕಾರ್ಯಾಲಯದ ಸಿಬ್ಬಂದಿ ಕೂಡಲೇ ಗಡ್ಕರಿಯವರ ಕಚೇರಿಗೆ ಮತ್ತು ಗೃಹಸಚಿವರ ಆಪ್ತ ಸಹಾಯಕರಿಗೆ ಕರೆ ಮಾಡಿದ್ದಾರೆ. ನಂತರ ಇದು ಸುಳ್ಳು ಎನ್ನುವುದು ತಿಳಿದುಬಂದಿದೆ. ಕೂಡಲೇ ಗೃಹಸಚಿವರ ಆಪ್ತ ಕಾರ್ಯದರ್ಶಿ ಈ ಸಂಬಂಧ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ:ಅಮ್ಮ-ಮಗಳು ಇಬ್ಬರಿಗೂ ಒಬ್ಬನೇ ಗಂಡ- ಬೀದಿಗೆ ಬಂದ ಜಗಳ!
ನಂತರ ಕರೆ ಮಾಡಿದ ವ್ಯಕ್ತಿಯ ಮೊಬೈಲ್ ಸಂಖ್ಯೆಯ ಬೆನ್ನುಹತ್ತಿ ಹೋದಾಗ ಈತ ಮಧ್ಯಪ್ರದೇಶದವನಾಗಿದ್ದು, ಸದ್ಯ ಮುಂಬೈನಲ್ಲಿರುವುದು ಪತ್ತೆಯಾಗಿದೆ. ಈ ಸಂಬಂಧ ಮುಂಬೈನ ಹಲವೆಡೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತು. ಆದರೆ ಆತ ಸಿಕ್ಕಿರಲಿಲ್ಲ. ತಾನು ಸಿಕ್ಕಿಹಾಕಿಕೊಂಡಿರುವುದು ತಿಳಿಯುತ್ತಲೇ ಈತ ಪಲಾಯನ ಮಾಡಿರಬೇಕು ಎಂದು ಪೊಲೀಸರು ಅಂದುಕೊಂಡರು.
ಆದರೂ ಶೋಧನಾ ಕಾರ್ಯ ಮುಂದುವರೆದಿತ್ತು. ಕೊನೆಯದಾಗಿ ಈ ಆಸಾಮಿ ಇಂಧೋರ್‌ನಲ್ಲಿ ಸಿಕ್ಕಿಬಿದ್ದಿದ್ದಾರೆ. ಕರೆ ಮಾಡಿದ ಮೊಬೈಲ್ ಹಾಗೂ ಸಿಮ್‌ಕಾರ್ಡ್ ವಶಪಡಿಸಿಕೊಳ್ಳಲಾಗಿದೆ. ತನ್ನ ಬಾಲ್ಯ ಸ್ನೇಹಿತ ವಿನಯ್ ಸಿಂಗ್ ಬಘೇಲ್ ಎಂಬಾತ ವರ್ಗಾವಣೆ ಆದೇಶ ರದ್ದುಪಡಿಸುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಈ ಕರೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ತನಿಖೆ ನಡೆಯುತ್ತಿದೆ.
ಜರ್ಮನಿಯ ಡ್ರೋನ್‌ ಕಂಪೆನಿಯಿಂದಲೂ ಪ್ರತಾಪ್‌ಗೆ ಸುತ್ತಿದೆ ಕಾನೂನು ಕುಣಿಕೆ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eleven + sixteen =
Remember me
