ಕೊಚಿ:ಕರೊನಾ ವೈರಸ್​ ಓಡಿಸಲು ಇಡೀ ವಿಶ್ವದ ವೈದ್ಯಕೀಯ ಕ್ಷೇತ್ರ ಔಷಧ ಕಂಡುಹಿಡಿಯುವಲ್ಲಿ ನಿರತರಾಗಿದ್ದರೆ, ಹಲವಾರು ಮಂದಿ ತಮ್ಮದೇ ಆದ ರೀತಿಯಲ್ಲಿ ಈ ವೈರಸ್​ನಿಂದ ಮುಕ್ತಿ ಪಡೆಯಲು ಹವಣಿಸುತ್ತಿದ್ದಾರೆ.
ಇದೀಗ ಕೇರಳದ ನಿವಾಸಿ ಅನಿಲನ್​ ಎನ್ನುವವರು ತಮ್ಮ ದೇವರ ಪೀಠದಲ್ಲಿ ಕರೊನಾ ದೇವಿಯನ್ನು ಕುಳ್ಳರಿಸಿ ಅದಕ್ಕೆ ನಿತ್ಯವೂ ಪೂಜೆ ಪುನಸ್ಕಾರ ಸಲ್ಲಿಸುತ್ತಿದ್ದಾರೆ. “ನಾನು ಕರೊನಾವೈರಸ್​ ಅನ್ನು ದೇವತೆಯಾಗಿ ಪೂಜಿಸುತ್ತಿದ್ದೇನೆ ಮತ್ತು ಆರೋಗ್ಯದ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ದಿನವೂ ಈ ದೇವಿಯ ಮೊರೆ ಹೋಗುತ್ತಿದ್ದೇನೆ ಎನ್ನುತ್ತಾರೆ ಇವರು.
ವೃತ್ತಿಪರರು, ಪೊಲೀಸ್ ಸಿಬ್ಬಂದಿ ಮತ್ತು ವಿಜ್ಞಾನಿಗಳು ಈ ವೈರಸ್​ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಅವರು ತಮ್ಮದೇ ಆದ ರೀತಿಯಲ್ಲಿ ಇವುಗಳನ್ನು ನಿಯಂತ್ರಿಸಲು ಕಷ್ಟಪಡುತ್ತಿದ್ದಾರೆ. ಎಲ್ಲವೂ ಕೈ ಮೀರಿದಾಗ ಮನುಷ್ಯರು ಸಹಜವಾಗಿ ದೇವರ ಮೊರೆ ಹೋಗುತ್ತಾರೆ. ಆದ್ದರಿಂದ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವೈರಸ್​ ವಿರುದ್ಧ ನಾನು ಈ ದೇವಿಯದ್ದೇ ಮೊರೆ ಹೋಗಿದ್ದೇನೆ ಎನ್ನುತ್ತಾರೆ ಅನಿಲನ್​.
ಇದನ್ನೂ ಓದಿ:ದೇಶದ್ರೋಹ ಆರೋಪ: ಪತ್ರಕರ್ತನಿಗೆ ಜಾಮೀನು ನೀಡದ ಸುಪ್ರೀಂಕೋರ್ಟ್​
ಇವರ ಪೂಜೆಯ ಫೋಟೋ ವೈರಲ್​ ಆಗುತ್ತಿದ್ದಂತೆಯೇ ಹಲವಾರು ನೆಟ್ಟಿಗರು ಅನಿಲನ್​ ಕ್ರಮಕ್ಕೆ ಹಾಸ್ಯ ಮಾಡುತ್ತಿದ್ದಾರೆ. ಇದು ಪ್ರಚಾರದ ಗೀಳು, ಎಲ್ಲವೂ ಸುಮ್ಮನೇ ಪ್ರಚಾರದ ಹುಚ್ಚಿಗಾಗಿ ಮಾಡುತ್ತಿದ್ದಾರೆ ಇತ್ಯಾದಿಯಾಗಿ ಹೇಳಿಕೆ ನೀಡುತ್ತಿದ್ದಾರೆ. ಈ ಬಗ್ಗೆ ತಮಗೆ ಯಾವುದೇ ಸಮಸ್ಯೆ ಇಲ್ಲ. ಹೇಳುವವರು ಹೇಳಿಕೊಳ್ಳಲಿ. ಈ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನನಗೆ ಕರೊನಾ ದೇವಿ ಮೇಲೆ ನಂಬಿಕೆ ಇದೆ. ಇದನ್ನು ನಿತ್ಯವೂ ಪೂಜೆ ಮಾಡಿದರೆ ವೈರಸ್​ ನಮ್ಮನ್ನು ಬಾಧಿಸುವುದಿಲ್ಲ ಎಂದು ಧೈರ್ಯದಿಂದ ನುಡಿಯುತ್ತಾರೆ ಅನಿಲನ್​.
ದೇವಾಲಯಗಳು ಸೇರಿದಂತೆ ಧಾರ್ಮಿಕ ಪೂಜಾ ಸ್ಥಳಗಳನ್ನು ತೆರೆಯುವ ಸರ್ಕಾರದ ನಿರ್ಧಾರಕ್ಕೆ ವಿರುದ್ಧವಾಗಿರುವ ಅನಿಲನ್, ಜನರು ಲಾಕ್​ಡೌನ್​ ನಿಯಮ ಮೀರಿ, ಹೊರಗಡೆ ಹೋಗಿ, ದೇವಾಲಯಗಳಲ್ಲಿ ಪೂಜೆ ಸಲ್ಲಿಸುವ ಬದಲು ತಮ್ಮ ತಮ್ಮ ಮನೆಯಲ್ಲಿಯೇ ಈ ರೀತಿ ಪೂಜೆ ಸಲ್ಲಿಸಿದರೆ ಒಳ್ಳೆಯದು ಎನ್ನುತ್ತಾರೆ.
ಕೆಲವು ಮಂದಿ ಪೂಜಾ ಸಮಯದಲ್ಲಿ ದೇವಿಗೆ ಕಾಣಿಕೆ ನೀಡಲು ಬರುತ್ತಾರೆ ಎನ್ನುವ ಅನಿಲನ್​, ನಾನು ಯಾವುದೇ ಕಾರಣಕ್ಕೂ ಕಾಣಿಕೆ ಸ್ವೀಕರಿಸುವುದಿಲ್ಲ ಎಂದಿದ್ದಾರೆ,ಅಸ್ಸಾಂನ ಕೆಲವು ಭಾಗಗಳಲ್ಲಿ ಈಗಾಗಲೇ ಮಹಿಳೆಯರು ‘ಕರೊನಾ ದೇವಿ’ಗೆ ಪ್ರಾರ್ಥನೆ ಸಲ್ಲಿಸುತ್ತಿರುವ ಬಗ್ಗೆ ವರದಿಯಾಗಿದೆ.(ಏಜೆನ್ಸೀಸ್​)

ಇನ್ನೋರ್ವ ಕಪ್ಪುವರ್ಣೀಯನ ಹತ್ಯೆ! ಅಮೆರಿಕದಲ್ಲಿ ಭುಗಿಲೆದ್ದಿದೆ ಹಿಂಸಾಚಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + six =
Remember me
