ಕೊಚ್ಚಿನ್​:ಹಲವು ಪ್ರಶಸ್ತಿ ಪುರಸ್ಕೃತ ಪ್ರಸಿದ್ದ ಫಿಲ್ಮ್​ಮೇಕರ್​ ಸನಲ್​ ಕುಮಾರ್​ ಶಶಿಧರನ್​​ ಅವರನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ. ನಟಿ ಮಂಜು ವಾರಿಯರ್​ ನೀಡಿದ ದೂರಿನ ಮೇರೆಗೆ ಅವರ ನಿವಾಸಕ್ಕೆ ತೆರಳಿ ಬಂಧಿಸಲಾಗಿದೆ.
ತಿರುವನಂತಪುರಂನಲ್ಲಿರುವ ಸನಾಲ್ (45) ನಿವಾಸದಲ್ಲಿ ಬಂಧಿಸಿ, ಕೊಚ್ಚಿನ್​ಗೆ ಕರೆತರಲಾಗಿದೆ. ಕೊಚ್ಚಿನ್​ನಲ್ಲೇ ದೂರು ದಾಖಲಾಗಿರುವುದರಿಂದ ಪ್ರಕರಣದ ವಿಚಾರಣೆಗೆ ಅವರನ್ನು ಇಲ್ಲೇ ಕರೆತರಲಾಗಿದೆ.
ಯಾವ ಕಾರಣಕ್ಕೆ ಸನಾಲ್​ ಅವರನ್ನು ಬಂಧಿಸಲಾಗಿದೆ. ಮಂಜು ವಾರಿಯರ್​ ನೀಡಿರುವ ದೂರಿನಲ್ಲಿ ಏನಿದೆ ಎಂಬುದೇ ಕುತೂಹಲ ಮೂಡಿಸಿದ್ದು ಕಾರಣ ಇಲ್ಲಿದೆ.
ಇತ್ತೀಚೆಗೆ ಫೇಸ್​ಬುಕ್​ ಪೋಸ್ಟ್​ ಮಾಡಿದ್ದ ಸನಲ್​ , ಮಂಜು ವಾರಿಯರ್​ ಜಿವಕ್ಕೆ ಅಪಾಯವಿದೆ. ಅವಳು ತನ್ನ ಹತ್ತಿರದ ಜನರಿಮದಲೇ ಅಪಾಯವನ್ನು ಎದುರಿಸುತ್ತಿದ್ದಾಳೆ. ಅವಳು ಕೆಲವರ ವಶದಲ್ಲಿದ್ದಾಳೆ. ಮಂಜುಗೆ ಏನಾದರೂ ತೊಂದರೆಯಾದರೆ ಆಕೆಯ ಮ್ಯಾನೇಜರ್​ಗಳಾದ ಬಿನೀಶ್​ ಚಂದ್ರನ್​ ಮತ್ತು ಬಿನು ನಾಯರ್​ ಜವಾಬ್ದಾರರು ಎಂದು ಹೆಸರು ಪ್ರಸ್ತಾಪಿಸಿ ಆರೋಪಿಸಿದ್ದರು. ಇದೀಗ ಈ ಪೋಸ್ಟ್​​ ಸನಲ್​ಗೆ ಮುಳುವಾಗಿದೆ.
ಬೇಟೆಯಾಡಿದ್ದ ಜಿಂಕೆ ಮಾಂಸದ ಸಮೇತ ಸಿಕ್ಕಿಬಿದ್ದ ಐವರು! 2 ನಾಡಬಂದೂಕು ವಶ

ದೇವರು ಇಲ್ಲ ಎಂದೂ ಹೇಳಲ್ಲ, ಇದ್ದಾನೆ ಎಂದೂ ಹೇಳಲ್ಲ, ಆದರೆ ಎಲ್ಲಾ ಧರ್ಮಕ್ಕಿಂತ ಮನುಷ್ಯ ಧರ್ಮ ಶ್ರೇಷ್ಠ: ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − four =
Remember me
