ನವದೆಹಲಿ:ದೆಹಲಿ ಮುಖ್ಯಮಂತ್ರಿಯಾಗಿ ಅರವಿಂದ ಕೇಜ್ರಿವಾಲ ಅವರು ಇನ್ನೇನು ಕೆಲ ಹೊತ್ತಲ್ಲೇ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ದೆಹಲಿಯ ರಾಮ್​ಲೀಲಾ ಮೈದಾನದಲ್ಲಿ ಕಾರ್ಯಕ್ರಮ ಆರಂಭವಾಗಿದೆ.
ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಮನೀಷ್​ ಸಿಸೋಡಿಯ, ಈ ಹಿಂದಿನ ಸಚಿವ ಸಂಪುಟವನ್ನು ಮುಂದುವರಿಸುವ ಅರವಿಂದ ಕೇಜ್ರಿವಾಲ ಅವರ ತೀರ್ಮಾನದಲ್ಲಿ ತಪ್ಪೇನಿದೆ? ಹಿಂದಿನ ಸಂಪುಟದ ಕೆಲಸ ನೋಡಿಯೇ ಜನ ನಮ್ಮನ್ನು ಮತ್ತೆ ಆಯ್ಕೆ ಮಾಡಿದ್ದಾರೆ. ನಾವು ಜನರ ಭರವಸೆಯನ್ನು ಮತ್ತೊಮ್ಮೆ ಈಡೇರಿಸಲು ಬದ್ಧರಿದ್ದೇವೆ ಎಂದರು.
ರಾಮ್​ ಲೀಲಾ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಸಾರ್ವಜನಿಕರು ಆಗಮಿಸುತ್ತಿದ್ದಾರೆ. ಅದರಲ್ಲೊಬ್ಬ ವಿಶೇಷ ಉಡುಪು ತೊಟ್ಟು ಗಮನ ಸೆಳೆದಿದ್ದಾನೆ. ನವಿಲು ಗರಿಗಳ ತರಹ ಪುಕ್ಕಗಳನ್ನು ಅಂಟಿಸಿಕೊಂಡಿರುವ ಆತ, ಪ್ರತಿ ಗರಿಯಲ್ಲೂ ಕೇಜ್ರಿವಾಲ್​ ಅವರ ಫೋಟೋ ಹಾಕಿಕೊಂಡಿದ್ದಾನೆ.(ಏಜೆನ್ಸೀಸ್​)
#WATCHDelhi: An Aam Aadmi Party fan Uday Veer arrives at Ramlila Maidan for Chief Minister-designate Arvind Kejriwal's swearing-in ceremony.pic.twitter.com/X3Ox5NTf2j
— ANI (@ANI)February 16, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − three =
Remember me
