ನವದೆಹಲಿ:ಹಣ್ಣುಗಳ ರಾಜ ಮಾವಿನಹಣ್ಣು. ಬೇಸಿಗೆಕಾಲದ ಸಮಯದಲ್ಲಿ ಮಾತ್ರ ಸಿಗುವ ಹಣ್ಣು. ಎಲ್ಲಾ ಕಾಲದಲ್ಲೂ ಸಿಗುವಂತೆ ಮಾಡಲು ಮಾರುಕಟ್ಟೆಯಲ್ಲಿ ಹಲವು ಹಣ್ಣಿನ ಜ್ಯೂಸ್​ಗಳು ಲಭ್ಯವಾಗುವಂತೆ ಮಾವಿನಹಣ್ಣಿನ ಜ್ಯೂಸ್​ ಕೂಡ ಸಿಗುತ್ತದೆ. ವಾವ್ಹ್​​ ಎಷ್ಟು ಟೇಸ್ಟಿಯಾಗಿದೆ ಎಂದು ನೀವು ಬಾಟಲ್​ ಅಥವಾ ಟೆಟ್ರಾಪ್ಯಾಕ್​ನಲ್ಲಿರುವ ಮಾವಿನಹಣ್ಣಿನ ಜ್ಯೂಸ್​ ಕುಡಿಯುತ್ತಿದ್ದೀರಾ..?
ಇದನ್ನು ಓದಿ:ಶಿವಾಜಿ ಪ್ರತಿಮೆ ಕುಸಿತ; ಪ್ರಧಾನಿ ಮೋದಿ ಮೊದಲ ಪ್ರತಿಕ್ರಿಯ ಹೀಗಿದೆ..
ಹಾಗಾದ್ರೆ ನೀವು ತಿಳಿಯಲೇಬೇಕಾದ ವಿಚಾರ ಇದು. ಈ ಮಾವಿನ ಹಣ್ಣಿನ ಜ್ಯೂಸ್​ ಅನ್ನು ಹೇಗೆ ತಯಾರಿಸುತ್ತಾರೆ ಎಂದು ನೀವು ಎಂದಾದರೂ ಆಲೋಚಿಸಿದ್ದೀರಾ.. ಯೋಚಿಸಿರುವುದಿಲ್ಲಾ ಅಲ್ಲವೆ..ಮಾವಿನಹಣ್ಣಿನ ಜ್ಯೂಸ್​​ ಹೇಗೆ ತಯಾರಿಸಲಾಗುತ್ತದೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್​ ಆಗುತ್ತಿದೆ. ಈ ವಿಡಿಯೋ ನೋಡಿ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಸೆಲಿಬ್ರಿಟಿಗಳಿಂದ ನೀಡುವ ಜಾಹೀರಾತು ನೋಡಿ ಮಾವಿನಹಣ್ಣಿನ ರುಚಿಗೆ ಮನಸೋತು ಬಾಟಲ್​ ಅಥವಾ ಟೆಟ್ರಾ ಪ್ಯಾಕ್​ನಲ್ಲಿರುವ ಜ್ಯೂಸ್​ ಕುಡಿಯುತ್ತಿದ್ದೆ ಅಪಾಯ ತಪ್ಪಿದಲ್ಲ. ದಿನನಿತ್ಯ ವಿಷ ಸೇವಿಸುತ್ತಿದ್ದೀರಿ ಎಂದು ಅರ್ಥ.
