ನವದೆಹಲಿ:ಲಾಕ್​ಡೌನ್​ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಪೊಲೀಸ್​ ಅಧಿಕಾರಿ ತಂಜುಮ್​ ಬೃಂದಾ ಅವರನ್ನು ಮಣಿಪುರದ ಇಂಫಾಲಾ ಪಶ್ಚಿಮ ಪೊಲೀಸರು ಸೋಮವಾರ ರಾತ್ರಿ ಬಂಧಿಸಿದ್ದರು. ಲಾಕ್​ಡೌನ್​ ನಿಯಮ ಉಲ್ಲಂಘಿಸಿ ತಮ್ಮ ಇನ್ನಿಬ್ಬರು ಸಂಗಾತಿಗಳೊಂದಿಗೆ ಬೃಂದಾ ಅವರು ಸಂಗೈಪ್ರೊ ಲ್ಯಾಂಖೈನಲ್ಲಿ ಸುತ್ತಾಡುತ್ತಿದ್ದ ಆರೋಪದಲ್ಲಿ ಸಂಗಾತಿಗಳೊಂದಿಗೆ ಅವರನ್ನೂ ಪೊಲೀಸರು ತಾತ್ಕಾಲಿಕವಾಗಿ ವಶಕ್ಕೆ ಪಡೆದುಕೊಂಡಿದ್ದರು.
ಪೊಲೀಸ್​ ಅಧಿಕಾರಿಯಾದಾಗಿನಿಂದಲೂ ಮಣಿಪುರ ಸರ್ಕಾರದೊಂದಿಗೆ ಒಂದಿಲ್ಲೊಂದು ಕಾರಣಕ್ಕೆ ಗಲಾಟೆ ಮಾಡಿಕೊಳ್ಳುತ್ತಿರುವ ತಂಜುಮ್​ ಬೃಂದಾ ಅವರು ಕೆಲದಿನಗಳ ಹಿಂದೆ ಬಿಜೆಪಿಯ ಮುಖಂಡರೊಬ್ಬರ ವಿರುದ್ಧ ದಾಖಲಾಗಿರುವ ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ತನಿಖೆಗೆ ಅಡ್ಡಿಪಡಿಸುತ್ತಿರುವುದಾಗಿ, ಪ್ರಕರಣವನ್ನು ಕೈಬಿಡುವಂತೆ ತಮ್ಮ ಮೇಲೆ ಒತ್ತಡ ಹೇರುತ್ತಿರುವುದಾಗಿ ಸಿಎಂ ನಾಂಗ್​ತೋಂಬಮ್​ ಬಿರೇನ್​ ಸಿಂಗ್​ ವಿರುದ್ಧ ಆರೋಪಿಸಿದ್ದರು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.
ಈ ಕುರಿತು ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿದ್ದ ಬೃಂದಾ, ಮಾದಕವಸ್ತು ಕಳ್ಳಸಾಗಣೆ ಆರೋಪದಲ್ಲಿ ಬಂಧಿತರಾಗಿದ್ದ ಬಿಜೆಪಿ ಮುಖಂಡರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿರುವ ಕ್ರಮವನ್ನು ಪ್ರಶ್ನಿಸಿದ್ದರು. ಅಲ್ಲದೆ, ಕೋರ್ಟ್​ ವಿಚಾರಣೆ ವೇಳೆ ನ್ಯಾಯಾಧೀಶರಿಗೆ ಮಧ್ಯದ ಬೆರಳು ಪ್ರದರ್ಶಿಸಿ ಅಸಭ್ಯ ವರ್ತನೆ ತೋರಿರುವುದಾಗಿ ಆರೋಪಿಸಲಾಗಿತ್ತು. ಆದರೆ, ಕೋರ್ಟ್​ಗೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ಈ ಆರೋಪವನ್ನು ಅವರು ಅಲ್ಲಗಳೆದಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ನ್ಯಾಯಾಲಯ ನ್ಯಾಯಾಂಗ ನಿಂದನೆ ವಿಚಾರಣೆಯನ್ನೂ ಆರಂಭಿಸಿದೆ.
