ನವದೆಹಲಿ:ಕರೊನಾ ವೈರಸ್​ ಹೆಸರಿನಲ್ಲಿ ಯುವತಿಗೆ ಜನಾಂಗೀಯ ನಿಂದನೆ ಮಾಡಿದ ವ್ಯಕ್ತಿಯ ವಿರುದ್ಧ ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ.
ಮಣಿಪುರ ಮೂಲದ ಯುವತಿಯೋರ್ವಳು ದೆಹಲಿಯ ವಿಜಯ ನಗರಕ್ಕೆ ತೆರಳುತ್ತಿದ್ದಳು. ಅಲ್ಲಿಗೆ ಬೈಕ್​ನಲ್ಲಿ ಬಂದವನೋರ್ವ ಆಕೆಯನ್ನು ‘ಕರೊನಾ’ ಎಂದು ಕರೆದಿದ್ದಾನೆ. ಅಷ್ಟೇ ಅಲ್ಲದೆ, ಆಕೆಯ ಮೈಮೇಲೆ ತನ್ನ ಬಾಯಲ್ಲಿದ್ದ ತಂಬಾಕನ್ನು (ಗುಟ್ಖಾ) ಉಗುಳಿದ್ದಾನೆ ಎನ್ನಲಾಗಿದೆ.
ಆತ ಬಾಯಲ್ಲಿದ್ದ ತಂಬಾಕನ್ನು ಯುವತಿಯ ಟಿ-ಶರ್ಟ್​ ಮೇಲೆ ಉಗುಳಿರುವಂತಹ ಫೋಟೋಗಳೂ ವೈರಲ್​ ಆಗುತ್ತಿವೆ. ಈಶಾನ್ಯ ದೆಹಲಿಯ ಅನೇಕ ಸಾಮಾಜಿಕ ಹೋರಾಟಗಾರರು ಇದನ್ನು ಜನಾಂಗೀಯ ನಿಂದನೆ ಎಂದು ಕರೆದಿದ್ದಾರೆ. ಆ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಕರೊನಾ ವೈರಸ್ ಎಂಬುದು ಜಗತ್ತಿಗೇ ಮಾರಕವಾಗಿ ಪರಿಣಮಿಸಿದೆ. ಭಾರತದಲ್ಲಿ 400ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. ಸುಮಾರು 7 ಮಂದಿ ಮೃತಪಟ್ಟಿದ್ದಾರೆ. (ಏಜೆನ್ಸೀಸ್​)


ವಿಮಾನದ ಮಧ್ಯದ ಸೀಟಿನಲ್ಲಿ ಯಾರೂ ಕೂರುವಂತಿಲ್ಲ; ಕರೊನಾ ತಡೆಗಾಗಿ ಹೆಚ್ಚಿದ ಸುರಕ್ಷತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 1 =
Remember me
