ಮಣಿಪುರ:ಹೊಸ ಹಿಂಸಾಚಾರ ಪ್ರಕರಣ ಭುಗಿಲೆದ್ದ ಬೆನ್ನಲ್ಲೇ ಸೌದೆ ಸಂಗ್ರಹಿಸಲು ಕಾಡಿಗೆ ತೆರಳಿದ್ದ ನಾಲ್ವರಲ್ಲಿ ಮೂವರು ನಾಪತ್ತೆಯಾದ ಘಟನೆ ಜನಾಂಗೀಯ ಗಲಭೆ ಪೀಡಿತ ಮಣಿಪುರದಲ್ಲಿ ಸಂಭವಿಸಿದೆ. ಇದೀಗ ಬಂದಿರುವ ವರದಿ ಪ್ರಕಾರ, ಆ ಮೂವರು ಇಂದು ಚುರಾಚಂದ್‌ಪುರ ಜಿಲ್ಲೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಇದನ್ನೂ ಓದಿ:ಬುದ್ನಿ ಗ್ರಾಮಕ್ಕೆ ಬಸ್ ಸಂಚಾರ ಆರಂಭ
ಬಿಷ್ಣುಪುರ ಜಿಲ್ಲೆಯ ಅಕಾಸೋಯ್‌ನ ನಾಲ್ವರು ಬುಧವಾರ ಮಧ್ಯಾಹ್ನ ಚುರಾಚಂದ್‌ಪುರದ ಸಮೀಪದ ಬೆಟ್ಟಗಳಲ್ಲಿ ಸೌದೆ ಸಂಗ್ರಹಿಸಲು ತೆರಳಿದಾಗ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ. ಇಬೊಮ್ಚಾ ಸಿಂಗ್ (51), ಅವರ ಮಗ ಆನಂದ್ ಸಿಂಗ್ (20) ಮತ್ತು 38 ವರ್ಷದ ರೋಮೆನ್ ಸಿಂಗ್  ಶವವಾಗಿ ಪತ್ತೆಯಾಗಿದ್ದಾರೆ.
ಮೃತದೇಹಗಳು ಹಾತಕ್ ಫೈಲೆನ್ ಬಳಿ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದು, ಮತ್ತೊಬ್ಬ ವ್ಯಕ್ತಿ ದಾರಾ ಸಿಂಗ್ ಎಂಬುವವರು ನಾಪತ್ತೆಯಾಗಿದ್ದಾರೆ. ಅವರಿಗಾಗಿ ಶೋಧ ನಡೆಯುತ್ತಿದೆ. ನಾಲ್ವರಲ್ಲಿ ಮೂವರು ವ್ಯಕ್ತಿಗಳನ್ನು ಭಯೋತ್ಪಾದಕರು ಕೊಂದಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ:ಜ.12ರಂದು ಮಂಡ್ಯ ನಗರದಲ್ಲಿ ನೇರ ಸಂದರ್ಶನ: ಆರು ಸಂಸ್ಥೆಗಳ ಪ್ರತಿನಿಧಿಗಳು ಭಾಗಿ
ಮಣಿಪುರದಲ್ಲಿ ಬುಧವಾರ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಬಿಷ್ಣುಪುರ ಜಿಲ್ಲೆಯಲ್ಲಿ ಗುಂಡಿನ ದಾಳಿ ನಡೆದಿದೆ. ಬಿಷ್ಣುಪುರದ ಕುಂಬಿ ಮತ್ತು ತೌಬಲ್‌ನ ವಾಂಗೂ ನಡುವೆ ಗುಂಡಿನ ದಾಳಿ ಸಂಭವಿಸಿದೆ. ಸ್ಥಳೀಯ ವರದಿಗಳ ಪ್ರಕಾರ, ಸಣ್ಣ ಬಂದೂಕುಗಳಿಂದ ಗುಂಡು ಹಾರಿಸುವ ಮೊದಲು ಆರು ಸುತ್ತಿನ ಮಾರ್ಟರ್ ಫೈರಿಂಗ್ ನಡೆದಿದೆ ಎಂದು ವರದಿಯಾಗಿದೆ,(ಏಜೆನ್ಸೀಸ್).
ಶೆಫ್ ಆಗಿ ಪೃಥ್ವಿ ಅಂಬಾರ್! ಈ ಚಿತ್ರ ‘ದಿಯಾ’ ಮುಂದುವರಿದ ಭಾಗವೇ? ಇಲ್ಲಿದೆ ಮಾಹಿತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 17 =
Remember me
