Manakonduru Congress Mla Satyanarayana Assult Woman In New Year Celebrations
ಹೈದರಾಬಾದ್​:ಕರೀಂನಗರ ಜಿಲ್ಲೆಯ ಮಣಕೊಂಡೂರು ಕ್ಷೇತ್ರದಲ್ಲಿ ಆಯೋಜಿಸಿದ್ದ ಹೊಸ ವರ್ಷಾಚರಣೆಯಲ್ಲಿ ಕಾಂಗ್ರೆಸ್ ಶಾಸಕ ಕವ್ವಂಪಲ್ಲಿ ಸತ್ಯನಾರಾಯಣ ಕೇಕ್ ಕತ್ತರಿಸುವ ಸಂದರ್ಭದಲ್ಲಿ ಮಹಿಳಾ ಕಾರ್ಯಕರ್ತರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಶಾಸಕ ಚೇಷ್ಟೆ ಮಾಡಿದ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ:ಕಾಟೇರ ಒಟಿಟಿ ರಿಲೀಸ್ ಯಾವಾಗ?​ ಯಾರ ಪಾಲಾಯ್ತು ಹಕ್ಕು? ಇಲ್ಲಿದೆ ಮಾಹಿತಿ..ಎಲ್ಲೆಡೆಯಂತೆ ಮಣಕೊಂಡೂರು ಕ್ಷೇತ್ರದಲ್ಲಿಯೂ ಹೊಸ ವರ್ಷಾಚರಣೆ ಅದ್ಧೂರಿಯಾಗಿ ನಡೆಯಿತು. ಯುವಕರ ಜತೆಗೆ ಜನಪ್ರತಿನಿಧಿಗಳೂ ಪಾಲ್ಗೊಂಡಿದ್ದರು. ಆಟೋಟಗಳ ಜತೆಗೆ ಮನರಂಜನೆಗಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಡಿ.31ರ ಮಧ್ಯರಾತ್ರಿ ಸರಿಯಾಗಿ 12 ಗಂಟೆಗೆ ಕೇಕ್ ಕತ್ತರಿಸಿ ಪಟಾಕಿ ಸಿಡಿಸಿ ಹೊಸ ವರ್ಷವನ್ನು ಸ್ವಾಗತಿಸಲಾಯಿತು.
ಹೊಸ ವರ್ಷಾಚರಣೆ ಇಷ್ಟಕ್ಕೇ ಆಗಿದ್ದರೆ ಯಾರ ಅಭ್ಯಂತರವೂ ಇರಲಿಲ್ಲ. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಶಾಸಕ ಕವ್ವಂಪಲ್ಲಿ ಸತ್ಯನಾರಾಯಣ ಅತ್ಯುತ್ಸಾಹ ತೋರಿದರು. ಕೇಕ್ ಕತ್ತರಿಸುವ ಸಂದರ್ಭದಲ್ಲಿ ಮಹಿಳಾ ಕಾರ್ಯಕರ್ತರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಇವರ ಪಕ್ಕಕ್ಕೆ ಬಿದ್ದ ಮಹಿಳಾ ಕಾರ್ಯಕರ್ತೆಯ ಮುಖಕ್ಕೆ ಕೇಕ್ ಬಳಿದಿದ್ದಾರೆ.
ಇನ್ನೂ ವಿಶೇಷವೆಂದರೆ ರಾಜ್ಯ ಸಚಿವ ಪೊನ್ನಂ ಪ್ರಭಾಕರ್ ಅವರನ್ನು ಸಹ ಪಕ್ಕಕ್ಕೆ ತಳ್ಳಿ ಶಾಸಕ ಸತ್ಯನಾರಾಯಣ ಮಹಿಳಾ ಕಾರ್ಯಕರ್ತೆಯ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಮಣಕೊಂಡೂರಿನ ಶಾಸಕರ ವಿರುದ್ಧ ನೆಟ್ಟಿಗರು ಹಾಗೂ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕ ಮಹಿಳೆ ಜೊತೆ ತೋರಿದ ಅಗೌರವದ ವರ್ತನೆಗೆ ಅಧಿಕಾರದ ಧರ್ಪವೇ ಕಾರಣ ಎಂದು ಆರೋಪಿಸಸುತ್ತಿದ್ದಾರೆ. ಶಾಸಕ ಈಗ ಟ್ರೋಲ್​ ಆಗಿದ್ದಾರೆ.
ಪಾಕ್ ಪಂದ್ಯಕ್ಕೂ ಮುನ್ನ ವಾರ್ನರ್ ಗ್ರೀನ್ ಕ್ಯಾಪ್ ಕಳುವು!: ಹುಡುಕಿಕೊಡಲು ಮನವಿ-ಈ ಕ್ಯಾಪ್​ಗೇಕೆ ಅಷ್ಟೊಂದು ಮಹತ್ವ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 4 =
Remember me
