ಉತ್ತರಪ್ರದೇಶ:ಕುಟುಂಬಸ್ಥರು ಯಾರು ಇಲ್ಲ, ಎಂದರೆ ಅನಾಥಾಶ್ರಮ ಹಾಗೂ ಸರ್ಕಾರಕ್ಕೆ ತಮ್ಮ ಸಂಪೂರ್ಣ ಆಸ್ತಿಯನ್ನು ಬರೆಯುವುದನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬ ವೃದ್ಧ ಐವರು ಮಕ್ಕಳಿದ್ದರೂ 1.5 ಕೋಟಿ ಮೊತ್ತದ ಆಸ್ತಿಯನ್ನು ಉತ್ತರ ಪ್ರದೇಶ ಸರ್ಕಾರಕ್ಕೆ ಬರೆಯುವ ಮೂಲಕವಾಗಿ ಸುದ್ದಿಯಾಗಿದ್ದಾರೆ.
ಮುಜಾಫರ್​ನಗರದ ನಿವಾಸಿ ನಾಥು ಸಿಂಗ್ ಅವರು 1.5 ಕೋಟಿ ಮೌಲ್ಯದ ಮನೆ ಹಾಗೂ ಜಮೀನು ಹೊಂದಿದ್ದಾರೆ. ಅವರಿಗೆ ಒಬ್ಬ ಮಗ ಇದ್ದು, ಅವರು ಶಾಲಾ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ನಾಲ್ವರು ಹೆಣ್ಣುಮಕ್ಕಳಿದ್ದು ಎಲ್ಲರಿಗೂ ವಿವಾಹವಾಗಿದೆ. ಪತ್ನಿಯ ಸಾವಿನ ಬಳಿಕ ನಾಥು ಸಿಂಗ್ ಒಬ್ಬರೇ ಜೀವನ ನಡೆಸುತ್ತಿದ್ದರು, ಏಳು ತಿಂಗಳುಗಳ ಕಾಲ ತಮ್ಮ ಗ್ರಾಮದ ವೃದ್ಧಾಶ್ರಮದಲ್ಲಿದ್ದರು.
ಇದನ್ನೂ ಓದಿ:ಬೀದಿ ನಾಯಿ ಸಮಸ್ಯೆಗೆ ಪರಿಹಾರ: ಬೀದಿ ಬದಿಯ ಶ್ವಾನಗಳನ್ನು ಸೇವನೆಗಾಗಿ ಅಸ್ಸಾಂಗೆ ಕಳುಹಿಸಿ ಎಂದ ಶಾಸಕ
ಈ ವಯಸ್ಸಿನಲ್ಲಿ ಮಗ ಹಾಗೂ ಸೊಸೆಯೊಂದಿಗೆ ವಾಸಿಸಬೇಕಿತ್ತು. ಕುಟುಂಬದ ಯಾರೂ ಅವರನ್ನು ಭೇಟಿಯಾಗಲು ಬಾರದ ಕಾರಣ ಅವರ ಮನಸ್ಸಿಗೆ ತುಂಬಾ ನೋವಾಗಿತ್ತು. ಹೀಗಾಗಿ ಆಸ್ತಿಯನ್ನು ಸರ್ಕಾರಕ್ಕೆ ಬರೆದ ನಾಥು ಸಿಂಗ್ ಅವರ ತಮ್ಮ ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡಿದ್ದಾರೆ ಮತ್ತು ಮಗ ಹಾಗೂ ನಾಲ್ವರು ಪುತ್ರಿಯರನ್ನು ಅವರ ಅಂತಿಮ ವಿಧಿಗಳಲ್ಲಿ ಪಾಲ್ಗೊಳ್ಳದಿರುವಂತೆ ತನ್ನ ಆಸ್ತಿಯ ವಿಲ್ ಮಾಡಿ, ಅವರ ಮರಣ ನಂತರ ಆಸ್ಪತ್ರೆ ಅಥವಾ ಶಾಲೆಯನ್ನು ನಿರ್ಮಿಸುವಂತೆ ಕೇಳಿದ್ದಾರೆ.
ವೃದ್ಧಾಶ್ರಮಕ್ಕೆ ಬಂದು 7 ತಿಂಗಳಾದರೂ ಕುಟುಂಬದವರು ಯಾರೂ ಕೂಡ ಅವರು ಹೇಗಿದ್ದಾರೆ ಎಂದು ತಿಳಿಯಲು ವೃದ್ಧಾಶ್ರಮಕ್ಕೆ ಆಗಮಿಸಿಲ್ಲ ಎಂದು ಮ್ಯಾನೇಜರ್ ರೇಖಾ ಸಿಂಗ್ ಹೇಳಿದ್ದಾರೆ.
ರೈತರಿಗೆ ಪ್ರತಿ ವರ್ಷ 15 ಸಾವಿರ ರೂ. ಕೊಡುತ್ತೇನೆ: ಜನಾರ್ದನ ರೆಡ್ಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + five =
Remember me
