ನವದೆಹಲಿ:ನೇಪಾಳ ಮೂಲದ ಬಾಲಿವುಡ್​ನ ಹಿರಿಯ ನಟಿ ಮನೀಷಾ ಕೊಯಿರಾಲಾ ಭಾರತದ ವಿವಾದಾತ್ಮಕ ಪ್ರದೇಶಗಳನ್ನು ಸೇರಿಸಿಕೊಂಡು ನೇಪಾಳ ಸಿದ್ಧಪಡಿಸಿರುವ ಪರಿಷ್ಕೃತ ನಕ್ಷೆಯನ್ನು ಬೆಂಬಲಿಸಿದ್ದಾರೆ. ಇದು ಭಾರತೀಯ ನೆಟ್ಟಿಗರನ್ನು ಕೆರಳಿಸಿದೆ.
ಲಡಾಖ್​ ಬಳಿಯ ಲಿಪುಲೇಖ್​, ಲಿಂಪಿಯಾಧುರಾ ಮತ್ತು ಕಾಲಾಪಾನಿ ಪ್ರದೇಶಗಳು ಭಾರತಕ್ಕೆ ಸೇರಿದ್ದಾದರೂ, ಈ ಪ್ರದೇಶಗಳು ತಮ್ಮದೆಂದು ಹೇಳಿಕೊಂಡು ನೇಪಾಳದ ಪ್ರಧಾನಿ ಕೆ.ಪಿ. ಶರ್ಮ ಓಲಿ ಪರಿಷ್ಕೃತ ನಕ್ಷೆ ಸಿದ್ಧಪಡಿಸಿ ಸಂಸತ್​ನ ಎರಡೂ ಮನೆಗಳಲ್ಲಿ ಅನುಮೋದನೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ:ಪತಂಜಲಿಯ ಕರೊನಾ ಕಿಟ್​ನ ದರ 545 ರೂಪಾಯಿ
ಈ ಬಗ್ಗೆ ಹರ್ಷ ವ್ಯಕ್ತಪಡಿಸಿ ಟ್ವೀಟ್​ ಮಾಡಿರುವ ಮನೀಷಾ ಕೊಯಿರಾಲಾ, ಚಿಕ್ಕ ರಾಷ್ಟ್ರದ ಗೌರವ ಮತ್ತು ಘನತೆ ಎತ್ತಿಹಿಡಿದಿದ್ದಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ.
Thank you for keeping the dignity of our small nation..we all are looking forward for a peaceful and respectful dialogue between all three great nations now 🙏https://t.co/A60BZNjgyK
— Manisha Koirala (@mkoirala)May 18, 2020

ಆದರೆ, ನೇಪಾಳದ ಪರಿಷ್ಕೃತ ನಕ್ಷೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಪರಿಷ್ಕೃತ ನಕ್ಷೆಯಲ್ಲಿ ಸೇರ್ಪಡೆಗೊಳಿಸಿರುವ ಎಲ್ಲ ಪ್ರದೇಶಗಳು ಭಾರತಕ್ಕೆ ಸೇರಿದ್ದು. ಈ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಭಾರತ ಪ್ರತಿಪಾದಿಸುತ್ತಿದೆ.ಈ ಹಿನ್ನೆಲೆಯಲ್ಲಿ ಮನೀಷಾ ಕೊಯಿರಾಲಾ ಅವರ ಟ್ವೀಟ್​ನಿಂದ ಸಿಟ್ಟಿಗೆದ್ದಿರುವ ಭಾರತದ ಟ್ವೀಟಿಗರು ಮನೀಷಾ ಅವರನ್ನು ಸಿಕ್ಕಾಪಟ್ಟೆ ಟ್ರೋಲ್​ ಮಾಡಿದ್ದಾರೆ.
ಕರೊನಾ ಆತಂಕದಲ್ಲಿ ಕಿಚ್ಚ ಸುದೀಪ್​!; ಇಡೀ ರಸ್ತೆ ಸೀಲ್​ಡೌನ್​, ವ್ಯಾಪಾರ ವಹಿವಾಟು ನಿರ್ಬಂಧ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 9 =
Remember me
