ಕೊಚ್ಚಿ:ಸೀರಿಯಲ್​ ನಟಿಯರೊಂದಿಗೆ ವೇದಿಕೆ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ ಎಂದು ಸಾರ್ವಜನಿಕವಾಗಿ ಹೇಳಿದ ರಾಜಕಾರಣಿಗೆ ಮಲಯಾಳಂ ನಟಿ ಮಂಜು ಪಾಥ್ರೋಸ್​ ಅವರು ಖಡಕ್​ ಆಗಿ ತಿರುಗೇಟು ನೀಡಿದ್ದಾರೆ.
ಈ ಘಟನೆ ಪೆರುಂಪಿಲವಿನಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ನಟಿ ಮಂಜು ಪಾಥ್ರೋಸ್​ ಬೆಂಬಲಕ್ಕೆ ನಿಂತಿದ್ದಾರೆ.
ಇದಕ್ಕೂ ಮುಂಚೆ ಇದೇ ವೇದಿಕೆಯಲ್ಲಿ ರಾಜಕಾರಣಿಯೊಬ್ಬರು ಮಾತನಾಡಿದರು. ಸೀರಿಯಲ್​ ನಟಿಯರೊಂದಿಗೆ ವೇದಿಕೆ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ ಮತ್ತು ಅವರ ಕಾರ್ಯಕ್ರಮಗಳನ್ನು ನೋಡಲು ಬಯಸುವುದಿಲ್ಲ ಎಂದು ಹೇಳಿದರು. ನನಗೆ ಅರ್ಥವಾಗದ ಒಂದು ವಿಷಯವೆಂದರೆ ಸರ್ ನಮ್ಮನ್ನು ಏಕೆ ನೀವು ಇಷ್ಟಪಡುವುದಿಲ್ಲ. ಅದು ನಮ್ಮ ನಟನೆಯ ಕಾರಣದಿಂದಲೂ ಅಥವಾ ಧಾರಾವಾಹಿಗಳನ್ನು ನೋಡದ ಕಾರಣದಿಂದಲೋ. ಕಾರಣ ಏನೇ ಇರಬಹುದು ಇದೊಂದು ವೃತ್ತಿಪರ ಕ್ಷೇತ್ರ. ನಟನೆ ಕೂಡ ಒಂದು ವೃತ್ತಿ. ನಾವು ವೇದಿಕೆಗೆ ಬಂದಾಗ ಯಾರೋಬ್ಬರು ನಾಚಿಕೆಯಿಂದ ತಲೆತಗ್ಗಿಸಬೇಕಾಗಿಲ್ಲ. ಯಾವುದೇ ಕ್ಷೇತ್ರದಲ್ಲಿ ಮುಂದೆ ಸಾಗುವುದು ಸುಲಭವಲ್ಲ. ಸರ್​ ನೀವೊ ಒಬ್ಬ ರೈತ ಎಂಬುದನ್ನು ಮರೆಯದಿರಿ. ಇಷ್ಟನ್ನು ಹೇಳೋಕೆ ಇಷ್ಟಪಡುತ್ತೇನೆ ಎಂದು ಮಂಜು ಪಥ್ರೋಸ್​ ಹೇಳಿದ್ದಾರೆ.
ಇದನ್ನೂ ಓದಿ:1200 ರೂ. ಬೆಲೆಯ ಐಪಿಎಲ್​​ ಟಿಕೆಟ​​ನ್ನು 8 ಸಾವಿರಕ್ಕೆ ಪೊಲೀಸರೇ ಮಾರುತ್ತಿದ್ದಾರೆ; ಆರ್​ಸಿಬಿ ಅಭಿಮಾನಿಗಳ ಆಕ್ರೋಶ
ಇದೇ ವೇಳೆ ಸೀರಿಯಲ್​ ನಟಿ ಸಾಜನ್​ ಸೂರ್ಯ ಅವರು ಮಂಜು ಪಾಥ್ರೋಸ್​ ಅವರ ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ನಟಿಯರನ್ನು ಅವಮಾನಿಸುವಂತ ಹೇಳಿಕೆ ನೀಡಿದ ರಾಜಕಾರಣಿಗೆ ನಯವಾಗಿಯೇ ತಿರುಗೇಟು ನೀಡಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.(ಏಜೆನ್ಸೀಸ್​)
1200 ರೂ. ಬೆಲೆಯ ಐಪಿಎಲ್​​ ಟಿಕೆಟ​​ನ್ನು 8 ಸಾವಿರಕ್ಕೆ ಪೊಲೀಸರೇ ಮಾರುತ್ತಿದ್ದಾರೆ; ಆರ್​ಸಿಬಿ ಅಭಿಮಾನಿಗಳ ಆಕ್ರೋಶ

ಮುಸ್ಲಿಂ ಯುವಕನನ್ನು ಮದುವೆಯಾಗಲಿದ್ದಾಳೆ ಬಿಜೆಪಿ ಮುಖಂಡನ ಮಗಳು!

ಕಾಂಗ್ರೆಸ್​ನ ನಿಜ ಮುಖ ಬಯಲಾಗಿದೆ: ಬಿ.ವೈ. ವಿಜಯೇಂದ್ರ ವಾಗ್ದಾಳಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
