ನವದೆಹಲಿ: ಲೋಕಸಭೆಯಲ್ಲಿ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು ಹೇಳಿಕೆ ನೀಡುತ್ತಿದ್ದ ಸಂದರ್ಭದಲ್ಲಿ ತಮಿಳುನಾಡಿನ ಕಾಂಗ್ರೆಸ್ ಸಂಸದ ಮಾಣಿಕಂ ಠಾಗೋರ್ ಮತ್ತು ಇತರೆ ಕೆಲವು ಸಂಸದರು ಅವರ ಮೇಲೆರಗಲು ಹೋದಾಗ ಕಲಾಪಕ್ಕೆ ಅಡ್ಡಿಯಾಗಿ ಎರಡು ಗಂಟೆಗೂ ಹೆಚ್ಚು ಕಾಲ ಕಲಾಪ ಮುಂಡೂಲ್ಪಟ್ಟಿತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಸಂಸದ ಜಗದಂಬಿಕಾ ಪಾಲ್​, ಕೇಂದ್ರ ಆರೋಗ್ಯ ಸಚಿವರು ಲೋಕಸಭೆಯಲ್ಲಿ ಮಾತನಾಡುತ್ತಿದ್ದಾಗ ಕಾಂಗ್ರೆಸ್ ಸಂಸದ ಮಾಣಿಕಂ ಠಾಗೋರ್ ಅವರ ಮೇಲೆರಗಲು ಮುಂದಾಗಿದ್ದರು. ಪ್ರಜಾಪ್ರಭುತ್ವದಲ್ಲಿ ಇದೊಂದು ಕೆಟ್ಟ ಘಟನೆ ಎಂದು ಹೇಳಿದ್ದರು.
ಈ ನಡುವೆ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕೂಡ ಪ್ರತಿಕ್ರಿಯಿಸಿದ್ದು, ನನ್ನ ಕ್ಷೇತ್ರ ವಯನಾಡಿನಲ್ಲಿ ಮೆಡಿಕಲ್ ಕಾಲೇಜು ಇಲ್ಲದ ಕಾರಣ ಅಲ್ಲೊಂದು ಸ್ಥಾಪನೆಯಾಗಬೇಕು ಎಂದು ಬಯಸಿದ್ದೆ. ಈ ಬಗ್ಗೆ ಪ್ರಶ್ನೆ ಕೇಳಿದ್ದೆ. ಸಹಜವಾಗಿಯೇ ಬಿಜೆಪಿಯವರಿಗೆ ನಾನು ಮಾತನಾಡುವುದು ಬೇಕಾಗಿರಲಿಲ್ಲ. ಸಂಸತ್ತಿನಲ್ಲಿ ನಮಗೆ ಮಾತನಾಡಲು ಬಿಡುವುದಿಲ್ಲ. ಆ ವಿಡಿಯೋ ದೃಶ್ಯಗಳನ್ನು ಗಮನಿಸಿ ನೋಡಿ, ಮಾಣಿಕಂ ಠಾಗೋರ್ ಯಾರ ಮೇಲೂ ದಾಳಿ ನಡೆಸಲು ಹೋಗಿಲ್ಲ. ಬದಲಾಗಿ ಎಲ್ಲರೂ ಅವರ ಮೇಲೆಯೇ ಮುಗಿಬಿದ್ದಿದ್ದರು ಎಂದಿದ್ದಾರೆ. (ಏಜೆನ್ಸೀಸ್)
Rahul Gandhi,Congress: There is an issue in Wayanad about them not having a Medical College so I wanted to raise.BJP obviously doesn't like it if I speak.We are not allowed to speak in Parliament.See visuals,Manickam Tagore (Cong MP) didn't attack anyone rather he was attacked.https://t.co/PQd9iDYsbEpic.twitter.com/fhMphwPULF
— ANI (@ANI)February 7, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 14 =
Remember me
