ಹೈದರಾಬಾದ್​:ಮಂಚು ವಿಷ್ಣು ನಾಯಕರಾಗಿರುವ ‘ಕಣ್ಣಪ್ಪ’ ದೊಡ್ಡ ಬಜೆಟ್‌ ಚಿತ್ರ. ಖ್ಯಾತ ಹಿರಿಯ ನಟ ಮೋಹನ್ ಬಾಬು 150 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸುತ್ತಿದ್ದಾರೆ. ಹಾಲಿವುಡ್ ತಂತ್ರಜ್ಞರ ಜೊತೆ ವಿಶುವಲ್ ವಂಡರ್ ಆಗಿ ಚಿತ್ರ ತಯಾರಾಗುತ್ತಿದೆ. ಮಹಾಶಿವರಾತ್ರಿ ಸಂದರ್ಭದಲ್ಲಿ ಚಿತ್ರದ ಫಸ್ಟ್ ಲುಕ್ ಅನ್ನು ನಿರ್ಮಾಪಕರು ಬಿಡುಗಡೆ ಮಾಡಿದ್ದಾರೆ. ಸಿನಿಪ್ರೇಮಿಗಳು ಮತ್ತು ಅಭಿಮಾನಿಗಳ ಫಿದಾ ಆಗಿದ್ದಾರೆ.
ಇದನ್ನೂ ಓದಿ:miss-world-2024: ಮಿಸ್​ ವರ್ಲ್ಡ್ ಕಿರೀಟಕ್ಕೆ ಕನ್ನಡತಿ ಜಸ್ಟ್​ ಮಿಸ್​!
ವಿಷ್ಣು ಮಂಚು ಅವರ ಕನಸಿನ ಯೋಜನೆ ಕಣ್ಣಪ್ಪ. ಈ ಚಿತ್ರವು ಮಹಾ ಶಿವಭಕ್ತ ಕಣ್ಣಪ್ಪನ ಜೀವನ ಕಥೆಯನ್ನು ಆಧರಿಸಿದೆ. ಈ ಚಿತ್ರವನ್ನು ಸಂಪೂರ್ಣವಾಗಿ ವಿದೇಶದಲ್ಲಿ ಚಿತ್ರೀಕರಿಸಲಾಗುತ್ತಿದೆ. ನ್ಯೂಜಿಲೆಂಡ್‌ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಇತ್ತೀಚೆಗಷ್ಟೇ ಈ ಚಿತ್ರದ ಎರಡನೇ ಶೆಡ್ಯೂಲ್ ಶುರುವಾಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸವೂ ನಡೆಯುತ್ತಿದೆ. ಅದ್ಧೂರಿ ಬಜೆಟ್ ಮತ್ತು ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಚಿತ್ರ ತಯಾರಾಗುತ್ತಿದೆ.
ಹಿರಿಯ ನಟ ಮೋಹನ್ ಬಾಬು ದೊಡ್ಡ ತಾರಾಗಣದಲ್ಲಿ ಚಿತ್ರನಿರ್ಮಾಣ ಮಾಡುತ್ತಿದ್ದಾರೆ. ಇದು 24 ಫ್ರೇಮ್ಸ್ ಫ್ಯಾಕ್ಟರಿ ಮತ್ತು ಅವಾ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ಮಹಾಭಾರತ ಧಾರಾವಾಹಿ ಖ್ಯಾತಿಯ ಮುಖೇಶ್ ಕುಮಾರ್ ಸಿಂಗ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ – ಸ್ಟಾರ್ ಹೀರೋಯಿನ್ ನಯನತಾರಾ ಈ ಚಿತ್ರದಲ್ಲಿ ಶಿವ ಪಾರ್ವತಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್, ಕನ್ನಡದ ಸೂಪರ್‌ಸ್ಟಾರ್ ಶಿವರಾಜ್‌ಕುಮಾರ್, ಕಾಲಿವುಡ್ ಖ್ಯಾತ ನಟ ಆರ್.ಶರತ್‌ಕುಮಾರ್, ಕಾಮಿಡಿ ಕಿಂಗ್ ಬ್ರಹ್ಮಾನಂದಂ ಮುಂತಾದವರು ಇತರ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಮೋಹನ್ ಬಾಬು ಜೊತೆಗೆ ಮಂಚು ವಿಷ್ಣು ಅವರ ಮಗ ಕೂಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಮಂಚು ವಿಷ್ಣು ಅವರ ಪುತ್ರ ಬೆಳ್ಳಿತೆರೆಗೆ ಪರಿಚಯವಾಗಲಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕರಾದ ಸ್ಟೀಫನ್ ದೇವಸ್ಸೆ ಮತ್ತು ಮಣಿ ಶರ್ಮಾ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.
ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದು, ಇದರಲ್ಲಿ ಕಣ್ಣಪ್ಪನಾಗಿ ಮಂಚು ಕಾಣಿಸಿಕೊಂಡಿದ್ದಾರೆ. ಬೃಹತ್ ಜಲಪಾತದ ಕೆಳಗೆ ಬಿಲ್ಲು -ಬಾಣ ಹಿಡಿದು ದೊಡ್ಡ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಪ್ರೇಕ್ಷಕರನ್ನು ಮೆಚ್ಚಿಸುವಂತಿದೆ. ಇದನ್ನು ನೋಡಿದ ನೆಟ್ಟಿಗರು ಪೋಸ್ಟರ್ ಚೆನ್ನಾಗಿದೆ, ವಂಡರ್, ಅದ್ಭುತವಾಗಿದೆ ಎನ್ನುತ್ತಿದ್ದಾರೆ. ಇದು ಸಿನಿಮಾದ ನಿರೀಕ್ಷೆ ಹೆಚ್ಚಿಸುತ್ತಿದೆ ಎನ್ನುತ್ತಿದ್ದಾರೆ.
ಈ ವರ್ಷವೇ ದಸರಾಕ್ಕೆ ಈ ಸಿನಿಮಾ ತೆರೆಕಾಣುವ ಸಾಧ್ಯತೆ ಇದೆಯಂತೆ. ಸಾಲು ಸಾಲು ಫ್ಲಾಪ್ ಗಳಲ್ಲಿ ಸಿಲುಕಿರುವ ಮಂಚು ಕುಟುಂಬಕ್ಕೆ ಈ ಚಿತ್ರ ಯಾವ ರೀತಿಯ ರಿಸಲ್ಟ್ ನೀಡಲಿದೆ ಎಂಬುದನ್ನು ಕಾದುನೋಡಬೇಕಿದೆ.
‘ಎಕ್ಸ್’​ನಲ್ಲಿ ಶೀಘ್ರ ವೀಡಿಯೋ ಸ್ಟ್ರೀಮಿಂಗ್ ಸೇವೆ ! ಟಿವಿ ಪರದೆ ಮೇಲೆ ಏನೆಲ್ಲ ವೀಕ್ಷಿಸಬಹುದು? ವಿವರ ಇಲ್ಲಿದೆ ನೋಡಿ..

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 + two =
Remember me
