ಇಂಫಾಲ:ಮಣಿಪುರದಲ್ಲಿ 2017ರಲ್ಲಿ ನಡೆದ ಚುನಾವಣೆ ವೇಳೆ ಆಯೋಗಕ್ಕೆ ಸಲ್ಲಿಸಿದ್ದ ಅಫಿಡವಿಟ್​ನಲ್ಲಿ ಆಸ್ತಿ ವಿವರ ಮರೆಮಾಚಿದ ಮಾಜಿ ಕಾಂಗ್ರೆಸ್​ ನಾಯಕರೊಬ್ಬರು ಶಾಸಕತ್ವ ಕಳೆದುಕೊಂಡಿದ್ದಾರೆ. ಮಣಿಪುರ ಹೈಕೋರ್ಟ್​ ಗುರುವಾರ ಅವರ ಶಾಸಕತ್ವವನ್ನು ಅನೂರ್ಜಿತಗೊಳಿಸಿ ತೀರ್ಪು ನೀಡಿದೆ.
ಕಾಕ್​ಚಿಂಗ್ ಕ್ಷೇತ್ರದಿಂದ ಆಯ್ಕೆಯಾದ ವೈ.ಸುರಚಂದ್ರ ಸಿಂಗ್​ ಶಾಸಕತ್ವ ಕಳೆದುಕೊಂಡ ಮಾಜಿ ಕಾಂಗ್ರೆಸ್ ನಾಯಕ. 2017ರ ಚುನಾವಣೆ ಸಂದರ್ಭದಲ್ಲಿ ಸುರಚಂದ್ರ ಸಿಂಗ್ ಸಲ್ಲಿಸಿದ್ದ ಅಫಿಡವಿಟ್​ನಲ್ಲಿ ಆಸ್ತಿವಿವರ ಮರೆಮಾಚಿರುವುದಾಗಿ ಪ್ರತಿಸ್ಪರ್ಧಿಯಾಗಿದ್ದ ಬಿಜೆಪಿಯ ಎಂ.ರಮೇಶೋರ್​ ಕೋರ್ಟ್ ಮೆಟ್ಟಿಲೇರಿದ್ದರು. ಚುನಾವಣೆಯಲ್ಲಿ ರಮೇಶೋರ್​ 630 ಮತಗಳ ಅಂತರದ ಸೋಲು ಅನುಭವಿಸಿದ್ದರು.
ಇದನ್ನೂ ಓದಿ:FACT Check | ಮಸೀದಿ ಧ್ವನಿವರ್ಧಕ ತೆರವಿಗೆ ಆದೇಶಿಸಿಲ್ಲ- ಪೊಲೀಸ್ ಇಲಾಖೆ ಯೂ-ಟರ್ನ್​!
ವಿಶೇಷ ಎಂದರೆ ಕಾಂಗ್ರೆಸ್​ ಅಭ್ಯರ್ಥಿಯಾಗಿ ಗೆಲುವು ಕಂಡಿದ್ದ ಸುರಚಂದ್ರ ಸಿಂಗ್ ಬಳಿಕ ಬಿಜೆಪಿ ಸೇರಿದ್ದರು. ಆ ಸಂದರ್ಭದಲ್ಲೇ ಅಸೆಂಬ್ಲಿ ಸ್ಪೀಕರ್​ ಅವರನ್ನು ಅನರ್ಹಗೊಳಿಸಿದ್ದರು. ಮಣಿಪುರ ವಿಧಾನಸಭೆಯಲ್ಲಿರುವ 60 ಸ್ಥಾನಗಳ ಪೈಕಿ 28 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಕಂಡಿತ್ತು. ಆದರೆ, ಬಳಿಕ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಕೆಲವು ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಿದ್ದರು. ಈಗ ಅಲ್ಲಿ ಬಿಜೆಪಿ ಸರ್ಕಾರವಿದೆ. (ಏಜೆನ್ಸೀಸ್)
ಅಮೆರಿಕ ಅಧ್ಯಕ್ಷೀಯ ಚುನಾವಣೆ 2020 : 120 ವರ್ಷಗಳಲ್ಲೇ ಅತ್ಯಧಿಕ ಮತದಾನ ಪ್ರಮಾಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
