ಗುವಾಹಟಿ:ಬೃಹತ್‌ ಡ್ರಗ್‌ ಮಾಫಿಯಾದಲ್ಲಿ ಖುದ್ದು ಮುಖ್ಯಮಂತ್ರಿಯೇ ಶಾಮೀಲಾಗಿರುವ ಸ್ಫೋಟಕ ಮಾಹಿತಿಯನ್ನು ನೀಡಿರುವ ಮಣಿಪುರದ ದಿಟ್ಟ ಮಹಿಳಾ ಪೊಲೀಸ್‌ ಅಧಿಕಾರಿಯಿಂದಾಗಿ ಇದೀಗ ಮಣಿಪುರದ ಸಿಎಂಗೆ ಸಂಕಷ್ಟ ಎದುರಾಗಿದೆ.
ಬಂಧಿಸಲಾಗಿದ್ದ ಡ್ರಗ್ ದೊರೆ ಲುಂಕೋಸಿ ಝೌನ ಬಿಡುಗಡೆ ಮಾಡಲು ಮುಖ್ಯಮಂತ್ರಿ ಹಾಗೂ ಹಿರಿಯ ಅಧಿಕಾರಿಯೊಬ್ಬರು ತಮ್ಮ ಮೇಲೆ ಒತ್ತಡ ಹೇರಿದ್ದರು ಎಂದು ಪೊಲೀಸ್ ಅಧಿಕಾರಿ ತೌನೋಜಮ್ ಬೃಂದಾ ಹೈಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ. ಈ ಮೂಲಕ ಸರ್ಕಾರಕ್ಕೆ ಸಂಕಷ್ಟ ಎದುರಾಗಿದೆ.
ಲುಂಕೋಸಿ ಝೌ ಬಿಡುಗಡೆ ಕುರಿತಂತೆ ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಗೆ ಸಂಬಂಧಿಸಿದಂತೆ ತೌನೋಜಮ್ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಈ ವಿಷಯವನ್ನು ತಿಳಿಸಲಾಗಿದೆ. ಸ್ವಾಯತ್ತ ಜಿಲ್ಲಾ ಮಂಡಳಿಯ ಮಾಜಿ ಅಧ್ಯಕ್ಷನಾಗಿದ್ದ ಲುಂಕೋಸಿಯನ್ನು ಬಿಡುಗಡೆಮಾಡಲು ಹಾಗೂ ಈತನ ವಿರುದ್ಧ ಸಲ್ಲಿಸಲಾಗಿರುವ ಆರೋಪಪಟ್ಟಿಗಳನ್ನು ಹಿಂದಕ್ಕೆ ಪಡೆಯುವಂತೆ ಖುದ್ದು ಮುಖ್ಯಮಂತ್ರಿಗಳು (ನಾಂಗ್ಥೊಂಬಮ್ ಬಿರೆನ್ ಸಿಂಗ್‌) ಹಾಗೂ ಹಿರಿಯ ಅಧಿಕಾರಿಗಳು ಒತ್ತಡ ಹೇರಿದ್ದರು ಎಂದು ತೌನೋಜಮ್ ಹೇಳಿದ್ದಾರೆ.
ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸಸ್‌ (ಎನ್‌ಡಿಪಿಎಸ್) ಕಾಯ್ದೆಯಡಿ ಕೋರ್ಟ್ ಝೌ ಗೆ ಜಾಮೀನು ಮಂಜೂರು ಮಾಡಿದ್ದನ್ನು ತೌನೋಜಮ್ ಬೃಂದಾ ಫೇಸ್‌ಬುಕ್‌ನಲ್ಲಿ ಟೀಕಿಸಿ ನ್ಯಾಯಾಂಗ ನಿಂದನೆಗೆ ಗುರಿಯಾಗಿದ್ದು, ಆ ಬಗ್ಗೆ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ.
2018 ರ ಜೂ.19 ರಂದು ತೌನೋಜಮ್ ಅವರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಝೌ ಹಾಗೂ ಇತರರಿಂದ 4.595 ಕೆ.ಜಿ ಹೆರಾಯಿನ್ ಹಾಗೂ 2,80,200 ಮಾದಕ ದ್ರವ್ಯ ಇರುವ ಮಾತ್ರೆ, 57.18 ಲಕ್ಷ ನಗದು, 95 ಸಾವಿರ ರೂಪಾಯಿಗಳ ಹಳೆಯ ಕರೆನ್ಸಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಇದನ್ನೂ ಓದಿ:ಯೋಗಿ ಸರ್ಕಾರದಲ್ಲಿ 6,126 ಎನ್‌ಕೌಂಟರ್‌: ಸತ್ತ ಕ್ರಿಮಿನಲ್ಸ್‌, ಬಲಿಯಾದ ಪೊಲೀಸರೆಷ್ಟು ಗೊತ್ತಾ?
ನಂತರ ಇವರನ್ನು ಬಂಧಿಸಲಾಗಿತ್ತು. ಬಂಧನದ ನಂತರ ಮುಖ್ಯಮಂತ್ರಿ ಕಚೇರಿಯಿಂದ ಕರೆ ತೌನೋಜಮ್ ಅವರಿಗೆ ಕರೆ ಬಂದಿತ್ತು. ಈ ಸಂದರ್ಭದಲ್ಲಿ ಝೌ ಪ್ರಕರಣದ ಸಂಬಂಧ ರಾಜಿ ಮಾಡಿಕೊಳ್ಳುವಂತೆ ತಮಗೆ ಪದೇ ಪದೇ ಒತ್ತಡ ಹೇರಲಾಗಿತ್ತು. ಆದರೆ ತಾವು ನಿರಾಕರಿಸಿದ್ದಾಗಿ ತೌನೋಜಮ್ ಬೃಂದಾ ತಿಳಿಸಿದ್ದಾರೆ.
ನಂತರ ಮುಖ್ಯಮಂತ್ರಿ ಕಚೇರಿಯಿಂದ ಪದೇ ಪದೇ ಕರೆ ಬರುತ್ತಿದ್ದರೂ ನಾನು ರಿಸೀವ್‌ ಮಾಡಿರಲಿಲ್ಲ. ಆರೋಪಿಗಳಲ್ಲಿ ಒಬ್ಬಾತ ಮುಖ್ಯಮಂತ್ರಿಗಳ ಪತ್ನಿಯ ಬಲಗೈ ಭಂಟನಾಗಿದ್ದರಿಂದ ಅವರು ಆಕ್ರೋಶಗೊಂಡಿದ್ದರು. ನಂತರ ಎಲ್ಲರನ್ನೂ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳೇ ಆದೇಶ ನೀಡಿದ್ದರು ಎಂದು ತೌನೋಜಮ್ ಬೃಂದಾ ಹೈಕೋರ್ಟ್‌ಗೆ ಹೇಳಿದ್ದಾರೆ.
ಪತ್ರಿಕೆ ಮಾಲೀಕನ ಬಂಧನ: ರಾಶಿ ರಾಶಿ ಮೂಳೆ, ಅಶ್ಲೀಲ ಫೋಟೋ, ಸಿ.ಡಿ ವಶಕ್ಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + nine =
Remember me
