ಮಂಚೇರಿಯಲ್:ಬ್ಯಾಂಕ್ ದರೋಡೆ ಮಾಡಲು ಹೋದ ಕಳ್ಳನಿಗೆ ವಿಚಿತ್ರ ಅನುಭವವಾಗಿದ್ದು, ತಮಾಷೆಯ ಪತ್ರ ಬರೆದಿಟ್ಟು ಹೋಗಿರುವ ಘಟನೆ ತೆಲಂಗಾಣದ ಮಂಚೇರಿಯಲ್​ ಜಿಲ್ಲೆಯ ನೆನ್ನಾಲ್​ಮಂಡಲಲ್ಲಿ ನಡೆದಿದೆ.
ಇದನ್ನೂ ಓದಿ:ಮಾಟ ಮಾಡಿದ್ದಾಳೆಂಬ ಅನುಮಾನದ ಮೇಲೆ 65 ವರ್ಷದ ವೃದ್ಧೆಯ ದಾರುಣ ಹತ್ಯೆ
ತೆಲಂಗಾಣ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಗುರುವಾರದಂದು ಮಧ್ಯರಾತ್ರಿ ಅಪರಿಚಿತ ಕಳ್ಳನೊಬ್ಬ ದರೋಡೆಗೆ ಯತ್ನಿಸಿದ್ದಾನೆ. ಸೆಕ್ಯುರಿಟಿಯಿಂದ ತಪ್ಪಿಸಿಕೊಂಡು ಬ್ಯಾಂಕ್​ನ ಬೀಗ ಒಡೆದು ಒಳಗೆ ಹೋಗಿರುವ ಆತ ಲಾಕರ್ ಕೋಣೆಗೆ ನುಸುಳಲು ಪ್ರಯತ್ನಿಸಿದ್ದು, ಆತನ ಪ್ರಯತ್ನ ವಿಫಲವಾಗಿದೆ.
ಕೊನೆಗೆ ಬ್ಯಾಂಕ್​ನಲ್ಲಿ ಹುಡುಕಾಡಿದರೂ ಆತನಿಗೆ ಒಂದು ರೂಪಾಯಿಯೂ ಸಿಕ್ಕಿಲ್ಲ. ಈ ಕಳ್ಳತನ ಯಶಸ್ವಿಯಾದರೆ ತನ್ನ ಜೀವನ ಸೆಟಲ್​ ಆಗುತ್ತದೆ. ರಾತ್ರೋರಾತ್ರಿ ಕೋಟ್ಯಾಧಿಪತಿಯಾಗುತ್ತೇನೆ ಎಂದು ಕನಸು ಕಂಡಿದ್ದ ಆತನಿಗೆ ಬ್ಯಾಂಕಿನಲ್ಲಿ ಏನೂ ಸಿಗದ ಕಾರಣ ‘ಒಳ್ಳೆಯ ಬ್ಯಾಂಕ್, ಒಂದು ರೂಪಾಯಿಯೂ ಸಿಕ್ಕಿಲ್ಲ, ನನ್ನನ್ನು ಹಿಡಿಯಬೇಡಿ ನನ್ನ ಬೆರಳಚ್ಚು ಕೂಡ ಇಲ್ಲ’ ಎಂದು ಪತ್ರ ಬರೆದು ಅಲ್ಲಿಂದ ಹೊರಟು ಹೋಗಿದ್ದಾನೆ.
ಇದನ್ನೂ ಓದಿ:ಕೇವಲ 6000ರೂ.ಗೆ ಮಗುವಿನ ಮಾರಾಟಕ್ಕೆ ಯತ್ನಿಸಿದ ಹೆತ್ತ ತಾಯಿ..
ಮರುದಿನ ಬೆಳಿಗ್ಗೆ ಬ್ಯಾಂಕ್‌ಗೆ ಬಂದ ಅಧಿಕಾರಿಗಳು ಬೀಗ ಮುರಿದಿರುವುದು ಗಮನಿಸಿದ್ದಾರೆ. ಆ ಬಳಿಕ ಬ್ಯಾಂಕಿನಲ್ಲಿ ಸಿಕ್ಕ ಪತ್ರದ ಆಧಾರದ ಮೇಲೆ ಪೊಲೀಸರಿಗೆ ದೂರು ನೀಡಲಾಗಿದ್ದು ಪ್ರಕರಣ ದಾಖಲಿಸಿಕೊಂಡ ಪೋಲಿಸರು ತನಿಖೆ ಆರಂಭಿಸಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + five =
Remember me
