ಅಹಮದಾಬಾದ್​:ಗಡಿ ಭದ್ರತಾ ಪಡೆ(BSF)ಯಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯೋರ್ವ ಪಾಕ್​ ಗೂಢಾಚಾರಿಣಿಯ ಅಂದಕ್ಕೆ ಮಾರುಹೋಗಿ ಆಕೆಯ ಜೊತೆ ದೇಶಕ್ಕೆ ಸಂಬಂಧಿಸಿದ ಹಲವು ಸೂಕ್ಷ್ಮ ಮಾಹಿತಿಗಳನ್ನು ಹಂಚಿಕೊಂಡಿರುವುದು ಬೆಳಕಿಗೆ ಬಂದಿದೆ.
ಬಂಧಿತನನ್ನು ನಿಲೇಶ್​ ಬಲಿಯಾ ಎಂದು ಗುರುತಿಸಲಾಗಿದ್ದು, ಈತ ಬಿಎಸ್​ಎಫ್​ನಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿದ್ದ ಎಂದು ತಿಳಿದು ಬಂದಿದೆ. ಭುಜ್​ನಲ್ಲಿರುವ ಬಿಎಸ್​ಎಫ್​ ಲೋಕೋಪಯೋಗಿ ಇಲಾಖೆಯ ಎಲೆಕ್ಟ್ರಿಕಲ್​ ವಿಭಾಗದಲ್ಲಿ ಈತ ಆಫೀಸ್​ ಬಾಯ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಎಂದು ವರದಿಯಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಎಟಿಎಸ್​ ವರಿಷ್ಠಾಧಿಕಾರಿ ಸುನೀಲ್​ ಜೋಶಿ ಬಂಧಿತ ಆರೋಪಿ ಬಲಿಯಾನನ್ನು ಪಾಕ್​ ಗೂಢಾಚಾರಿಣಿ ವಾಟ್ಸ್​ಆ್ಯಪ್​ ಮೂಲಕ ಜನವರಿಯಲ್ಲಿ ಸಂಪರ್ಕಿಸಿದ್ದಾಳೆ. ಮೊದಲಿಗೆ ಆಕೆ ತನ್ನನ್ನು ತಾನು ಅದಿತಿ ತಿವಾರಿ ಎಮದು ಪರಿಚಯಿಸಿಕೊಂಡಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾಳೆ.
ಇದನ್ನೂ ಓದಿ:ಲೈಂಗಿಕ ಕ್ರಿಯೆಗೆ ಅಡ್ಡಿ?; ಬಾಲಕನ ಮೇಲೆ ಸಿಂಹಗಳ ದಾಳಿ
ದಿನ ಕಳೆದಂತೆ ಇಬ್ಬರ ನಡುವೆ ಆತ್ಮೀಯತೆ ಬೆಳೆದಿದ್ದು, ಇದನ್ನೇ ದುರುಪಯೋಗ ಪಡಿಸಿಕೊಂಡ ಗೂಢಾಚಾರಿಣಿ ಆರೋಪಿ ಕಡೆಯಿಂದ ಕೆಲ ಅತಿಸೂಕ್ಷ್ಮ ಮಾಹಿತಿಗಳನ್ನು ಪಡೆದು ಅದಕ್ಕೆ ಬದಲಾಗಿ ಆನ್​ಲೈನ್​ ಮೂಲಕ ಹಣವನ್ನು ವರ್ಗಾಯಿಸಿದ್ದಾಳೆ. ಬಳಿಕ ಈತನನ್ನು ಹನಿಟ್ರ್ಯಾಪ್​ ಮಾಡಿ ಬಿಎಸ್​ಎಫ್​ಗೆ ಸಂಬಂಧಿಸಿದ ಮತ್ತಷ್ಟು ಮಾಹಿತಿಯನ್ನು ಕಲೆಹಾಕಿದ್ದಾಳೆ.
ನಿಲೇಶ್​ ಬಲಿಯಾ ಮೇಲೆ ಅನುಮಾನಗೊಂಡ ಹಿರಿಯ ಅಧಿಕಾರಿಗಳು ಈ ಬಗ್ಗೆ ಎಟಿಎಸ್​ಗೆ ತಿಳಿಸಿದ್ದಾರೆ. ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಆರೋಪಿ ಪಾಕ್​ ಗೂಢಾಚಾರಿಣಿಯೊಂದಿಗೆ ಶಾಮೀಲಾಗಿರುವುದು ಪಕ್ಕಾ ಆಗಿದೆ. ಆರೋಪಿಯನ್ನು ಕರೆದು ವಿಚಾರಣೆ ನಡೆಸಿದಾಗ ಆತ ನಡೆದ ವಿಚಾರಗಳನ್ನೆಲ್ಲಾ ಹೇಳಿದ್ದಾನೆ.
ಬಂಧಿತ ಆರೋಪಿ ವಿರುದ್ಧ ಭಾರತ ದಂಡ ಸಂಹಿತೆ(IPC Section) 120-B, 121, 121-A, 123 ಅಡಿ ಪ್ರಕರಣ ದಾಖಲಿಸಲಾಗಿದ್ದು, ಸೋಮವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಚಾರ್ಜ್​ಶೀಟ್​ ಸಲ್ಲಿಸಲಾಗುವುದು ಎಂದು ಎಟಿಎಸ್​ ವರಿಷ್ಠಾಧಿಕಾರಿ ಸುನೀಲ್​ ಜೋಶಿ ತಿಳಿಸಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 9 =
Remember me
