ನವದೆಹಲಿ:ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಭಾನುವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮ ಪ್ರಸಾರದ ವೇಳೆ ತಟ್ಟೆ, ಹಲಗೆ, ಡಬ್ಬಗಳನ್ನು ಬಡಿದು, ಘೋಷಣೆಗಳನ್ನು ಕೂಗುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮನ್ ಕೀ ಬಾತ್ ಪ್ರಸಾರದ ವೇಳೆ ಥಾಲಿ ಬಜಾವ್ (ತಟ್ಟೆ ಬಾರಿಸಿ) ಪ್ರತಿಭಟನೆ ನಡೆಸುವುದಾಗಿ ರೈತ ಸಂಘಟನೆಗಳು ಕಳೆದ ಭಾನುವಾರವೇ ಘೋಷಿಸಿದ್ದವು.
ಮೋದಿಯವರೆ ನಿಮ್ಮ ಮನ್ ಕೀ ಬಾತ್ ಅನ್ನು ಕೇಳಿ ನಮಗೆ ಸಾಕಾಗಿದೆ, ನೀವು ನಮ್ಮ ಮನ್ ಕೀ ಬಾತ್ ಅನ್ನು ಎಂದು ಕೇಳುತ್ತೀರಿ? ನಿಮ್ಮ ಕಾರ್ಯಕ್ರಮ ನಮಗೆ ಕೇಳದಂತೆ ತಟ್ಟೆ ಬಡಿದು ಶಬ್ದ ಮಾಡುತ್ತೇವೆ ಎಂದು ರೈತ ಸಂಘಟನೆಗಳು ಹೇಳಿದ್ದವು. ಈ ಮಧ್ಯೆ, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ರೈತರು ಪ್ರತಿಭಟನೆ ನಡೆಸುತ್ತಿರುವ ಸಿಂಘು ಗಡಿಗೆ 2ನೇ ಬಾರಿ ಭೇಟಿ ನೀಡಿದ್ದರು. ಹೊಸ ಕಾಯ್ದೆಗಳ ಮೂಲಕ ರೈತರ ಭೂಮಿ ಕಬಳಿಸಿ, ಬಂಡವಾಳಶಾಹಿಗಳಿಗೆ ನೀಡಲು ಸರ್ಕಾರ ಬಯಸಿದೆ ಎಂದಿದ್ದಾರೆ.
ರಾಹುಲ್ ಜೀ, ನೀವು ಹಿಂದೆ ಪ್ರತಿಪಾದಿಸುತ್ತಿದ್ದ ಅಂಶಗಳನ್ನು ಈಗ ವಿರೋಧಿಸುತ್ತಿದ್ದೀರಿ. ನಿಮಗೆ ದೇಶದ ಅಥವಾ ರೈತರ ಹಿತಾಸಕ್ತಿ ಬಗ್ಗೆ ಯಾವುದೇ ಕಾಳಜಿ ಇಲ್ಲ. ಕೇವಲ ರಾಜಕೀಯ ಮಾಡಲು ಬಯಸುತ್ತೀರಿ. ನಿಮ್ಮ ಬೂಟಾಟಿಕೆ ಕೆಲಸ ಮಾಡುವುದಿಲ್ಲ. ಜನರು ಮತ್ತು ರೈತರು ನಿಮ್ಮ ದ್ವಂದ್ವ ಅರಿತುಕೊಂಡಿದ್ದಾರೆ.| ಜೆ.ಪಿ.ನಡ್ಡಾಬಿಜೆಪಿ ರಾಷ್ಟ್ರೀಯ ಅಧ್ಯಕ್ಷ
ಪಂಜಾಬ್ ವಕೀಲ ಆತ್ಮಹತ್ಯೆರೈತರು ಪ್ರತಿಭಟನೆ ನಡೆಸುತ್ತಿರುವ ಟಿಕ್ರಿ ಗಡಿ ಸಮೀಪದಲ್ಲಿ ಪಂಜಾಬ್ ಜಲಾಲಾಬಾದ್​ನ ವಕೀಲ ಅಮರ್​ಜಿತ್ ಸಿಂಗ್ ಭಾನುವಾರ ಆತ್ಮಹತ್ಯೆ ಮಾಡಿ ಕೊಂಡಿದಾರೆ. ‘ರೈತರ ಪ್ರತಿಭಟನೆ ಬೆಂಬಲಿಸಿ ಪ್ರಾಣಾರ್ಪಣೆ ಮಾಡುತ್ತಿದ್ದೇನೆ ಮಾರಕವಾದ ಕೃಷಿ ಕಾನೂನಿನ ಮೂಲಕ ರೈತರನ್ನು ವಂಚಿಸಲಾಗುತ್ತಿದೆ. ಪ್ರಧಾನಿಯವರೇ ಜನರ ಧ್ವನಿಗೆ ಕಿವಿಗೊಡಿ’ ಎಂದು ‘ಡೆತ್ ನೋಟ್’ನಲ್ಲಿ ಬರೆಯಲಾಗಿದೆ. ವಿಷ ಸೇವಿಸಿ ಅಸ್ವಸ್ಥರಾಗಿದ್ದ ಅಮರ್​ಜಿತ್​ರನ್ನು ಸ್ಥಳೀಯರು ರೋಹ್ಟಕ್​ನ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಪಿಜಿಐಎಂಎಸ್) ಕರೆದೊಯ್ದರಾದರೂ, ಮಾರ್ಗ ಮಧ್ಯೆ ಅವರು ಮೃತಪಟ್ಟಿದ್ದಾರೆ. ಪ್ರತಿಭಟನೆಯ ವೇಳೆ ಚಳಿ, ಅನಾರೋಗ್ಯ, ಇತರ ಕಾರಣಗಳಿಂದ ಸತ್ತವರ ಸಂಖ್ಯೆ 42ಕ್ಕೆ ಏರಿದೆ.
ಯಾವ ಜಯಂತಿನ್ಲಾ? ಹನುಮ ಹುಟ್ಟಿದ ತಾರೀಖು‌‌ ನಿನಗೆ ಗೊತ್ತಾ? ಸುಮ್ನೆ ಚಿಕನ್​ ತಿನ್ಲಾ: ಸಿದ್ದರಾಮಯ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + fourteen =
Remember me
