ಬೆಂಗಳೂರು:ಕರ್ನಾಟಕದ ಓಟಗಾರ ಮಣಿಕಾಂತ್​ ಹೋಬಳಿದಾರ್​ ಭಾರತದ ಅತ್ಯಂತ ವೇಗದ ಓಟಗಾರ ಎನಿಸಿದ್ದಾರೆ. ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ ಆರಂಭಗೊಂಡ 62ನೇ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್​ ಚಾಂಪಿಯನ್​ಷಿಪ್​ನಲ್ಲಿ ಸರ್ವೀಸಸ್​ ತಂಡವನ್ನು ಪ್ರತಿನಿಧಿಸಿದ 21 ವರ್ಷದ ಮಣಿಕಾಂತ್​ 100 ಮೀ. ಓಟದ ಸೆಮಿಫೈನಲ್​ನಲ್ಲಿ 10.23 ಸೆಕೆಂಡ್​ಗಳಲ್ಲಿ ಓಡಿದರು. ಈ ಮೂಲಕ ರಾಷ್ಟ್ರೀಯ ದಾಖಲೆ ಬರೆದ ಅವರು ಅಗ್ರಸ್ಥಾನದೊಂದಿಗೆ ಫೈನಲ್​ಗೇರಿದರು.
H Manikanta set a new national record in men's 100m at the ongoing National Athletics Championships in Bengaluru!!
He clocks 10.23s to surpass the previous NR set by Amiya Mallick in April 2016.#Athleticspic.twitter.com/fwCubomKDr
— Khel Now (@KhelNow)October 11, 2023

ಉಡುಪಿಯ ಮಣಿಕಾಂತ್​ 2016ರಲ್ಲಿ ಒಡಿಶಾದ ಅಮಿಯಾ ಕುಮಾರ್​ ಮಲ್ಲಿಕ್​ 10.26 ಸೆಕೆಂಡ್​ಗಳಲ್ಲಿ 100 ಮೀ. ಓಡಿದ್ದ ರಾಷ್ಟ್ರೀಯ ದಾಖಲೆ ಮುರಿದರು. ಕಳೆದ ವರ್ಷ ಅಮ್ಲನ್​ ಬೋಗೋರ್ಹೈನ್​ 10.25 ಸೆಕೆಂಡ್​ಗಳಲ್ಲಿ ಓಡಿದ್ದರೂ ಅದು ದಾಖಲೆಯಾಗಿ ಮಾನ್ಯ ಆಗಿರಲಿಲ್ಲ.
ದಿನೇಶ್​, ಸೀಮಾಗೆ ಚಿನ್ನಮಹಾರಾಷ್ಟ್ರದ ದಿನೇಶ್​ ಮತ್ತು ಹಿಮಾಚಲ ಪ್ರದೇಶದ ಸೀಮಾ ಅಥ್ಲೆಟಿಕ್ಸ್​ ಕೂಟದ ಮೊದಲ ದಿನ ಪುರುಷರ ಮತ್ತು ಮಹಿಳೆಯರ 10 ಸಾವಿರ ಮೀ. ಓಟದಲ್ಲಿ ಚಿನ್ನದ ಪದಕ ಗೆದ್ದುಕೊಂಡರು. ಮಹಿಳೆಯರ ಹ್ಯಾಮರ್​ ಥ್ರೋನಲ್ಲಿ ಪೊಲೀಸ್​ ಸ್ಪೋರ್ಟ್ಸ್​ ಕಂಟ್ರೋಲ್​ ಬೋರ್ಡ್​ನ ಅನ್ಮೋಲ್​ ಕೌರ್​ ಮತ್ತು ಪುರುಷರ ಪೋಲ್​ವಾಲ್ಟ್​ನಲ್ಲಿ ಮಧ್ಯಪ್ರದೇಶದ ದೇವ್​ ಮೀನಾ ಸ್ವರ್ಣ ಪದಕ ಜಯಿಸಿದರು.
ವಿಶ್ವಕಪ್​ನಲ್ಲಿ ಮೊದಲ ವಾರವೇ ದಾಖಲೆಗಳ ಧಮಾಕಾ; ಶತಕಗಳ ಸುರಿಮಳೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
