ಮುಂಬೈ:ತಾನು ಕೆಲಸ ಮಾಡುತ್ತಿದ್ದ ರೆಸ್ಟೋರೆಂಟ್​ನಲ್ಲೇ ಕಳವು ಮಾಡಿದ ಮ್ಯಾನೇಜರ್​ ವಿರುದ್ಧ ಇದೀಗ ದೂರು ದಾಖಲಾಗಿದೆ.ದಕ್ಷಿಣ ಮುಂಬೈನಲ್ಲಿ ಇರುವ ರೆಸ್ಟೋರೆಂಟ್​ವೊಂದರಲ್ಲಿ ಘಟನೆ ನಡೆದಿದೆ. ಮ್ಯಾನೇಜರ್​ ತಾನು ಕೆಲಸ ಮಾಡುತ್ತಿದ್ದ ರೆಸ್ಟೋರೆಂಟ್​​ನಿಂದ 50 ಲಿಕ್ಕರ್​ ಬಾಟಲಿಗಳು, ಒಂದಷ್ಟು ಬಟರ್​, ಚೀಸ್​​​ನಂತಹ ಆಹಾರ ಸಾಮಗ್ರಿಗಳು, ಸುಶಿ ಚಾಕುಗಳು, ಮೈಕ್ರೋವೇವ್​ ಓವನ್​ಗಳನ್ನು ಕದ್ದೊಯ್ದಿದ್ದಾನೆ ಎಂದು ದೂರು ದಾಖಲು ಮಾಡಲಾಗಿದೆ.
ಈ ರೆಸ್ಟೊರೆಂಟ್​ ಹೆಸರು ಕೈಬಾ. ರೆಸ್ಟೋರೆಂಟ್​ ಮಾಲೀಕ ಅಫ್ತಾಬ್​ ಇಕ್ಬಾಲ್​ ಮೂನ್​. ಇವರು ಗುರುವಾರ ಆಕಸ್ಮಿಕವಾಗಿ ರೆಸ್ಟೋರೆಂಟ್​ಗೆ ಬಂದಾಗ ಅಲ್ಲಿ ಅನೇಕ ವಸ್ತುಗಳು ಇಲ್ಲದೆ ಇರುವುದು ಗಮನಕ್ಕೆ ಬಂದಿದೆ.
ರೆಸ್ಟೋರೆಂಟ್​​ನಲ್ಲಿ ಹಲವು ವಸ್ತುಗಳನ್ನು ಇಲ್ಲದಿರುವುದನ್ನು ಗಮನಿಸಿದ ಮಾಲೀಕ ಮೂನ್​ ಅವರು ಈ ಬಗ್ಗೆ ವಾಚ್​ಮನ್​ನ್ನು ಕೇಳಿದ್ದಾರೆ. ಆಗ ವಾಚ್​ಮನ್ ರೆಸ್ಟೋರೆಂಟ್​ ಮ್ಯಾನೇಜರ್​ ಜಾಕ್ಸನ್​ ಜಾನ್​ ಅವರು ಲಿಕ್ಕರ್​ ಬಾಟಲಿಗಳನ್ನು ಕೊಂಡೊಯ್ದಿದ್ದನ್ನು ನೋಡಿದ್ದಾಗಿ ಹೇಳಿದ್ದಾನೆ.ಇದನ್ನೂ ಓದಿ:ನವಿಲುತೀರ್ಥ ಡ್ಯಾಂನಿಂದ 10 ಸಾವಿರ ಕ್ಯೂಸೆಕ್ಸ್​ ನೀರು ಬಿಡುಗಡೆ: ಮಲಪ್ರಭಾ ನದಿ ತೀರದಲ್ಲಿ ಪ್ರವಾಹ ಭೀತಿ
ನಂತ ಮೂನ್​ ತನ್ನ ಉಳಿದ ಇಬ್ಬರು ಪಾರ್ಟ್ನರ್​​ಗಳಿಗೆ ವಿಷಯ ತಿಳಿಸಿದ್ದಾರೆ. ಮೂವರೂ ಕೂಡ ಜಾನ್​​ಗೆ ಕರೆ ಮಾಡಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಈಗ ಎಲ್ಲರೂ ಸೇರಿ ಜಾನ್​​ರನ್ನು ಹುಡುಕಿಕೊಡುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ. (ಏಜೆನ್ಸೀಸ್​)
ಈಕೆಗೆ ಐಷಾರಾಮಿ ರೂಮೇ ಬೇಕಿತ್ತಂತೆ: ಸುಂದರಿಯ ಜಾಲಕ್ಕೆ ಸಿಲುಕಿದವನ ವ್ಯಥೆ ಇದು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 7 =
Remember me