ವೈರಲ್​ ವಿಡಿಯೋದಲ್ಲಿ ಮೆಷಿನ್​ನಲ್ಲಿರುವ ಹಳದಿ ಬಣ್ಣದ ನೀರಿಗೆ ಕೆಂಪು ಬಣ್ಣ ಸೇರಿಸಿ ಮತ್ತು ಅದಕ್ಕೆ ಬಿಳಿಯ ಬಣ್ಣದ ವಸ್ತುಗಳನ್ನು ಸೇರಿಸಲಾಗುತ್ತದೆ. ಆ ವಸ್ತುಗಳು ಏನೆಂದು ತಿಳಿಯುವುದಿಲ್ಲ. ಬಳಿಕ ಅದನ್ನು ಗಟ್ಟಿಯಾಗಿಸಲು ಬಿಳಿ ಬಣ್ಣದ ದ್ರವವನ್ನು ಸೇರಿಸಲಾಗುತ್ತದೆ. ಸ್ವಚ್ಛತೆ ಬಗ್ಗೆ ಕೇಳಲೆಬೇಡಿ. ಜ್ಯೂಸ್​ನಲ್ಲಿ ಮಾವಿನಹಣ್ಣಿನ ರುಚಿ ತರಿಸಲು ಪ್ರತ್ಯೇಕವಾಗಿ ಸಕ್ಕರೆಯೊಂದಿಗೆ ಯಾವುದೋ ವಸ್ತುವನ್ನು ಮಿಶ್ರಣ ಮಾಡಿ ತಯಾರಿಸುತ್ತಿದ್ದರೆ. ಅದು ಘನೀಕೃತವಾದ ಬಳಿಕ ಟೆಟ್ರಾ ಪ್ಯಾಕ್​ ಆಗಿ ಹೊರಬರುವುದನ್ನು ನೋಡಬಹುದಾಗಿದೆ.
A post shared by YOUR BROWN ASMR (@yourbrownasmr)
ವಿಡಿಯೋವನ್ನು ಸಾಮಾಜಿಕ ಜಾಲತಾನದಲ್ಲಿ ಹಂಚಿಕೊಳ್ಳುತ್ತಿದ್ದಂತೆ ನೆಟ್ಟಿಗರು ಕಿಡಿಕಾರಿದ್ದಾರೆ. ಸದ್ಯ ನಾನು ದೇವರಿಗೆ ಧನ್ಯವಾದ ಹೇಳಬೇಕು. ಕೆಲವು ದಿನಗಳಿಂದ ಈ ರೀತಿಯ ಜ್ಯೂಸ್​ ಕುಡಿಯುವುದನ್ನು ಬಿಟ್ಟಿದ್ದೇನೆ, ಇದರಲ್ಲಿ ಮಾವಿನಹಣ್ಣು ಎಲ್ಲಿದೆ, ಮಾವು ಹೊರತುಪಡಿಸಿ ಬೇರೆಲ್ಲಾ ಇದೆ, ಸ್ಲೋ ಪಾಯ್ಸನ್​ ಇದು ಎಂದು ಕಾಮೆಂಟ್​ ಮಾಡುತ್ತಿದ್ದಾರೆ. ಮತ್ತೊಬ್ಬರು ಪ್ರತಿಕ್ರಿಯಿಸಿ ಸರ್ಕಾರದ ಮೇಲೆ ಹರಿಹಾಯ್ದಿದ್ದಾರೆ. ಇದರ ಹಿಂದೆ ಸರ್ಕಾರ ಇದೆ ಎಂದು ಕೋಪಗೊಂಡಿರುವ ಎಮೋಜಿಯನ್ನು ಕಳುಹಿಸಿದ್ದಾರೆ. ಈ ಕಾರಣದಿಂದಲೇ ಇನ್ನು ಮುಂದೆ ಈ ರೀತಿಯ ಜ್ಯೂಸ್​ ಖರೀದಿಸುವುದಿಲ್ಲ ಎಂದ ಜಾಲತಾಣದ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ವೈರಲ್​ ಆಗುತ್ತಿರುವ ವಿಡಿಯೋ ನೋಡಿದ್ರೆ ಮಾವಿನ ಹಣ್ಣಿನ ಜ್ಯೂಸ್​ ಎಂದು ನಾವು ಕುಡಿಯುತ್ತಿರುವುದು ಸ್ಲೋಪಾಯ್ಸನ್​​, ಮಕ್ಕಳಿಗೆ ಕೊಡಿಸುವ ಮುನ್ನ ಎಚ್ಚರವಿರಲಿ ಎಂದು ಸಲಹೆ ನೀಡಿದ್ದಾರೆ.(ಏಜೆನ್ಸೀಸ್​​)
ಟ್ರೈನಿ ವೈದ್ಯೆ ಹತ್ಯೆ ಕೇಸ್; ಘಟನೆ ನಡೆದ ದಿನದ ಫೋನ್​ ಕಾಲ್​ ವೈರಲ್​​.. ಸಂತ್ರಸ್ತೆ ತಂದೆ ಹೇಳಿದಿಷ್ಟು?

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:6 + eighteen =
Remember me
