ಮಣಿಪುರ:ಮಣಿಪುರದ ಇಂಫಾಲ್‌ನಿಂದ ಚುರಾಚಂದ್‌ಪುರ ಮತ್ತು ಮಾವೊವರೆಗಿನ ಎರಡು ಪ್ರಮುಖ ಹೆದ್ದಾರಿಗಳಲ್ಲಿ ಕಾಂಗ್‌ಪೋಕ್ಪಿ ಜಿಲ್ಲೆಯ ಮೂಲಕ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದ್ದು, ಭದ್ರತಾ ಕಾರಣಗಳಿಗಾಗಿ ಚುರಾಚಂದ್‌ಪುರ ಮತ್ತು ಬಿಷ್ಣುಪುರದ ಎಲ್ಲಾ ಗಡಿಗಳನ್ನು ಇದೀಗ ಮುಚ್ಚಲಾಗಿದೆ.
ಇದನ್ನೂ ಓದಿ:ಭದ್ರತಾ ಲೋಪ ಪ್ರಕರಣ: ಮನೋರಂಜನ್ ಮಾಸ್ಟರ್​ವೆುೖಂಡ್?
ಮಣಿಪುರ ಗೃಹ ಇಲಾಖೆ ಗುರುವಾರ ಹೊರಡಿಸಿದ ಸಾರ್ವಜನಿಕ ಪ್ರಕಟಣೆಯಲ್ಲಿ, “ಇಂಫಾಲ್ -ಕಾಂಗ್‌ಪೋಕ್ಪಿ -ಮಾವೋ ಹೆದ್ದಾರಿ ಮತ್ತು ಇಂಫಾಲ್ ಬಿಷ್ಣುಪುರ್-ಚುರಚಂದ್‌ಪುರ ಹೆದ್ದಾರಿಗಳು ಕಾರ್ಯನಿರ್ವಹಿಸುತ್ತಿವೆ ಮತ್ತು ಎಲ್ಲರಿಗೂ ಬಳಸಲು ಮುಕ್ತವಾಗಿವೆ. ಹೆದ್ದಾರಿಗಳನ್ನು ಬಳಸುವ ಜನರ ಅನುಕೂಲಕ್ಕಾಗಿ ಮತ್ತು ಸುರಕ್ಷತೆಗಾಗಿ, ಹೆಚ್ಚುವರಿ ಭದ್ರತಾ ಪಡೆಗಳನ್ನು ಇದೀಗ ನಿಯೋಜಿಸಲಾಗಿದೆ. ಎಲ್ಲಾ ನಿವಾಸಿಗಳು ಮೇಲಿನ ಮಾಹಿತಿಯನ್ನು ಗಮನಿಸಿ ಹಾಗೂ ಸಾರ್ವಜನಿಕ ಹಿತಾಸಕ್ತಿಯಲ್ಲಿ ಸಹಕರಿಸಲು ವಿನಂತಿಸಲಾಗಿದೆ” ಎಂದು ತಿಳಿಸಲಾಗಿದೆ.
ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ (ITPL) ಶುಕ್ರವಾರ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದು, ಭದ್ರತಾ ಕಾರಣಗಳಿಗಾಗಿ ಚುರಾಚಂದ್‌ಪುರ ಮತ್ತು ಬಿಷ್ಣುಪುರದ ಎಲ್ಲಾ ಗಡಿಗಳನ್ನು ಮುಚ್ಚಲಾಗುವುದು ಎಂದು ಘೋಷಿಸಿತು. ಕ್ರಿಸ್‌ಮಸ್ ಸೀಸನ್​ನಲ್ಲಿ ನಡೆಯುವ ವ್ಯಾಪರ-ವಹಿವಾಟನ್ನು ಅಡ್ಡಿಪಡಿಸಲು ಮೈಟೈ ಸಮುದಾಯ ಬೆದರಿಕೆಯೊಡ್ಡಿದ್ದು, ಈ ಬಗ್ಗೆ ನಮಗೆ ಗುಪ್ತಚರ ಮಾಹಿತಿ ಲಭಿಸಿದೆ” ಎಂದು ಯುನೈಟೆಡ್ ಟ್ರೈಬಲ್ ಸ್ವಯಂಸೇವಕರ ಸಂಚಾಲಕ ನ್ಗುಲ್‌ಮಾಂಗ್ ಹಕಿಪ್ ಅವರು ಐಟಿಎಲ್‌ಎಫ್‌ನ ಸಾರ್ವಜನಿಕ ಸೂಚನೆಯನ್ನು ನೀಡಿದ್ದಾರೆ.
ಇದನ್ನೂ ಓದಿ:DUNKI Movie Review : ಹೃದಯದ ಗಡಿಯಾಚೆಯೇ ಉಳಿದ ವಲಸಿಗರ ಕಥೆ
ಡಿ.23 ರಿಂದ ಜನವರಿ 5ರವರೆಗೆ ಜಿಲ್ಲೆಯೊಳಗಿನ ಎಲ್ಲಾ ಬುಡಕಟ್ಟು ಜನಾಂಗದವರನ್ನು ಹೊರತುಪಡಿಸಿ ಉಳಿದವರನ್ನು ಹೊರಗೆ ಹೋಗಲು ಬಿಡುವುದಿಲ್ಲ ಮತ್ತು ಹೊರಗಿನವರಿಗೆ ಪ್ರವೇಶವನ್ನು ಅನುಮತಿಸಲಾಗುವುದಿಲ್ಲ ಎಂದು ಸುತ್ತೋಲೆ ಉಲ್ಲೇಖಿಸಿದೆ. ಮೇ 3 ರಂದು ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ಬೆನ್ನಲ್ಲೇ ಇದೀಗ ಇಂಫಾಲ್-ಮಾವೊ ಮತ್ತು ಇಂಫಾಲ್-ಚುರಚಂದಪುರ ಹೆದ್ದಾರಿಗಳಲ್ಲಿ ಸಾರ್ವಜನಿಕ ಸಾರಿಗೆ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ,(ಏಜೆನ್ಸೀಸ್).
BBKS10: ಸಂಗೀತಾ ಫ್ಯಾನ್ಸ್​ಗೆ ಪವಿ ಕೊಟ್ಟ ಕೌಂಟರ್ ಇದು!​ ಇಲ್ಲಿದೆ ನೋಡಿ ವಿಡಿಯೋ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × five =
Remember me
