ನೆಲ್ಲೂರು: ಕರೊನಾ ವೈರಸ್‌ ಹಾಗೂ ಲಾಕ್‌ಡೌನ್‌ ಎಂಬ ಮಾಯಾಜಾಲ ಯಾರಾರ ಬಳಿಯಿಂದ ಅದೇನೇನೋ ಮಾಡಿಸಿಬಿಡುತ್ತಿದೆ. ದಂಪತಿ ನಡುವೆ ಜಗಳ, ಅಪ್ಪನ ವಿರುದ್ಧ ಮಗನ ದೂರು, ಗಂಡನ ವಿರುದ್ಧ ಹೆಂಡತಿ ಕಂಪ್ಲೇಂಟ್‌, ನೂರಾರು ಕಿ.ಮೀ ಕಾಲ್ನಡಿಗೆಯಲ್ಲಿಯೇ ಹೊರಟ ಕಾರ್ಮಿಕರು, ಹೆಂಡ ಸಿಗದೇ ಆತ್ಮಹತ್ಯೆ, ಅಬ್ಬಾ ಇನ್ನೂ ಏನೇನೋ…
ಈ ರೀತಿಯ ನೋವು ಭರಿತ ಸುದ್ದಿಗಳ ನಡುವೆಯೇ, ಕರೊನಾ ವೈರಸ್‌ ಅಮ್ಮಂದಿರ ಧೀಶಕ್ತಿಯನ್ನು ಸಮಾಜದ ಮುಂದೆ ಬಿಚ್ಚಿಟ್ಟಿದ್ದಂತೂ ಸುಳ್ಳಲ್ಲ. ಮೊನ್ನೆಯಷ್ಟೇ ಬೆಳಗಾವಿಯ ಸುಗಂಧಾ ಎನ್ನುವ ನರ್ಸ್‌, ಕರೊನಾ ವೈರಸ್‌ ಸೋಂಕಿತರ ಸೇವೆಯಲ್ಲಿ ತೊಡಗಿಕೊಂಡ ಕಾರಣ, ತನ್ನ ಮೂರು ವರ್ಷದ ಕಂದಮ್ಮ ಕಣ್ಣೆದುರಿಗೆ ಇದ್ದರೂ, ತನಗಾಗಿ ಮಗು ರೋಧಿಸುತ್ತಿದ್ದರೂ, ವೈರಸ್‌ ಭೀತಿಯಿಂದ ಆಕೆಯ ಬಳಿ ಹೋಗದೇ ಮನಸ್ಸನ್ನು ಗಟ್ಟಿಮಾಡಿಕೊಂಡಿರುವ ಸುದ್ದಿಯ ಬೆನ್ನಲ್ಲೇ, ಇಲ್ಲೊಬ್ಬ ಅಮ್ಮ, ಲಾಕ್‌ಡೌನ್‌ನಲ್ಲಿ ಸಿಕ್ಕಿಬಿದ್ದ ಮಗನಿಗಾಗಿ ಸ್ಕೂಟಿಯಲ್ಲಿಯೇ 1,400 ಕಿ.ಮೀ ಪ್ರಯಾಣ ಬೆಳೆಸಿ ಮಗನನ್ನು ವಾಪಸ್‌ ಕರೆತಂದಿದ್ದಾರೆ.
ಇದು ನಡೆದಿದ್ದು ತೆಲಂಗಾಣದಲ್ಲಿ. ಇಲ್ಲಿಯ ಬೋಧಾನ್‌ ಎಂಬ ಗ್ರಾಮದಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ರಜಿಯಾ ಬೇಗಂ ಇಂಥದ್ದೊಂದು ಸಾಹಸಕ್ಕೆ ಕೈಹಾಕಿದವರು. ಇವರ ಮಗ ಮೊಹಮ್ಮದ್‌ ನಿಜಾಮುದ್ದೀನ್‌, ಹೈದರಾಬಾದ್‌ನಲ್ಲಿ ವೈದ್ಯಕೀಯ ಪರೀಕ್ಷೆಗಾಗಿ ಸಿದ್ಧತೆ ನಡೆಸುತ್ತಿದ್ದ. ನೆಲ್ಲೂರಿನಲ್ಲಿ ಇರುವ ಆತನ ಗೆಳೆಯನ ತಂದೆ ಅನಾರೋಗ್ಯಪೀಡಿತರಾಗಿರುವುದನ್ನು ತಿಳಿದು ಆರೋಗ್ಯ ವಿಚಾರಿಸಲು ತೆರಳಿದ್ದ. ಆದರೆ ಅದೇ ವೇಳೆ ಲಾಕ್ ಡೌನ್ ಘೋಷಣೆಯಾಗಿಬಿಟ್ಟಿತು. ಇದರಿಂದಾಗಿ ಆತ ನೆಲ್ಲೂರ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದ.