ಇದನ್ನೂ ಓದಿ:ರಾಷ್ಟ್ರೀಯ ಶಿಕ್ಷಣ ನೀತಿ ಕೇಂದ್ರದೊಂದಿಗೆ ರಾಜ್ಯದಲ್ಲೂ ಜಾರಿಗೆ; ಸಚಿವ ಅಶ್ವತ್ಥನಾರಾಯಣ ಘೋಷಣೆ
ತಮ್ಮನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದ ಸಂಗತಿಯನ್ನು ಫೇಸ್​ಬುಕ್​ನಲ್ಲಿ ಹೇಳಿಕೊಂಡಿದ್ದ ಬೃಂದಾ, ಸೋನಿಯಾ ಫೈರೆಂಬಮ್​ ಮತ್ತು ತೆನಾವ್​ ಹಾಗೂ ನನ್ನನ್ನು ತಡರಾತ್ರಿ 12.40ರಲ್ಲಿ ಇಂಫಾಲಾ ಪಶ್ಚಿಮ ಪೊಲೀಸರು ಲಾಕ್​ಡೌನ್​ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ವಶಕ್ಕೆ ಪಡೆದುಕೊಂಡಿದ್ದರು. ಲಾಕ್​ಡೌನ್​ ನಿಯಮ ಉಲ್ಲಂಘನೆಗೆ ಅಗತ್ಯ ಜುಲ್ಮಾನೆ ಭರಿಸುವುದಾಗಿಯೂ, ಹೆಣ್ಣುಮಕ್ಕಳಾಗಿರುವುದರಿಂದ ಅವರನ್ನು ಠಾಣೆಯಲ್ಲಿ ಇರಿಸಿಕೊಳ್ಳದೆ ಬಿಡುಗಡೆ ಮಾಡುವಂತೆ ನನ್ನ ಪತಿ ಹೇಳಿದರೂ ಬಿಡಲಿಲ್ಲ. ಲಾಂಫೆಲ್​ ಪೊಲೀಸರು ತಮ್ಮನ್ನು ಬಂಧಿಸಲು ಬರುತ್ತಿರುವುದಾಗಿ ಹೇಳಲಾಯಿತು. ಈ ಸಂದರ್ಭದಲ್ಲಿ ಸಮವಸ್ತ್ರಧಾರಿ ಪೊಲೀಸರು ನಮ್ಮನ್ನು ಸುತ್ತುವರಿದಿದ್ದರು ಎಂದು ವಿವರಿಸಿದ್ದರು.
ತಮ್ಮನ್ನು ಏಕೆ ಬಂಧಿಸಲಾಗುತ್ತಿದೆ, ತಮ್ಮ ಮೇಲಿರುವ ಆರೋಪಗಳನ್ನು ತಿಳಿಸುವಂತೆ ಕೋರಿದರೂ ಪೊಲೀಸರು ಮಾಹಿತಿ ನೀಡಲಿಲ್ಲ. ನಮ್ಮ ಹೇಳಿಕೆ, ಭಾವಚಿತ್ರಗಳನ್ನು ತೆಗೆದುಕೊಂಡು ಎರಡು ಗಂಟೆಗಳ ಬಳಿಕ ನಮ್ಮನ್ನು ಬಿಟ್ಟುಕಳುಹಿಸಲಾಯಿತು. ಬಹುಶಃ ಮಾದಕವಸ್ತು ಸಾಗಣೆದಾರರು ತಮ್ಮನ್ನು ಹಿಂಬಾಲಿಸುತ್ತಿರಬಹುದು ಎಂದು ಆವರು ಮತ್ತೊಂದು ಪೋಸ್ಟ್​ನಲ್ಲಿ ಆರೋಪಿಸಿದ್ದರು.
ಈ ಬಗ್ಗೆ ಮಂಗಳವಾರ ಸ್ಪಷ್ಟನೆ ನೀಡಿದ್ದ ಇಂಫಾಲಾದ ಐಜಿಪಿ ಕೆ. ಜಯಂತ, ಪೊಲೀಸರು ಬೃಂದಾ ಅವರ ಮೇಲೆ ನಿಗಾ ಇರಿಸಿಲ್ಲ. ಅವರನ್ನು ಹಿಂಬಾಲಿಸುತ್ತಲೂ ಇಲ್ಲ. ಅವರ ವಿರುದ್ಧ ಪ್ರತೀಕಾರದ ಕ್ರಮ ಕೈಗೊಳ್ಳುವ ಯಾವುದೇ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದರು.
video/ ಮಹಿಳೆಯರ ಬಟ್ಟೆ, ಚಪ್ಪಲಿಯೇ ಇವನಿಗಿಷ್ಟ.. ರಾತ್ರಿ ವೇಳೆ ಬರ್ತಾನೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 3 =
Remember me
