ಲಖನೌ:ಜೈಲಿನಲ್ಲಿ ಇದ್ದು ಬಂದವರನ್ನು ಜನರು ಕೀಳಾಗಿ ನೋಡುತ್ತಾರೆ, ಎಲ್ಲರೊಂದಿಗೆ ಸೆರವುದಕ್ಕೆ ಅವಕಾಶ ಸಿಗುವುದಿಲ್ಲ ಎನ್ನುವುದು ನಮ್ಮ ನಿಮ್ಮ ಕಲ್ಪನೆ. ಆದರೆ ಈ ಒಂದು ಗ್ರಾಮದ ಕಥೆಯೇ ಬೇರೆ. ಇಲ್ಲಿ ಆರು ವರ್ಷ ಜೈಲು ಶಿಕ್ಷೆ ಅನುಭವಿಸಿ ಬಂದವನನ್ನೇ ಗ್ರಾಮಸ್ಥರು ಮುಖ್ಯಸ್ಥನನ್ನಾಗಿ ಆಯ್ಕೆ ಮಾಡಿದ್ದಾರೆ.
ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯ ಛುನಾವ್ ಗ್ರಾಮದಲ್ಲಿ ಈ ರೀತಿ ವಿಶೇಷತೆಯಿದೆ. ಇಲ್ಲಿನ ರಾಮದಾಸ್​ ಹೆಸರಿನ ವ್ಯಕ್ತಿ ಕಳೆದ ಆರು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಬಂದಿದ್ದಾನೆ. ಕಳ್ಳತನ, ಮೋಸ, ವಂಚನೆ, ಕೊಲೆ ಸೇರಿ ಒಟ್ಟು 12 ಪ್ರಕರಣಗಳು ಆತನ ವಿರುದ್ಧವಿದೆ. ಹಾಗಿದ್ದರೂ ಗ್ರಾಮಸ್ಥರು ಆತನನ್ನೇ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಆಯ್ಕೆ ಮಾಡಿದ್ದಾರೆ.
ಅಂದ ಹಾಗೆ ಈ ರಾಮದಾಸ್​ ಪಂಚಾಯತಿ ಚುನಾವಣೆಗೆ ನಿಲ್ಲಲು ಜೈಲಿನಿಂದಲೇ ನಾಮಪತ್ರ ಸಲ್ಲಿಸಿದ್ದನಂತೆ. ರಾಮದಾಸ್​ಗೆ 786 ಮತಗಳು ಬಂದಿದ್ದರೆ ಆತನ ಪ್ರತಿಸ್ಪರ್ಧಿಗೆ ಕೇವಲ 300 ಮತಗಳು ಬಂದಿವೆ. ಗ್ರಾಮಸ್ಥರು ಇಟ್ಟಿರುವ ನಂಬಿಕೆಯ ಬಗ್ಗೆ ಮಾತನಾಡಿರುವ ಆತ, ಇನ್ನೆಂದೂ ತಪ್ಪು ಕೆಲಸ ಮಾಡುವುದಿಲ್ಲ, ಗ್ರಾಮಕ್ಕಾಗಿ ದುಡಿಯುತ್ತೇನೆ ಎಂದು ಭರವಸೆ ನೀಡಿದ್ದಾನೆ. (ಏಜೆನ್ಸೀಸ್)
ಹಾರ ಹಾಕುವ ಮೊದಲು 2ರ ಮಗ್ಗಿ ಹೇಳು ಎಂದ ವಧು! ಸ್ವಲ್ಪ ಹೊತ್ತಲ್ಲಿ ಮದುವೆಯೇ ಕ್ಯಾನ್ಸಲ್​!

ಎಲೆ ಮೇಲೆ ದೂಳು ಕೂತರೆ ಗಿಡಗಳ ಪ್ರಾಣವೇ ಹೋಗಬಹುದು! ಏಕಾಗಿ ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