ಸಾರ್ವಜನಿಕ ವಾಹನ ಸೇರಿದಂತೆ ಎಲ್ಲವೂ ಸ್ಥಗಿತಗೊಂಡಿದ್ದರಿಂದ ಆತನಿಗೆ ವಾಪಸ್‌ ಬರಲು ಸಾಧ್ಯವಾಗಲಿಲ್ಲ. ಏನು ಮಾಡುವುದು ಎಂದು ತಿಳಿಯದ ರಜಿಯಾ ಅವರು, ತಮ್ಮ ಬಳಿ ಇರುವ ಸ್ಕೂಟಿಯಲ್ಲಿಯೇ ಕರೆದುಕೊಂಡು ಬರುವ ನಿರ್ಧಾರ ಮಾಡಿದರು. ಆದರೆ ಮಗ ಇದ್ದುದು ಸುಮಾರು 700 ಕಿ.ಮೀ ದೂರದಲ್ಲಿ. ಸ್ಕೂಟಿಯಲ್ಲಿ ಇಷ್ಟೊಂದು ದೂರದ ಪ್ರಯಾಣ ಸಾಧ್ಯವೆ ಎಂದುಕೊಂಡರೂ ಹೋಗುವ ನಿರ್ಧಾರಕ್ಕೆ ಬಂದೇ ಬಿಟ್ಟರು. ಬೋಧಾನ್ ಎಸಿಪಿ ಜೈಪಾಲ್ ರೆಡ್ಡಿ ಅವರನ್ನು ಭೇಟಿಯಾಗಿ ಕರ್ಫ್ಯೂ ಪಾಸ್ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಅವರು ವಿಚಾರಣೆ ನಡೆಸಿದ ಬಳಿಕ ಪಾಸ್‌ ನೀಡಲು ಒಪ್ಪಿಕೊಂಡರು. ಪಾಸ್‌ ಪಡೆದ ರಜಿಯಾ ಬಿಸ್ಕತ್ತು, ತಿಂಡಿ, ನೀರಿನ ಬಾಟಲ್ ತೆಗೆದುಕೊಂಡು ಸ್ಕೂಟಿಯಲ್ಲಿ ಪ್ರಯಾಣಿಸಿದ್ದರು ಎನ್ನಲಾಗಿದೆ.
ಕಳೆದ ಸೋಮವಾರ ಬೆಳಗ್ಗೆ ಸ್ಕೂಟಿಯಲ್ಲಿ ಹೊರಟು ಮಂಗಳವಾರ ಮಧ್ಯಾಹ್ನ ಆಂಧ್ರಪ್ರದೇಶ-ತಮಿಳುನಾಡು ಗಡಿಯಲ್ಲಿನ ನೆಲ್ಲೂರ್ ಅನ್ನು ತಲುಪಿದ್ದರು. ನಂತರ ಮಗನನ್ನು ಕರೆದುಕೊಂಡು ಬುಧವಾರ ಸಂಜೆ ಮನೆಗೆ ವಾಪಸ್ ಆಗಿದ್ದರು. ಈ ಮೂರು ದಿನಗಳ ದೀರ್ಘ ಪ್ರಯಾಣದಲ್ಲಿ ರಜಿಯಾ 1,400 ಕಿಲೋ ಮೀಟರ್ ನಷ್ಟು ದೂರ ಕ್ರಮಿಸಿರುವುದಾಗಿ ವರದಿ ತಿಳಿಸಿದೆ.
‘ಪ್ರಯಾಣದ ವೇಳೆ ತೆಲಂಗಾಣ ಮತ್ತು ಆಂಧ್ರಪ್ರದೇಶದ ಚೆಕ್ ಪೋಸ್ಟ್‌ಗಳಲ್ಲಿ ಪೊಲೀಸರು ತಪಾಸಣೆ ನಡೆಸಿ ವಿವರಣೆ ಕೇಳಿದ್ದರು. ಪ್ರಯಾಣದ ವೇಳೆ ಪೊಲೀಸರು ನೆರವು ನೀಡಿರುವುದಾಗಿ ರಜಿಯಾ ತಿಳಿಸಿದ್ದಾರೆ. (ಏಜನ್ಸೀಸ್‌)
ಬಾಪೂಜಿನಗರ, ಪಾದರಾಯನಪುರ ಸೀಲ್ ಡೌನ್: ಯಾವುದೇ ಕಾರಣಕ್ಕೂ ಹೊರಗೆ ಬರಲು ಅವಕಾಶವಿಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
